ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Hoax Bomb Threat- ಹುಸಿ ಬಾಂಬ್ ಕರೆ: ರೈಲ್ವೆ ಗಲಿಬಿಲಿ- ಗೋರಖಪುರ್ ರೈಲು ಗಂಟೆಗಟ್ಟಲೆ ಸ್ಥಗಿತ

|
Google Oneindia Kannada News

ಗೋರಖಪುರ್, ಮೇ 18: ದೇಶದ ಹಲವೆಡೆ ಭದ್ರತಾ ಸಂಸ್ಥೆಗಳಿಗೆ ಹುಸಿ ಬಾಂಬ್ ಕರೆಯದ್ದೇ ದೊಡ್ಡ ತಲೆನೋವಾಗಿದೆ. ಉಗ್ರಗಾಮಿಗಳಿಂದ ಯಾವಾಗ ಎಲ್ಲಿ ಬೇಕಾದರೂ ದಾಳಿಯಾಗುವ ಅಪಾಯ ಇರುವುದರಿಂದ ಯಾವ ಬೆದರಿಕೆ ಕರೆಯನ್ನೂ ಲಘುವಾಗಿ ಪರಿಗಣಿಸಲು ಆಗುವುದಿಲ್ಲ. ಇದನ್ನು ಕಿಡಿಗೇಡಿಗಳು ದುರುಪಯೋಗಿಸಿಕೊಂಡು ಹುಸಿ ಬಾಂಬ್ ಬೆದರಿಕೆ ಕರೆ ನೀಡಿ ವಿಕೃತ ಸಂತೋಷ ಪಡೆಯುವುದುಂಟು. ಇದೀಗ ಅಂಥದ್ದೊಂದು ಹುಸಿ ಬಾಂಬ್ ಬೆದರಿಕೆ ಉತ್ತರಪ್ರದೇಶದ ಹಮ್‌ಸಫರ್ ಎಕ್ಸ್‌ಪ್ರೆಸ್ ರೈಲಿಗೆ ಬಂದ ಘಟನೆ ನಡೆದಿದೆ.

ಗೋರಖಪುರ್-ಬಾಂದ್ರಾ ಹಮ್‌ಸಫರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಉಗ್ರರು ಬಾಂಬ್ ಇಟ್ಟಿದ್ದಾರೆ ಎಂದು ಟ್ವಿಟ್ಟರ್‌ನಲ್ಲಿ ವ್ಯಕ್ತಿಯೊಬ್ಬ ಪೋಸ್ಟ್ ಮಾಡಿದ್ದ. ನಿನ್ನೆ ಮಂಗಳವಾರ ರಾತ್ರಿ ನಡೆದ ಈ ಬೆಳವಣಿಗೆಯಲ್ಲಿ ರೈಲನ್ನು ಸಂಪೂರ್ಣವಾಗಿ ತಪಾಸಿಸಲಾಯಿತು. ಆದರೆ, ಯಾವುದೇ ಬಾಂಬ್ ಸಿಗಲಿಲ್ಲ. ಇದರಿಂದ ರೈಲು ಹಲವು ಗಂಟೆಗಳ ಕಾಲ ವಿಳಂಬವಾಯಿತು. ಅಷ್ಟರಲ್ಲಿ ಸಾರ್ವಜನಿಕರು, ಅಧಿಕಾರಿಗಳೂ ಸೇರಿ ರೈಲ್ವೆ ನಿಲ್ದಾಣದಲ್ಲಿದ್ದ ಎಲ್ಲರಿಗೂ ಗಲಿಬಿಲಿಗೊಳ್ಳುವಂತಾಯಿತು.

ಆಗ್ನೇಯ ರೈಲ್ವೆ ವಿಭಾಗದಲ್ಲಿ ಭರ್ಜರಿ ಉದ್ಯೋಗ ಅವಕಾಶಆಗ್ನೇಯ ರೈಲ್ವೆ ವಿಭಾಗದಲ್ಲಿ ಭರ್ಜರಿ ಉದ್ಯೋಗ ಅವಕಾಶ

ಉಗ್ರರು ಟ್ರೈನಿನಲ್ಲಿ ಬಾಂಬ್ ಇಟ್ಟಿದ್ದಾರೆಂದು ಟ್ವೀಟ್ ಮಾಡಿದ ವ್ಯಕ್ತಿ ಮಿಲನ್ ರಜಾಕ್ ಎನ್ನಲಾಗಿದೆ. ಅಥವಾ ಆ ಹೆಸರಿನ ಟ್ವಿಟ್ಟರ್ ಅಕೌಂಟ್‌ನಿಂದ ಹುಸಿ ಬಾಂಬ್ ಕರೆಯ ಟ್ವೀಟ್ ಆಗಿದೆ.

