• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೋದಿಯವರ 'ಜಾತಿ' ಗೊತ್ತಿಲ್ಲ ಎಂದ ಪ್ರಿಯಾಂಕಾ ಮಾತಿನ ಮರ್ಮವೇನು?

|
      Lok Sabha Elections 2019 : ನನಗೆ ಪ್ರಧಾನಿಯವರ ಜಾತಿ ಯಾವುದೆಂದು ಗೊತ್ತಿಲ್ಲ

      ಲಕ್ನೋ, ಏಪ್ರಿಲ್ 29: "ನನಗೆ ಪ್ರಧಾನಿ ನರೇಂದ್ರ ಮೋದಿಯವರ ಜಾತಿ ಯಾವುದು ಎಂದು ಇದುವರೆಗೂ ಗೊತ್ತಿಲ್ಲ" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

      ಉತ್ತರ ಪ್ರದೇಶದಲ್ಲಿ ಪ್ರಚಾರ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಅವರು, 'ವಿಪಕ್ಷಗಳು ನನ್ನ ಜಾತಿಯನ್ನು ಎಳೆದು ತರುವ ಮೂಲಕ ಕೀಳುಮಟ್ಟದ ರಾಜಕೀಯ ಮಾಡುತ್ತಿವೆ' ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ತಿರುಗೇಟು ನೀಡಿದರು.

      ಚುನಾವಣೆ ಗೆಲ್ಲೋಕೆ ಬೇಕಾಗಿರೋದು ಮೂರೇ ಮೂರು:ಜಾತಿ, ಜಾತಿ ಮತ್ತು ಜಾತಿ!

      "ನಾವು ಎಂದಿಗೂ ಮೋದಿಯವರ ಜಾತಿಯನ್ನು ಕೇಳಿಲ್ಲ. ಕಾಂಗ್ರೆಸ್ ಗೆ ಬೇಕಿರುವುದು ಅಭಿವೃದ್ಧಿಯ ಕುರಿತ ಮಾಹಿತಿ ಅಷ್ಟೆ. ಅವರ ಜಾತಿಯ ಬಗ್ಗೆ ತಿಳಿದುಕೊಳ್ಳುವ ಉತ್ಸಾಹ ನಮಗಿಲ್ಲ. ನಾವು ಎಂದಿಗೂ ಅವರ(ಮೋದಿ) ಮೇಲೆ ವೈಯಕ್ತಿಕ ದಾಳಿ ನಡೆಸಿಲ್ಲ" ಎಂದು ಪ್ರಿಯಾಂಕಾ ಹೇಳಿದರು.

      "ಅವರ ರಾಷ್ಟ್ರೀಯತೆ ಎಂಥದ್ದು ಎಂಬುದನ್ನು ತಿಳಿದುಕೊಳ್ಳುವಲ್ಲಿ ನಾನು ವಿಫಲಳಾಗಿದ್ದೇನೆ. ಜನರು ಪ್ರತಿಭಟನೆ ಮಾಡುತ್ತಿದ್ದರೆ ಅವರ ಧ್ವನಿಯನ್ನು ಕೇಳಿಸಿಕೊಳ್ಳಲು ನೀವು ಸಿದ್ಧರಿಲ್ಲ, ದೇಶದಾದ್ಯಂತ ರೈತರು ಬರಿಗಾಲಲ್ಲಿ ಪಾದಯಾತ್ರೆ ಮಾಡಿದರೆ ಅದಕ್ಕೆ ಕಾರಣ ತಿಳಿಯಲು ನೀವು ಸಿದ್ಧರಿಲ್ಲ. ಹೀಗೆ ಬಡವರು ಮತ್ತು ನಿರುದ್ಯೋಗಿಗಳಿಗೆ ಸುಳ್ಳು ಭರವಸೆ ನೀಡುವುದರಿಂದ ನೀವು ಏನನ್ನು ಸಾಧಿಸುತ್ತೀರಿ?" ಎಂದು ಪ್ರಿಯಾಂಕಾ ಪ್ರಶ್ನಿಸಿದ್ದಾರೆ.

      ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

      English summary
      Congress leader Priyanka Gandhi, while addressing Lok Sabha elections 2019 campaign in Uttar Pradesh, said, She doesn't know PM Narendra Modi's caste.
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X
      We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more