ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ್ಞಾನವಾಪಿ ಮಸೀದಿ ವಿವಾದ: ವಿಡಿಯೋ ಸಮೀಕ್ಷೆ ವೇಳೆ ಸ್ವಸ್ತಿಕ್ ಚಿಹ್ನೆಗಳು ಪತ್ತೆ

|
Google Oneindia Kannada News

ವಾರಾಣಾಸಿ ಮೇ 9: ವಾರಣಾಸಿಯ ಪ್ರಸಿದ್ಧ ಕಾಶಿ ವಿಶ್ವನಾಥ ದೇವಸ್ಥಾನದ ಬಳಿಯ ಜ್ಞಾನವಾಪಿ ಮಸೀದಿಯ ಸರ್ವೇ ಸೈಟ್ ಬಳಿ ಸ್ವಸ್ತಿಕ್‌ನ ಎರಡು ಚಿಹ್ನೆಗಳು ಕಂಡುಬಂದಿವೆ. ಮಾಧ್ಯಮ ವರದಿಗಳ ಪ್ರಕಾರ, ಕಾಶಿ ವಿಶ್ವನಾಥ ದೇವಸ್ಥಾನದೊಂದಿಗೆ ಗಡಿ ಗೋಡೆಯನ್ನು ಹಂಚಿಕೊಂಡಿರುವ ಮಸೀದಿಯ ಸಮೀಕ್ಷೆಯ ಸಮಯದಲ್ಲಿ ಹಲವಾರು ಇತರ ಚಿಹ್ನೆಗಳು ಮತ್ತು ರಚನೆಗಳು ಕಂಡುಬಂದಿವೆ.

ಸ್ವಸ್ತಿಕ್ ಹಿಂದೂ ಧರ್ಮದಲ್ಲಿ ಪವಿತ್ರ ಸಂಕೇತವಾಗಿದೆ. ಇದು ಸಮೃದ್ಧಿ ಮತ್ತು ಅದೃಷ್ಟವನ್ನು ಸಂಕೇತಿಸುತ್ತದೆ. ಇದು ಸಂಸ್ಕೃತ ಪದ ಸ್ವಸ್ತಿಕದಿಂದ ಬಂದಿದ್ದು ಇದರರ್ಥ 'ಕ್ಷೇಮಕ್ಕೆ ಅನುಕೂಲಕರ' ಎಂದಾಗಿದೆ. ಮಸೀಯಲ್ಲಿ ಹಿಂದೂ ಧರ್ಮದ ಚಿಹ್ನೆಗಳ ಗುರುತು ಪತ್ತೆಯಾಗಿರುವುದು ಸತ್ಯ ಹಲವಾಡು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಜ್ಞಾನವಾಪಿ ಪ್ರಕರಣ: ಒಬ್ಬ ಹಿಂದು ಅರ್ಜಿದಾರ ಕೇಸ್‌ನಿಂದ ಹೊರಕ್ಕೆ; ಮೇ 9ಕ್ಕೆ ವಿಚಾರಣೆಜ್ಞಾನವಾಪಿ ಪ್ರಕರಣ: ಒಬ್ಬ ಹಿಂದು ಅರ್ಜಿದಾರ ಕೇಸ್‌ನಿಂದ ಹೊರಕ್ಕೆ; ಮೇ 9ಕ್ಕೆ ವಿಚಾರಣೆ

ಮಸೀದಿಯಲ್ಲಿ ಎರಡು ದಿನಗಳ ಸಮೀಕ್ಷೆಯನ್ನು ನ್ಯಾಯಾಲಯದ ನೇಮಕಾತಿ ತಂಡ ನಡೆಸಿದೆ. ಈ ವೇಳೆ ನ್ಯಾಯಾಲಯದ ಆದೇಶವನ್ನು ವಿರೋಧಿಸಿದ ಮುಸ್ಲಿಮರಿಂದ ಸಮೀಕ್ಷಾ ತಂಡ ಭಾರೀ ಪ್ರತಿಭಟನೆಯನ್ನು ಎದುರಿಸಬೇಕಾಯಿತು. ಹೀಗಾಗಿ ಪ್ರತಿಭಟನೆಯಿಂದಾಗಿ ಶನಿವಾರ ಆಡಳಿತ ಮಂಡಳಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಪೊಲೀಸ್ ಬಿಗಿ ಭದ್ರತೆಯ ನಡುವೆ ಸ್ಥಳದಲ್ಲಿ ಇಂದು ಸಮೀಕ್ಷೆ ಮಾಡಲಾಗುತ್ತಿದೆ. ಎರಡು ಚಿಹ್ನೆಗಳು ಇತಿಹಾಸಪೂರ್ವ ಕಾಲಕ್ಕೆ ಹಿಂದಿನವು. ಮಾತ್ರವಲ್ಲದೆ ಮಸೀದಿಯಲ್ಲಿ ಇಂತಹ ಹಲವಾರು ಇತರ ಚಿಹ್ನೆಗಳು ಮತ್ತು ರಚನೆಗಳು ಕಂಡುಬಂದಿವೆ.

