ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಬಾ ರಾಮ್‌ದೇವ್ ಕ್ಷಮೆಯಾಚಿಸದಿದ್ದರೆ 1000 ಕೋಟಿ ರೂ. ಮಾನನಷ್ಟ ಮೊಕದ್ದಮೆ: ಐಎಂಎ

|
Google Oneindia Kannada News

ನವದೆಹಲಿ, ಮೇ 26: ಅಲೋಪತಿ ವೈದ್ಯಕೀಯ ಪದ್ದತಿಯ ಬಗ್ಗೆ ಯೋಗಗುರು ಬಾಬಾ ರಾಮ್‌ದೇವ್ ಆಡಿದ ವಿವಾದಾತ್ಮಕ ಮಾತು ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಕೇಂದ್ರ ಸರ್ಕಾರದ ವರೆಗೂ ಈ ವಿಚಾರ ತಲುಪಿ ನಂತರ ಈ ಹೇಳಿಕೆಯನ್ನು ಕಳೆದ ಭಾನುವಾರ ಬಾಬಾ ರಾಮ್‌ದೇವ್ ವಾಪಾಸ್ ಪಡೆಯುವುದಾಗಿ ಹೇಳಿದ್ದರು. ಈ ಮಧ್ಯೆ ಯೋಗಗುರು ಬಾಬಾ ರಾಮ್‌ದೇವ್ ವಿರುದ್ಧ 1000 ಕೋಟಿ ಮೊತ್ತದ ಮಾನನಷ್ಟ ಮೊಕದ್ದಮೆಯ ನೋಟಿಸ್‌ಅನ್ನು ಉತ್ತರ ಪ್ರದೇಶದ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಕಳುಹಿಸಿದೆ.

ಈ ನೋಟಿಸ್‌ನಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಅಲೋಪತಿ ಮತ್ತು ಅಲೋಪತಿ ವೈದ್ಯರ ವಿರುದ್ಧ ಆಡಿದ ಅವಹೇಳನಕಾರಿ ಮಾತುಗಳಿಗೆ ಕ್ಷಮೆಯಾಚಿಸುವಂತೆ ಒತ್ತಾಯಿಸಿದೆ. ಇಲ್ಲವಾದರೆ 1000 ಕೋಟಿ ರೂಪಾಯಿಯ ಮಾನನಷ್ಟ ಮೊಕದ್ದಮೆಯನ್ನು ಹೂಡುವುದಾಗಿ ಎಚ್ಚರಿಸಿದೆ.

ವಿವಾದಾತ್ಮಕ ಹೇಳಿಕೆ ವಾಪಾಸ್ ಪಡೆದು 25 ಪ್ರಶ್ನೆ IMA ಮುಂದಿಟ್ಟ ರಾಮ್‌ದೇವ್ವಿವಾದಾತ್ಮಕ ಹೇಳಿಕೆ ವಾಪಾಸ್ ಪಡೆದು 25 ಪ್ರಶ್ನೆ IMA ಮುಂದಿಟ್ಟ ರಾಮ್‌ದೇವ್

ಉತ್ತರಾಖಂಡ್‌ನ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್‌ನ ಕಾರ್ಯದರ್ಶಿ ಅಜಯ್ ಖನ್ನಾ ಅವರ ಪರವಾಗಿ ವಕೀಲ ನೀರಜ್ ಪಾಂಡೆ ಈ ಆರು ಪುಟಗಳ ನೋಟಿಸ್ ನೀಡಿದ್ದಾರೆ. ಬಾಬಾ ರಾಮ್‌ದೇವ್ ಅವರ ಹೇಳಿಕೆಯಿಂದ ಅಲೋಪತಿಯ ಮತ್ತು ಇದರ ಭಾಗವಾಗಿರುವ 2000 ವೈದ್ಯರ ಖ್ಯಾತಿ ಮತ್ತು ಇಮೇಜ್‌ಗೆ ಧಕ್ಕೆಯಾಗಿದೆ ಎಂದು ವಿವರಿಸಿದೆ.

IMA send 1000 cr Defamation Notice to Yoga Guru Baba Ramdev

ಯೋಗಗುರು ಬಾಬಾ ರಾಮ್‌ದೇವ್ ಮಾಡಿದ ಟೀಕೆಗಳನ್ನು ಭಾರತೀಯ ದಂಡ ಸಂಹಿತೆಯ 499 ರ ಸೆಕ್ಷನ್ ಅಡಿಯಲ್ಲಿ "ಕ್ರಿಮಿನಲ್ ಆಕ್ಟ್" ಹೇಳಲಾಗಿದೆ. ನೋಟಿಸ್ ತಲುಪಿದ 15 ದಿನಗಳೊಳಗೆ ಬಾಬಾ ರಾಮ್‌ದೇವ್ ಲಿಖಿತವಾಗಿ ಕ್ಷಮೆಯಾಚನೆ ಮಾಡಬೇಕೆಂದು ಒತ್ತಾಯಿಸಿದೆ. ಇಲ್ಲವಾದರೆ ಐಎಂಎಯ ಪ್ರತಿ ಸದಸ್ಯರಿಗೆ 50 ಲಕ್ಷ ರೂಪಾಯಿಯಂತೆ 1000 ಕೋಟಿ ಪರಿಹಾರವನ್ನು ಕೋರಲಾಗುತ್ತದೆ ಎಂದು ನೋಟಿಸ್‌ನಲ್ಲಿ ತಿಳಿಸಿದೆ.

ಇದರ ಜೊತೆಗೆ ಬಾಬಾ ರಾಮ್‌ದೇವ್ ಸ್ಥಾಪಿಸಿದ ಪತಂಜಲಿ ಬಿಡುಗಡೆಗೊಳಿಸಿದ ಕೊರೊನಿಲ್ ಕಿಟ್ ಕೊರೊನಾ ವೈರಸ್‌ಗೆ ಪರಿಣಾಮಕಾರಿ ಔಷಧಿಯೆಂದು ಜನರನ್ನು ಹಾದಿತಪ್ಪಿಸುತ್ತಿದೆ ಎಂದು ಐಎಂಎ ಆರೋಪಿಸಿದೆ. ಇದರ ಜಾಹೀರಾತುಗಳನ್ನು ಎಲ್ಲಾ ವೇದಿಕೆಗಳಿಂದ ತೆಗೆಯಬೇಕು. ಇಲ್ಲವಾದರೆ ಎಫ್‌ಐಆರ್ ಹಾಗೂ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗುತ್ತದೆ ಎಂದು ಐಎಂಎ ತಿಳಿಸಿದೆ.

English summary
Indian Medical association send 1000 cr Defamation Notice to Yoga Guru Ramdev for Remarks Against Allopathy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X