ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ 2ನೇ ಅಲೆಯಲ್ಲಿ ಆಕ್ಸಿಜನ್ ಸಿಗದೆ ನೂರಾರು ಮಂದಿ ಸಾವು: ಒಪ್ಪಿಕೊಂಡ ಬಿಜೆಪಿ ಶಾಸಕ

|
Google Oneindia Kannada News

ಲಕ್ನೋ, ಜುಲೈ 28: ಕೊರೊನಾ ಎರಡನೇ ಅಲೆಯಲ್ಲಿ ಆಮ್ಲಜನಕ ಕೊರತೆಯಿಂದಾಗಿ ನೂರಾರು ಮಂದಿ ಮೃತಪಟ್ಟಿದ್ದಾರೆ ಎಂದು ಬಿಜೆಪಿ ಶಾಸಕರೊಬ್ಬರು ಹೇಳಿದ್ದಾರೆ.

ಹಲವು ದಿನಗಳಿಂದ ಪ್ರತಿಪಕ್ಷಗಳು ಸೇರಿದಂತೆ ಹಲವು ಮಂದಿ ಇದೇ ಆರೋಪ ಮಾಡಿದ್ದರು. ಆದರೆ ಬಿಜೆಪಿ ಅದನ್ನು ತಳ್ಳಿ ಹಾಕಿತ್ತು. ಇದೀಗ ಬಿಜೆಪಿ ಶಾಸಕರೊಬ್ಬರು ಇದೇ ಹೇಳಿಕೆ ನೀಡಿದ್ದು, ಬಿಜೆಪಿಯೇ ಒಪ್ಪಿಕೊಂಡಂತಾಗಿದೆ.

ದೇಶದಲ್ಲಿ ಹೊಸದಾಗಿ ದಾಖಲಾದ ಕೊರೊನಾ ಪ್ರಕರಣಗಳಲ್ಲಿ ಮತ್ತೆ ಏರಿಕೆದೇಶದಲ್ಲಿ ಹೊಸದಾಗಿ ದಾಖಲಾದ ಕೊರೊನಾ ಪ್ರಕರಣಗಳಲ್ಲಿ ಮತ್ತೆ ಏರಿಕೆ

ಬಿಜೆಪಿಯ ಗೋಪಾಮೌ ಶಾಸಕ ಶ್ಯಾಮ್ ಪ್ರಕಾಶ್ ಅವರು ಪತ್ರಕರ್ತ ಆನಂದ್ ಮಿಶ್ರಾ ಅವರ ಫೇಸ್‌ಬುಕ್ ವಾಲ್ ನಲ್ಲಿ ಈ ರೀತಿಯಲ್ಲಿ ಬರೆದಿದ್ದಾರೆ.

 Hundreds Died Due To Oxygen Shortage During Second Covid Wave: BJP MLA

ಈ ವಿಷಯ ಎತ್ತಿದ ಕೆಲ ಶಾಸಕರ ನ್ಯೂಸ್ ಪೇಪರ್ ಕಟ್ಟಿಂಗ್‌ ಅನ್ನು ಆನಂದ್ ಮಿಶ್ರಾ ಪೋಸ್ಟ್ ಮಾಡಿದ್ದರು. ನೀವು ಹೇಳುತ್ತಿರುವುದು ನಿಜ, ನಿಮ್ಮ ಅಭಿಪ್ರಾಯವನ್ನು ಒಪ್ಪುತ್ತೇನೆ.

ಆಕ್ಸಿಜನ್ ಕೊರತೆಯಿಂದ ನೂರಾರು ಜನರು ಸಾವನ್ನಪ್ಪಿದ್ದಾರೆ. ಶಾಸಕ ರಾಜ್ ಕುಮಾರ್ ಅಗರ್ ವಾಲ್ ಸೇರಿದಂತೆ ಯಾರೂ ಕೂಡಾ ಲಕ್ಷಾಂತರ ಕುಟುಂಬಗಳ ನೋವನ್ನು ನೋಡಲಿಲ್ಲ ಎಂದು ಶಾಸಕ ಬರೆದಿದ್ದರು.

ಅಗರ್ ಲಾಲ್ ಸಾಂಡಿಲಾದ ಬಿಜೆಪಿ ಶಾಸಕ, ಕೋವಿಡ್ ಎರಡನೇ ಅಲೆ ವೇಳೆಯಲ್ಲಿ ಇವರ ಪುತ್ರ ಸಾವನ್ನಪ್ಪಿದ್ದರು. ಆಸ್ಪತ್ರೆಯ ನಿರ್ಲಕ್ಷ್ಯದಿಂದ ಸಾವನ್ನಪ್ಪಿರುವುದಾಗಿ ಆರೋಪ ಮಾಡಲಾಗಿತ್ತು. ಆದಾಗ್ಯೂ, ಸೋಮವಾರ ಫೇಸ್‌ ಬುಕ್‌ನಲ್ಲಿ ಬರೆಯಲಾದ ವಿಷಯ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಶ್ಯಾಮ್ ಪ್ರಕಾಶ್, ಉತ್ತರ ಪ್ರದೇಶದ ಬಗ್ಗೆ ಬರೆದಿಲ್ಲ ಎಂದು ಹೇಳಿಕೆ ನೀಡಿದ್ದರು.

ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ ಆಮ್ಲಜನಕ ಕೊರತೆಯಿಂದ ಸಾವನ್ನಪ್ಪಿರುವ ಬಗ್ಗೆ ಯಾವುದೇ ವರದಿಗಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಬಂದಿಲ್ಲ ಎಂದು ಕಳೆದ ವಾರವಷ್ಟೇ ರಾಜ್ಯಸಭೆಯಲ್ಲಿ ಆರೋಗ್ಯ ಖಾತೆ ರಾಜ್ಯ ಸಚಿವೆ ಭಾರತೀ ಪ್ರವೀಣ್ ಪವಾರ್ ಲಿಖಿತ ಹೇಳಿಕೆ ನೀಡಿದ್ದರು. ಈ ಹಿಂದೆ ಕೂಡಾ ಎರಡನೇ ಅಲೆ ಅಸಮರ್ಪಕ ನಿರ್ವಹಣೆ ಕುರಿತಂತೆ ಬಿಜೆಪಿ ಮುಖಂಡರು ದೂರಿದ್ದರು.

ಆಮ್ಲಜನಕ ಕೊರತೆಯಿಂದ ಸಾವನ್ನಪ್ಪಿರುವ ಬಗ್ಗೆ ರಾಜ್ಯಗಳು ಯಾವುದೇ ವರದಿ ನೀಡಿಲ್ಲ ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಂಸತ್ತಿಗೆ ತಿಳಿಸಿದ ಮಾರನೇ ದಿನವೇ ಅದೇ ಪಕ್ಷದ ಶಾಸಕ ಈ ರೀತಿಯ ಹೇಳಿಕೆ ನೀಡಿರುವುದು ಪಕ್ಷಕ್ಕೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

English summary
A BJP MLA here claimed that 'hundreds of people died' due to lack of oxygen during the second Covid wave, days after his party’s Union government told Parliament that states did not report such deaths.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X