ಓರ್ವನ ಬಂಧನ

ಓರ್ವನ ಬಂಧನ

ನ್ಯಾಯಾಲಯ ನೇಮಿಸಿದ ತಂಡವನ್ನು ಸಮೀಕ್ಷೆ ನಡೆಸದಂತೆ ತಡೆದಿದ್ದಕ್ಕಾಗಿ ಒಬ್ಬ ವ್ಯಕ್ತಿಯನ್ನು ವಾರಣಾಸಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಮೊಹಮ್ಮದ್ ಅಬ್ದುಲ್ ಸಲಾಂ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಅವನು ನೆರೆಯ ಚಂದೌಲಿ ಜಿಲ್ಲೆಯ ಮೊಘಲ್ಸರಾಯ್ ಮೂಲದವನು. ಆತನ ವಿರುದ್ಧ ಐಪಿಸಿ ಸೆಕ್ಷನ್ 332/147/149/505(2) ಮತ್ತು ಕ್ರಿಮಿನಲ್ ಆಕ್ಟ್ 7 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸರ್ವೇ ತಂಡ ಬದಲಾವಣೆಗೆ ಒತ್ತಾಯ

ಸರ್ವೇ ತಂಡ ಬದಲಾವಣೆಗೆ ಒತ್ತಾಯ

ವಾರಣಾಸಿಯ ಜ್ಞಾನವಾಪಿ ಮಸೀದಿಯ ಸರ್ವೇಯನ್ನು ನಡೆಸಲು ಸ್ಥಳೀಯ ನ್ಯಾಯಾಲಯ ನೇಮಿಸಿದ ವಕೀಲ ಕಮಿಷನರ್ ಅಜಯ್ ಕುಮಾರ್ ಮತ್ತು ಅವರ ತಂಡ ವಿಫಲವಾಗಿತ್ತು. ಮಸೀದಿಯನ್ನು ನಿರ್ವಹಿಸುವ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯ ವಕೀಲರು ನ್ಯಾಯಾಲಯದ ಆದೇಶವನ್ನು ವಿರೋಧಿಸಿದ್ದರು. ಸರ್ವೆ ಮಾಡಲು ಅಜಯ್ ಕುಮಾರ್ ಅವರನ್ನು ಬದಲಾಯಿಸುವಂತೆ ಒತ್ತಾಯಿಸಿ ಸಮಿತಿಯು ಸಿವಿಲ್ ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರ ನ್ಯಾಯಾಲಯಕ್ಕೆ ಶನಿವಾರ ಅರ್ಜಿ ಸಲ್ಲಿಸಿತ್ತು. ಈ ವಿಷಯವನ್ನು ಆಲಿಸಿದ ನಂತರ, ನ್ಯಾಯಾಲಯವು ಮೇ 9 ರಂದು ತಮ್ಮ ವಾದವನ್ನು ಮಂಡಿಸಲು ಫಿರ್ಯಾದಿದಾರರು ಮತ್ತು ವಕೀಲ ಕಮಿಷನರ್‌ಗೆ ಸೂಚಿಸಿದೆ.

"ನಾವು ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದೇವೆ, ವಕೀಲ ಕಮಿಷನರ್ ಅಜಯ್ ಕುಮಾರ್ ಅವರನ್ನು ತೆಗೆದುಹಾಕಲು ಅಥವಾ ಹಿರಿಯ ವಕೀಲರನ್ನು ನೇಮಿಸುವಂತೆ ನ್ಯಾಯಾಲಯವನ್ನು ಒತ್ತಾಯಿಸಿದ್ದೇವೆ. ಏಕೆಂದರೆ (ಮೊದಲ ದಿನ) ಅವರು ಅರ್ಜಿದಾರರ ಇಚ್ಛೆಯಂತೆ ಸಮೀಕ್ಷೆಯ ಪ್ರಕ್ರಿಯೆಯನ್ನು ನಡೆಸಿದರು" ಎಂದು ಮಸೀದಿ ಸಮಿತಿಯ ವಕೀಲ ಅಭಯ್ ನಾಥ್ ಯಾದವ್ ಆರೋಪಿಸಿದ್ದಾರೆ.

