ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತಯಂತ್ರದ ಬಗ್ಗೆ ಮೋದಿ ಸಭೆ ಕರೆದಿದ್ದರೆ ಬರುತ್ತಿದ್ದೆ: ಮಾಯಾ ವ್ಯಂಗ್ಯ

|
Google Oneindia Kannada News

ಲಕ್ನೋ, ಜೂನ್ 19: "ಪ್ರಧಾನಿ ನರೇಂದ್ರ ಮೋದಿ ಅವರು ಕರೆದ ಸರ್ವಪಕ್ಷಗಳ ಸಭೆ ಮತ ಯಂತ್ರದ ಕುರಿತಾದದ್ದಾಗಿದ್ದರೆ ನಾನೂ ಭಾಗವಹಿಸುತ್ತಿದ್ದೆ" ಎಂದು ಬಹುಜನ ಸಮಾಜ ಪಕ್ಷದ ನಾಯಕಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಹೇಳಿದ್ದಾರೆ.

"ಒಂದು ದೇಶ, ಒಂದು ಚುನಾವಣೆ" ಕುರಿತು ಚರ್ಚೆ ನಡೆಸಲು ಮತ್ತು 2022 ರಲ್ಲಿ ಮಹಾತ್ಮಾ ಗಾಂಧೀಜಿಯವರ 150 ನೇ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸುವ ಕುರಿತು ಎಲ್ಲ ಪಕ್ಷಗಳ ಸಲಹೆ, ಸೂಚನೆಗಳನ್ನು ಆಲಿಸಲು ಪ್ರಧಾನಿ ಮೋದಿ ಅವರು ಸಭೆ ಕರೆದಿದ್ದಾರೆ.

ಮೈತ್ರಿಗೆ ಗುಡ್ ಬೈ ಎಂದ ಮಾಯಾವತಿ: ಮೌನ ಮುರಿದ ಅಖಿಲೇಶ್ಮೈತ್ರಿಗೆ ಗುಡ್ ಬೈ ಎಂದ ಮಾಯಾವತಿ: ಮೌನ ಮುರಿದ ಅಖಿಲೇಶ್

ಆದರೆ ಈ ಸಭೆಗೆ ಹಾಜರಾಗುವುದಿಲ್ಲ ಎಮದಿರುವ ಮಾಯಾವತಿ, "ಜನರಿಗೆ ಇವಿಎಂ ಬಗ್ಗೆ ಅನುಮಾನವಿದೆ. ಬ್ಯಾಲೆಟ್ ಪೇಪರ್ ಬದಲಾಗಿ ಇವಿಎಂ ಮೂಲಕ ಚುನಾವಣೆ ಮಾಡುವುದು ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಬಹುದೊಡ್ಡ ಅಪಾಯ. ಆದ್ದರಿಂದ ಮತಯಂತ್ರದ ಬಗ್ಗೆ ಮಾತನಾಡಲು ಸಭೆ ಕರೆಯುವ ಅಗತ್ಯವಿದೆ. ಹಾಗೆ ಕರೆದರೆ ನಾನೂ ಸಭೆಗೆ ತೆರಳುತ್ತೇನೆ" ಎಮದು ಮಾಯಾವತಿ ವ್ಯಂಗ್ಯವಾಗಿ ನುಡಿದರು.

If PM Modis meeting on voting machine we would have attended: Mayawati

ಪ್ರಧಾನಿ ಮೋದಿ ನೇತೃತ್ವದ ಸರ್ವಪಕ್ಷ ಸಭೆಗೆ ಗೈರಾಗುವವರು ಯಾರ್ಯಾರು?ಪ್ರಧಾನಿ ಮೋದಿ ನೇತೃತ್ವದ ಸರ್ವಪಕ್ಷ ಸಭೆಗೆ ಗೈರಾಗುವವರು ಯಾರ್ಯಾರು?

ಸಭೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಡಿಎಂಕೆ ನಾಯಕ ಎಂಕೆ ಸ್ಟಾಲಿನ್ ಟಿಆರ್ ಎಸ್ ಮುಖಂಡ, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್, ಟಿಡಿಪಿ ನಾಯಕ ಎನ್ ಚಂದ್ರಬಾಬು ನಾಯ್ಡು, ತಾವು ಭಾಗವಹಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

English summary
BSP leader Mayawati about not attending PM Narendra Modi's all party meeting, "If PM's meeting was on voting machines, we would have attended it"
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X