ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೇಥಿಯಲ್ಲಿ ರಾಹುಲ್ ಸೋತರೆ ರಾಜಕೀಯದಿಂದ ನಿವೃತ್ತಿ:ಸಿಧು

|
Google Oneindia Kannada News

Recommended Video

Lok Sabha Elections 2019: ಅಮೇಥಿಯಲ್ಲಿ ಸೋಲು-ಗೆಲುವಿನ ಲೆಕ್ಕಾಚಾರ | Oneindia Kannada

ರಾಯ್ ಬರೇಲಿ, ಏ.29: ಒಂದೊಮ್ಮೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಮೇಥಿಯಲ್ಲಿ ಸೋತರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸಚಿವ ನವಜೋತ್ ಸಿಂಗ್ ಸಿಧು ಹೇಳಿಕೆ ನೀಡಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ರಾಜೀವ್​ ಗಾಂಧಿಯವರ ಹತ್ಯೆಯ ಬಳಿಕ ಕಾಂಗ್ರೆಸ್​ನ್ನು ಮುನ್ನಡೆಸಿದ ಸೋನಿಯಾ ಗಾಂಧಿಯವರನ್ನು ಹೊಗಳಿದ ಸಿಧು, ಸೋನಿಯಾ ಗಾಂಧಿಯವರಿಂದಾಗಿಯೇ ಕೇಂದ್ರದಲ್ಲಿ ಕಾಂಗ್ರೆಸ್​ ಮತ್ತೆ 10 ವರ್ಷ ಆಡಳಿತ ನಡೆಸಲು ಸಾಧ್ಯವಾಯಿತು ಎಂದರು.

ಪಾಕ್ ಸಮರ್ಥನೆ: ಸಿಧು ಹೇಳಿಕೆ ಬೆಂಬಲಿಸಿದ ಕಪಿಲ್ ಶರ್ಮಾಗೆ ಚಾಟಿ ಪಾಕ್ ಸಮರ್ಥನೆ: ಸಿಧು ಹೇಳಿಕೆ ಬೆಂಬಲಿಸಿದ ಕಪಿಲ್ ಶರ್ಮಾಗೆ ಚಾಟಿ

70 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್​ ಯಾವುದೇ ಅಭಿವೃದ್ಧಿ ನಡೆಸಿಲ್ಲ ಎಂದು ಪದೇಪದೆ ಆರೋಪ ಮಾಡುತ್ತಿರುವ ಬಿಜೆಪಿ ವಿರುದ್ಧ ಹರಿಹಾಯ್ದರು. ಒಂದು ಚಿಕ್ಕ ಸೂಜಿಯಿಂದ, ವಿಮಾನದವರೆಗಿನಷ್ಟು ಅಭಿವೃದ್ಧಿಯನ್ನು ಕಾಂಗ್ರೆಸ್​ ಅವಧಿಯಲ್ಲೇ ಮಾಡಲಾಗಿದೆ ಎಂದು ಹೇಳಿದರು.

I will quit politics if Rahul loses in Amethi Sidhu

ರಫೇಲ್​ ಯುದ್ಧ ವಿಮಾನ ಒಪ್ಪಂದದ ಹಗರಣವೇ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೋದಿಯವರ ಸೋಲಿಗೆ ಕಾರಣವಾಗುತ್ತದೆ ಎಂದು ಹೇಳಿದರು.

ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಕಾರಣ ಚುನಾವಣಾ ಆಯೋಗವು ನವಜೋತ್ ಸಿಂಗ್ ಸಿಧುಗೆ ಶಿಕ್ಷೆ ವಿಧಿಸಿದ್ದು, 72 ಗಂಟೆಗಳ ಕಾಲ ಪ್ರಚಾರ ಮಾಡದಂತೆ ತಡೆ ನೀಡಿತ್ತು.

ಪಂಜಾಬ್‌ ರಾಜ್ಯ ಸರ್ಕಾರ ಸಚಿವರಾಗಿರುವ ನವಜೋತ್ ಸಿಂಗ್ ಸಿಧು ಅವರು ಮುಸ್ಲಿಂ ಮತದಾರರ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದರು, ಹೇಳಿಕೆಯು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಆದ ಕಾರಣ ಅವರಿಗೆ ಶಿಕ್ಷೆ ವಿಧಿಸಲಾಗಿದೆ.

ಏಪ್ರಿಲ್ 16ರಂದು ಬಿಹಾರದ ಕತಿಯಾರ್‌ನಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ನವಜೋತ್ ಸಿಂಗ್ ಸಿಧು ಅವರು ಮುಸ್ಲಿಂ ಮತದಾರರ ಮತವಿಭಜನೆ ಮಾಡುವ ಬಗ್ಗೆ ಮಾತನಾಡಿದ್ದರು, ಮತ್ತು ಒಟ್ಟಾಗಿ ಮತ ಚಲಾಯಿಸಿ ನರೇಂದ್ರ ಮೋದಿ ಅವರನ್ನು ಸೋಲಿಸಬೇಕು ಎಂದಿದ್ದರು. ಇದು ಆಯೋಗದ ಕಣ್ಣು ಕೆಂಪಗೆ ಮಾಡಿತ್ತು.

English summary
Cricketer-turned-politician Navjot Singh Sidhu on Sunday said people should learn nationalism from UPA chairperson Sonia Gandhi, who is the sitting MP from Rae Bareli.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X