• search
 • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚ್ಯೂಯಿಂಗ್ ಗಮ್ ತಿಂದಿಲ್ಲ ಎಂದು ಪತ್ನಿಗೆ ತಲಾಖ್ ಕೊಟ್ಟ ಭೂಪ

|

ಲಕ್ನೋ, ಆಗಸ್ಟ್ 21: ಪತ್ನಿ ಚ್ಯೂಯಿಂಗ್ ಗಮ್ ತಿಂದಿಲ್ಲ ಎಂದು ತಲಾಖ್ ನೀಡಿರುವ ಘಟನೆ ಲಕ್ನೋನಲ್ಲಿ ನಡೆದಿದೆ.

ಸಿವಿಲ್ ಕೋರ್ಟ್ ಆವರಣದೊಳಗೇ ವಕೀಲರ ಸಮ್ಮುಖದಲ್ಲೇ ವ್ಯಕ್ತಿಯೊಬ್ಬ ತಲಾಖ್ ನೀಡಿದ್ದಾನೆ.ತನ್ನ ವಕೀಲರೊಂದಿಗೆ ಮಾತನಾಡುತ್ತಿದ್ದ ಪತ್ನಿಗೆ ಪತಿ ಚ್ಯೂಯಿಂಗ್ ಗಮ್ ನೀಡಲು ಮುಂದಾಗಿದ್ದಾನೆ. ಆದರೆ ಪತ್ನಿ ಸಿಮ್ಮಿ ಅದನ್ನು ಸ್ವೀಕರಿಸಲಿಲ್ಲ. ಆಗ ಕುಪಿತನಾದ ಸೈಯದ್ ವಕೀಲರ ಸಮ್ಮುಖದಲ್ಲೇ ಮೂರು ಬಾರಿ "ತಲಾಕ್" ಹೇಳಿ ಪತ್ನಿಗೆ ವಿಚ್ಚೇದನ ನೀಡಿದ್ದಾನೆ.

   ಕೇಂದ್ರ ಸಂಪುಟ ಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆಗೆ ಅಂಗೀಕಾರ

   ತಲಾಖ್ ನೀಡಲು ನಿರಾಕರಿಸಿದ್ದಕ್ಕೆ ಮಹಿಳೆಯ ಸಜೀವ ದಹನತಲಾಖ್ ನೀಡಲು ನಿರಾಕರಿಸಿದ್ದಕ್ಕೆ ಮಹಿಳೆಯ ಸಜೀವ ದಹನ

   ಅಮ್ರಾಯ್ ಗ್ರಾಮದ ಸಿಮ್ಮಿ (30)ತನ್ನ ಪತಿ ಸೈಯದ್ ರಶೀದ್ ಅವರೊಂದಿಗೆ ಲಖನೌ ಸಿವಿಲ್ ನ್ಯಾಯಾಲಯಕ್ಕೆ ತೆರಳಿದ್ದಾಗ ಈ ಘಟನೆ ನಡೆದಿದೆ. ಆಕೆ ತನ್ನ ಅಳಿಯನ ಕುರಿತಂತೆ ಈ ಹಿಂದೆ ಸಲ್ಲಿಸಿದ್ದ ವರದಕ್ಷಿಣೆ ಕಿರುಕುಳ ಪ್ರಕರಣದ ವಿಚಾರಣೆಗಾಗಿ.ನ್ಯಾಯಾಲಯಕ್ಕೆ ಹಾಜರಾಗಿದ್ದಳು. ಆ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

   2004 ರಲ್ಲಿ ರಶೀದ್ ಅವರನ್ನು ವಿವಾಹವಾದ ಸಿಮ್ಮಿ ಈ ಹಿಂದೆ ತನ್ನ ಪತಿ ಮತ್ತು ಅಳಿಯಂದಿರ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದರು ಎಂದು ಇಂದಿರಾ ನಗರ ಸ್ಟೇಷನ್ ಹೌಸ್ ಆಫೀಸರ್ ಎಸ್.ಬಿ.ಪಾಂಡೆ ಹೇಳಿದ್ದಾರೆ.

   English summary
   Husband Give Triple Talaq UP Women Refusing Chewing Gum, Man give, triple talaq to his wife right inside the civil court premises here in presence of her advocate after she refused to accept a chewing gum from him.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X