Hoax Bomb Call on Gorakhpur-Bandra Train Creates Tension For Hours

"ಟ್ರೈನ್ ನಂಬರ್ 19092 ಗಾಡಿಯ ಕೆಳಗೆ ಯಾರೋ ಉಗ್ರಗಾಮಿಯೊಬ್ಬ ಬಾಂಬ್ ಇಟ್ಟಿದ್ದು, ಅದು ಚಲಿಸಿದರೆ ಬಾಂಬ್ ಸ್ಫೋಟಗೊಳ್ಳುತ್ತದೆ. ಒಂದು ವಾರ ಕಾಲ ಟ್ರೈನನ್ನು ನಿಲ್ಲಿಸಿ ಸಂಪೂರ್ಣ ಪರಿಶೀಲನೆ ಮಾಡಿ ದೊಡ್ಡ ಅನಾಹುತ ತಪ್ಪಿಸಬೇಕು" ಎಂದು ಈ ವ್ಯಕ್ತಿ ಟ್ವೀಟ್ ಮಾಡಿದ್ದ. ಟ್ವಿಟ್ಟರ್, ರೈಲ್ವೆ ಇಲಾಖೆ ಮತ್ತು ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ಅವರಿಗೆ ಟ್ಯಾಗ್ ಮಾಡಿ ಪ್ರತ್ಯೇಕವಾಗಿ ಇದೇ ಸಂದೇಶವನ್ನು ಈತ ಟ್ವೀಟ್ ಮಾಡಿದ್ದಾನೆ.

Hoax Bomb Call on Gorakhpur-Bandra Train Creates Tension For Hours

ಆದರೆ, ಈತ ತಪ್ಪು ಮಾಹಿತಿ ನೀಡಿರುವುದು ತಿಳಿಯುವ ಮುನ್ನ ರೈಲ್ವೆ ಇಲಾಖೆ ಅತಂಕದ ಕ್ಷಣಗಳನ್ನು ಕಳೆಯಬೇಕಾಯಿತು. ಈ ಮಿಲನ್ ರಜಾಕ್ ಎಂಬ ವ್ಯಕ್ತಿ ಮೇ ೧೧ ಮತ್ತು ೧೨ರಂದೂ ಕೂಡ ಇದೇ ಗೋರಖ್‌ಪುರ್-ಬಾಂದ್ರಾ ಎಕ್ಸ್‌ಪ್ರೆಸ್ ರೈಲಿಗೆ ಬಾಂಬ್ ಹಾಕುವ ಸಾಧ್ಯತೆ ಇದೆ ಎಂದು ಎಚ್ಚರಿಸಿ ಟ್ವೀಟ್‌ಗಳನ್ನು ಮಾಡಿದ್ದನೆನ್ನಲಾಗಿದೆ. ಆದರೆ, ಆತ ತಿಳಿಸಿದ ದಿನಗಳಂದು ಇಲ್ಲಿ ಆ ರೈಲು ಚಾಲನೆಯಲ್ಲಿರಲಿಲ್ಲ. ಹೀಗಾಗಿ, ಯಾವ ಕ್ರಮವನ್ನೂ ತೆಗೆದುಕೊಂಡಿರಲಿಲ್ಲ. ಇದೀಗ ಪೊಲೀಸರು ಈ ಟ್ವೀಟ್ ಮಾಡಿದ ವ್ಯಕ್ತಿ ಯಾರೆಂದು ಪತ್ತೆಹಚ್ಚುವ ಕಾರ್ಯದಲ್ಲಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
Gorakhpur-Bandra Hamsafar Express Train Was Halted For Hours After a Person Tweeted Saying Some Terrorist Had Planted Bomb In It.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X