ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೆದ್ದ ಎರಡು ವಾರದಲ್ಲಿ ಸಂಸದನ ಸ್ಥಾನ ತ್ಯಜಿಸುವ ಮಾತನಾಡಿದ ಆಜಂ ಖಾನ್!

|
Google Oneindia Kannada News

ಲಕ್ನೋ, ಜೂನ್ 03: ಇತ್ತೀಚೆಗಷ್ಟೇ ಸಂಸದರಾಗಿ ಆಯ್ಕೆಯಾದ ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್ ಅವರು ತಾವು ಸಂಸದ ಸ್ಥಾನವನ್ನು ತೊರೆಯುವುದಾಗಿ ಹೇಳಿದ್ದಾರೆ.

ಉತ್ತರ ಪ್ರದೇಶದ ರಾಮ್ಘರ್ ಸಂಸದ ಆಜಂ ಖಾನ್ ಅವರು ಬಿಜೆಪಿ ನಾಯಕಿ ಜಯಪ್ರದಾ ಅವರ ವಿರುದ್ಧ ಗೆಲುವು ಸಾಧಿಸಿದ್ದರು.

ಖಾಕಿ ಚಡ್ಡಿಯಂತೆ ಗೋಡ್ಸೆಯೂ RSS ಗುರುತು: ಆಜಂ ಖಾನ್ಖಾಕಿ ಚಡ್ಡಿಯಂತೆ ಗೋಡ್ಸೆಯೂ RSS ಗುರುತು: ಆಜಂ ಖಾನ್

ಉತ್ತರ ಪ್ರದೇಶದದಲ್ಲಿ ವೈದ್ಯರ ಸಮಸ್ಯೆ ಇದೆ. ಇಲ್ಲಿ ಸಾಕಷ್ಟು ಸಮಸ್ಯೆ ಇದೆ. ನಾನು ಸಂಸತ್ತಿನಲ್ಲಿ ಹೋಗಿ ಕೂರುವುದಕ್ಕೆ ಸಾಧ್ಯವಾಗುತ್ತಿಲ್ಲ. ರಾಜ್ಯದಲ್ಲೇ ಜನರ ಸೇವೆ ಮಾಡಲು ನಾನು ಚಿಂತನೆ ನಡೆಸುತ್ತಿದ್ದೇನೆ. ಆದ್ದರಿಂದ ನಾನು ನನ್ನ ಸಂಸತ್ ಸದಸ್ಯ ಸ್ಥಾನವನ್ನು ಬಿಡುತ್ತೇನೆ. ನಂತರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತೇನೆ" ಎಂದು ಆಜಂ ಖಾನ್ ಹೇಳಿದರು.

I will quit Parliament saus Azam Khan

"ಕೆಲವರು ನನ್ನ ಮೇಲೆ ಈಗಾಗಲೇ ಸಾಕಷ್ಟು ಕೇಸುಗಳನ್ನು ದಾಖಲಿಸಿದ್ದಾರೆ. ನನ್ನ ಹತ್ಯೆಗೂ ಸಾಕಷ್ಟು ಪ್ರಯತ್ನಗಳು ನಡೆದಿದ್ದವು. ನನ್ನನ್ನು ಎನ್ ಕೌಟರ್ ಮಾಡಿ ಸಾಯಿಸುವ ಪಿತೂರಿಯೂ ನಡೆದಿತ್ತು. ಅತೀ ಹೆಚ್ಚು ಕ್ರಿಮಿನಲ್ ಪ್ರಕರಣ ಹೊಂದಿದ ಸಂಸದ ಎಂದು ಪತ್ರಿಕೆಗಳು ಬರೆಯುತ್ತಿವೆ. ಆದರೆ ಯಾರಿಗೂ ವಸ್ತು ಸ್ಥಿತಿ ಗೊತ್ತಿಲ್ಲ" ಎಂದು ಖಾನ್ ಹೇಳಿದರು.

English summary
Samajwadi Party (SP) leader and Ramgarh MP Azam Khan said, I think I Will Quit Parliament, Contesting UP Elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X