• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಡಿಯೋ: ಮೊದಲ ಹಿಮಪಾತ, ಕೇದಾರನಾಥ್, ಬದರಿನಾಥ ಬಂದ್

|

ಹಿಮಾಲಯದಲ್ಲಿ ಮೊದಲ ಹಿಮಪಾತದ ಅನುಭವವಾಗಿದೆ. ಚಳಿಗಾಲದ ಆರಂಭದೊಂದಿಗೆ ಉತ್ತರಾಖಂಡ್ ರಾಜ್ಯದಲ್ಲಿ ಭಾನುವಾರ, ಸೋಮವಾರದಂದು ಭಾರಿ ಹಿಮಪಾತ, ಹಿಮಮಳೆ ಸುರಿದಿದೆ.

ಚಾರ್ ಧಾಮ್ ಯಾತ್ರಾಸ್ಥಳಗಳಾದ ಕೇದಾರನಾಥ, ಬದ್ರಿನಾಥ, ಗಂಗೋತ್ರಿ, ಯಮುನೋತ್ರಿ, ಔಲಿ, ಹರ್ಸಿಲ್ ಮುಂತಾದೆಡೆ ಭಾನುವಾರ ಸಂಜೆ ಆರಂಭವಾದ ಭಾರಿ ಹಿಮಮಳೆ ಸೋಮವಾರವೂ ಮುಂದುವರೆದಿದೆ. ದಟ್ಟವಾದ ಹಿಮಚ್ಛಾದಿತ ಪ್ರದೇಶ ಎಲ್ಲೆಡೆ ಕಂಡು ಬಂದಿದೆ.

ಉತ್ತರಕಾಶಿ ಜಿಲ್ಲೆಯ ಗಂಗೋತ್ರಿ, ಹರ್ಸಿಲ್, ಧರಾಲಿ, ಜಾನಕಿಛಟ್ಟಿ, ರಾಣಾಛಟ್ಟಿ ಎಲ್ಲೆಡೆ ಹಿಮಮಳೆ ಜೋರಾಗಿದ್ದು, ದೇಗುಲಗಳನ್ನು ಚಳಿಗಾಲಕ್ಕಾಗಿ ಬಂದ್ ಮಾಡಲಾಗಿದೆ ಎಂದು ಗಂಗೋತ್ರಿ ಮಂದಿರ ಸಮಿತಿ ಅಧ್ಯಕ್ಷ ಸುರೇಶ್ ಸೆಮ್ವಾಲ್ ಹೇಳಿದ್ದಾರೆ.

ಸಿಎಂಗಳಿಗೆ ಹಿಮಮಳೆ ಕಾಟ

ಕೇದಾರನಾಥ, ಬದರಿನಾಥ ದೇಗುಲಗಳನ್ನು ಕೂಡಾ ಬಂದ್ ಮಾಡಿ ಭದ್ರವಾದ ಹೊದಿಕೆಯನ್ನು ಹೊದಿಸಲಾಗಿದೆ. ಚಮೋಲಿ ಜಿಲ್ಲೆಯ ಔರಿ ಸೈಕಿಂಗ್ ಆಟಕ್ಕೆ ಹೇಳಿ ಮಾಡಿಸಿದಂತಿದ್ದು, ಈಗಾಗಲೇ ಒಂದು ಅಡಿ ಹಿಮ ಆವರಿಸಿದೆ.

ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಉತ್ತರಾಖಂಡ್ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಇಬ್ಬರು ಇಂದು ಹಿಮಾಲಯದ ದೇಗುಲಗಳಿಗೆ ಭೇಟಿ ನೀಡಿ ದೇಗುಲಗಳನ್ನು ಚಳಿಗಾಲದಲ್ಲಿ ಬಂದ್ ಮಾಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕೇದಾರನಾಥದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಹೊರಟರೆ ಭಾರಿ ಹಿಮಮಳೆಯಲ್ಲಿ ಸಿಲುಕಿಕೊಳ್ಳಬೇಕಾಯಿತು. ಕೊನೆಗೆ ಪ್ರತಿಕೂಲ ಹವಾಮಾನದಲ್ಲೂ ಇಬ್ಬರನ್ನು ಸುರಕ್ಷಿತವಾಗಿ ಕರೆತರಲಾಯಿತು ಎಂದು ಉತ್ತರಾಖಂಡ್ ಡಿಜಿ ಅಶೋಕ್ ಕುಮಾರ್ ಹೇಳಿದ್ದಾರೆ.

ಹಿಮಾಲಯದ ಕೆಳಭಾಗದಲ್ಲಿ ಬರುವ ಡೆಹ್ರಾಡೂನ್, ಮಸೌರಿ, ಶಿಮ್ಲಾ ಮುಂತಾದೆಡೆ ಭಾರಿ ಚಳಿ, ಗಾಳಿ ಮಳೆ ಸುರಿಯುತ್ತಿದೆ.

ಮುಂದಿನ ಎರಡು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹಿಮಾಲಯದಲ್ಲಿ ಪ್ರವಾಸಿಗರು, ಟ್ರೆಕ್ಕರ್ಸ್ ಪ್ರವೇಶ ಸದ್ಯಕ್ಕೆ ನಿರ್ಬಂಧಿಸಲಾಗಿದೆ

English summary
The sacred portals of the Himalayan shrine of Kedarnath were closed for the winter season on Monday amid a fresh spell of snowfall.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X