ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತಿಯ ಶವ ತೆಗೆದುಕೊಂಡು ಮೊದಲು ಬಸ್ಸಿನಿಂದ ಕೆಳಗಿಳಿ ಎಂದಿದ್ರು

|
Google Oneindia Kannada News

ಲಕ್ನೋ, ಜುಲೈ 12: ಮಾನವೀಯತೆಗೆ ಈ ಸಮಾಜದಲ್ಲಿ ಬೆಲೆಯೇ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಗಂಡನನ್ನು ಕಳೆದುಕೊಂಡ ದುಃಖ ಒಂದೆಡೆಯಾದರೆ, ಆಸ್ಪತ್ರೆಗೂ ಕರೆದೊಯ್ಯದೆ ರಸ್ತೆ ಮಧ್ಯದಲ್ಲಿ ಬಸ್ ನಿಲ್ಲಿಸಿ ರಸ್ತೆಯ ಮೇಲೆ ಗಂಡ ಶವ ಹಾಕುವಂತೆ ಹೇಳಿದಾಗ ಆಕೆಗೆ ಹೇಗಾಗಿರಬೇಡ.

ಕೇರಳದ ಮಾಜಿ ರಾಜ್ಯಪಾಲರ ಮೊಮ್ಮಗಳು ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನಕೇರಳದ ಮಾಜಿ ರಾಜ್ಯಪಾಲರ ಮೊಮ್ಮಗಳು ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನ

ಗಂಡನಿಗೆ ಹೃದಯಾಘಾತವಾಗಿದೆ ದಯವಿಟ್ಟು ಸಹಾಯಮಾಡಿ ಎಂದರೆ ಬಸ್ಸನ್ನು ನಿಲ್ಲಿಸಿದೆ ಅಮಾನವೀಯತೆ ತೋರಿದ ಡ್ರೈವರ್, ಕೊನೆಗೆ ಪತಿ ಸತ್ತಾಗಲೂ ಆತನ ಶವವನ್ನು ಬಸ್ಸಿನಿಂದ ಕೆಳಗಿಳಿಸು ಎಂದು ಹೇಳಿ ಆಕೆಯ ದುಃಖವನ್ನು ಇಮ್ಮಡಿಗೊಳ್ಳುವಂತೆ ಮಾಡಿದ್ದಾರೆ.

Husband dies in a bus Woman Forced to Get Off with body

ಇಂತಹ ಸಮಾಜದಲ್ಲಿ ನಾವಿದ್ದೇವೆ ಎನ್ನುವುದೇ ವಿಪರ್ಯಾಸ, ದಂಪತಿ ಬಹ್ರೇಚ್‌ನಿಂದ ಲಕ್ನೋಗೆ ರಾತ್ರಿ ಬಸ್ಸಿನಲ್ಲಿ ತೆರಳುತ್ತಿದ್ದರು.ರಾಜು ಮಿಶ್ರಾ 37 ಮಾರ್ಗ ಮಧ್ಯದಲ್ಲಿ ಹೃದಯಾಘಾತಕ್ಕೊಳಗಾಗಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮುನ್ನವೇ ಕೊನೆಯುಸಿರೆಳೆದಿದ್ದಾರೆ.

ಈ ವಿಷಯ ತಿಳಿಯುತ್ತಿದ್ದಂತೆ ಮಹಿಳೆಗೆ ಪತಿಯ ಶವವನ್ನು ತೆಗೆದುಕೊಂಡು ಮೊದಲು ಬಸ್ಸಿನಿಂದ ಇಳಿಯಿರಿ ಎಂದು ಹೇಳಿದ ಅಮಾನವೀಯ ಘಟನೆ ಇದು. ಲಕ್ನೋನಿಂದ 25 ಕಿ.ಮೀ ದೂರದಲ್ಲಿ ಈ ಘಟನೆ ನಡೆದಿದೆ. ಕಂಡೆಕ್ಟರ್ ಮೊಹಮ್ಮದ್ ಸಲ್ಮಾನ್, ಡ್ರೈವರ್ ಜುನೇದ್ ಅಹಮದ್ ಮಹಿಳೆಯ ಕೈಯಿಂದ ಟಿಕೆಟ್‌ನ್ನು ಕಸಿದುಕೊಂಡು ಆಕೆಗೆ ಬಸ್ಸಿನಿಂದ ಕೆಳಗಿಳಿಯುವಂತೆ ಒತ್ತಾಯಿಸಲಾಯಿತು ಎಂದು ಮಹಿಳೆಯ ಸಹೋದರ ತಿಳಿಸಿದ್ದಾರೆ.

ಆದರೆ ಬಸ್‌ ಚಾಲಕ ಈ ದೂರನ್ನು ಅಲ್ಲಗಳೆದಿದ್ದು, ಮಾರ್ಗಮಧ್ಯೆ ಪತಿಗೆ ಎದೆನೋವು ಕಾಣಿಸಿಕೊಂಡಿದ್ದನ್ನು ಮಾತ್ರ ಅವರು ತಮ್ಮ ಬಳಿ ಹೇಳಿದ್ದಾಗಿ ತಿಳಿಸಿದ್ದಾರೆ.

ರಾಮನಗರದಲ್ಲಿರುವ ಖಾಸಗಿ ಆಸ್ಪತ್ರೆಯ ವೈದ್ಯ ಡಿಪಿ ಸಿಂಗ್‌ಗೆ ತಕ್ಷಣ ಕರೆ ಮಾಡಲಾಗಿತ್ತು. ವೈದ್ಯರು ಬಂದು ನೋಡಿದಾಗ ರಾಜು ಮೃತಪಟ್ಟಿದ್ದರು ಎಂದು ಡ್ರೈವರ್ ತಿಳಿಸಿದ್ದಾರೆ.

ಅಷ್ಟೇ ಅಲ್ಲದೆ ಕಂಡಕ್ಟರ್ ಉತ್ತರ ಪ್ರದೇಶ ಪೊಲೀಸರಿಗೂ ಕೂಡ ಕರೆ ಮಾಡಿದಾಗ ಉತ್ತಮ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ರಾಮನಗರ ಪೊಲೀಸರಿಗೆ ಕರೆ ಮಾಡಿ ಶವವನ್ನು ಕೊಂಡೊಯ್ಯುವಂತೆ ತಿಳಿಸಲಾಯಿತು.

ರಾಮನಗರ ಪೊಲೀಸರು ಸ್ಥಳೀಯ ಆಸ್ಪತ್ರೆಗೆ ಶವವನ್ನು ಕೊಂಡೊಯ್ಯುವಂತೆ ಬಸ್ ಕಂಡಕ್ಟರ್‌ಗೆ ತಿಳಿಸಿದ್ದರೂ ಕೂಡ ಆಕೆ ಬಸ್ಸಿನಿಂದ ಶವದೊಂದಿಗೆ ಕೆಳಗೆ ಇಳಿದಿದ್ದಳು.
ಬಳಿಕ ಕೆಲ ಪೊಲೀಸರು ತೆರಳಿ ಆಂಬುಲೆನ್ಸ್ ಮೂಲಕ ಶವವನ್ನು ಆಸ್ಪತ್ರೆಗೆ ಕೊಂಡೊಯ್ದು ಮರಣೋತ್ತರ ಪರಿಕ್ಷೆ ನಡೆಸಲಾಯಿತು.

English summary
Husband dies in a bus Woman Forced to Get Off with body, snatched the bus tickets from her, Forced to de-board with her husband's body.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X