ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹತ್ರಾಸ್: ಸಂತ್ರಸ್ತೆ ಮನೆಗೆ ಬಿಗಿ ಭದ್ರತೆ, ಸಿಸಿಟಿವಿ ಅಳವಡಿಕೆ

|
Google Oneindia Kannada News

ಹತ್ರಾಸ್, ಅಕ್ಟೋಬರ್ 09: ಹತ್ರಾಸ್ ದಲಿತ ಯುವತಿ ಅತ್ಯಾಚಾರ, ಸಾವಿಗೆ ಸಂಬಂಧಿಸಿದಂತೆ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಸಂತ್ರಸ್ತೆ ಕುಟುಂಬದ ಭದ್ರತೆಗಾಗಿ ಅವರ ಮನೆ ಬಳಿ ಸಿಸಿಟಿವಿ ಮತ್ತು 60 ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಶುಕ್ರವಾರ ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತೆಯ ಮನೆಯ ಸುತ್ತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, 24 ಗಂಟೆಗಳ ನಿಗಾ ವಹಿಸಲಾಗುತ್ತಿದೆ ಎಂದು ಮಾಥುರ್ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಮಹಿಳೆ ಸಾವು ಉತ್ತರ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಮಹಿಳೆ ಸಾವು

ಸಂತ್ರಸ್ತೆಯ ಕುಟುಂಬ ಸದಸ್ಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಇಲ್ಲಿನ ಬಲ್ಗರಿ ಪ್ರದೇಶಲ್ಲಿ ಮಹಿಳಾ ಪೊಲೀಸರು ಸೇರಿದಂತೆ 60 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, 12 ಗಂಟೆಗಳ ಪಾಳಿಯಲ್ಲಿ ಅವರು ಕಾರ್ಯನಿರ್ವಹಿಸಲಿದ್ದಾರೆ ಎಂದು ನೋಡಲ್ ಅಧಿಕಾರಿಯಾಗಿ ಲಖನೌದಿಂದ ಹತ್ರಾಸ್‌ಗೆ ಬಂದಿರುವ ಡಿಐಜಿ ಶಲಾಭ್ ಮಾಥುರ್ ಅವರು ಹೇಳಿದ್ದಾರೆ.

Hathras: CCTV Cameras Installed, 60 Cops Deployed To Ensure Security To Victims Kin

ಈ ಪೊಲೀಸ್ ಸಿಬ್ಬಂದಿಯ ಮೇಲ್ವಿಚಾರಣೆಗಾಗಿ ಗೆಜೆಟೆಡ್ ಅಧಿಕಾರಿಯನ್ನು ಸಹ ನಿಯೋಜಿಸಲಾಗಿದ್ದು, ಅಗತ್ಯವಿದ್ದರೆ ಅಲ್ಲಿ ಕಂಟ್ರೋಲ್ ರೂಮ್ ಕೂಡ ಸ್ಥಾಪಿಸಲಾಗುವುದು ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ.

ಮನೆಯ ದ್ವಾರದಲ್ಲಿ ಲೋಹ ಪರಿಶೋಧಕ ಯಂತ್ರವನ್ನು ಅಳವಡಿಸಲಾಗಿದೆ. ಕ್ಷಿಪ್ರ ಕಾರ್ಯಪಡೆ ತಂಡದವರು ಅಲ್ಲಿದ್ದು, ಯಂತ್ರದ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಸಿಸಿಟಿವಿ ಕ್ಯಾಮರಾದ ನೆರವಿನಿಂದ ಭದ್ರತೆಯನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ.

English summary
Sixty security personnel have been deployed and eight closed-circuit television (CCTV) cameras installed at the house of a Dalit woman, who was allegedly gang-raped and killed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X