ಮಸೀದಿಗೆ ಪ್ರವೇಶಿಸಲು ಸರ್ವೇ ತಂಡಕ್ಕೆ ತಡೆ

ಮಸೀದಿಗೆ ಪ್ರವೇಶಿಸಲು ಸರ್ವೇ ತಂಡಕ್ಕೆ ತಡೆ

ಜ್ಞಾನವಾಪಿ ಕಾಂಪ್ಲೆಕ್ಸ್‌ನಲ್ಲಿ ಹಿಂದೂ ದೇವರ ವಿಗ್ರಹಗಳಿಗೆ ಪೂಜೆ ಸಲ್ಲಿಸಲು ಅವಕಾಶ ಕೋರಿ 1991ರಲ್ಲಿ ವಾರಾಣಸಿ ಜಿಲ್ಲಾ ನ್ಯಾಯಾಲಯಕ್ಕೆ ಕೆಲವಾರು ಅರ್ಜಿಗಳು ಸಲ್ಲಿಕೆಯಾದವು. 17ನೇ ಶತಮಾನದಲ್ಲಿ ಮೊಘಲ್ ದೊರೆ ಔರಂಗಜೇಬರ ಆದೇಶದಂತೆ ಕಾಶಿ ವಿಶ್ವನಾಥ ಮಂದಿರದ ಒಂದು ಭಾಗವನ್ನು ಕೆಡವಿ ಜ್ಞಾನವಾಪಿ ಮಸೀದಿ ಕಟ್ಟಲಾಯಿತು ಎಂಬುದು ಅರ್ಜಿದಾರರ ವಾದವಾಗಿತ್ತು. 2019ರಲ್ಲಿ ಜ್ಞಾನವಾಪಿ ಮಸೀದಿ ಕಾಂಪ್ಲೆಕ್ಸ್‌ನ ಇಡೀ ಪ್ರದೇಶದಲ್ಲಿ ಸರ್ವೇಕ್ಷಣೆ ನಡೆಯಬೇಕೆಂದು ಅರ್ಜಿದಾರರು ಮನವಿ ಮಾಡಿದ್ದರು. 2021 ಸೆಪ್ಟೆಂಬರ್ 9ರಂದು ಅಲಹಾಬಾದ್ ಹೈಕೋರ್ಟ್ ಗ್ಯಾನವಾಪಿಯಲ್ಲಿ ಸರ್ವೇಕ್ಷಣೆ ಕಾರ್ಯಕ್ಕೆ ತಡೆ ನೀಡಿತು. ಈಗ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಶೃಂಗಾರ್ ಗೌರಿ ಮತ್ತಿತರ ಹಿಂದೂ ದೇವರ ವಿಗ್ರಹಗಳಿದ್ದು ಅಲ್ಲಿ ಪೂಜೆ ಸಲ್ಲಿಸಲು ಅವಕಾಶ ಕೊಡಬೇಕೆಂದು ಐವರು ಹಿಂದೂ ಅರ್ಜಿದಾರರು ಮನವಿ ಮಾಡಿದ್ದಾರೆ.

ಈ ಅರ್ಜಿಯ ವಿಚಾರಣೆ ನಡೆದು ನ್ಯಾಯಾಲಯ ಸ್ಥಳ ಪರಿಶೀಲನೆಗೆ ಸೂಚನೆಯನ್ನು ನೀಡಿದೆ. ಆದರೆ ಜ್ಞಾನ್ವಾಪಿ ಸಂಕೀರ್ಣದಲ್ಲಿನ ಅಂಜುಮನ್ ಇಂತೇಝಾಮಿಯಾ ಮಸೀದಿ ಸಮಿತಿಯ ಜಂಟಿ ಕಾರ್ಯದರ್ಶಿ ಎಸ್.ಎಂ.ಯಾಸಿನ್ ಏಪ್ರಿಲ್ 30 ರಂದು ಸಮೀಕ್ಷೆಗಾಗಿ ಮಸೀದಿಗೆ ಪ್ರವೇಶಿಸಲು ಅನುಮತಿಸುವುದಿಲ್ಲ ಎಂದು ಸಮೀಕ್ಷೆ ತಂಡವನ್ನು ತಡೆದಿದ್ದರು.

ಕೆಲವರು ಪೊಲೀಸರ ವಶ

ಕೆಲವರು ಪೊಲೀಸರ ವಶ

ಆದರೆ ಕಳೆದ ಶುಕ್ರವಾರ ಎಲ್ಲ ಪಕ್ಷಗಳ ಸಮ್ಮುಖದಲ್ಲಿ ಪೊಲೀಸ್ ಬಿಗಿ ಭದ್ರತೆಯ ನಡುವೆ ಸಮೀಕ್ಷೆ ಆರಂಭಗೊಂಡಿತ್ತು. ಈ ಸಮೀಕ್ಷೆಯಲ್ಲಿ ಅಜಯ್ ಕುಮಾರ್ ಅವರನ್ನು ಅಡ್ವೊಕೇಟ್ ಕಮಿಷನರ್ ಆಗಿ ಏಪ್ರಿಲ್ 8 ರಂದು ನ್ಯಾಯಾಲಯ ನೇಮಿಸಿತ್ತು. ಕುಮಾರ್ ಮತ್ತು ಅವರ ತಂಡ ಸಮೀಕ್ಷೆಗೆ ಆಗಮಿಸಿದಾಗ, ಕಾಶಿ ವಿಶ್ವನಾಥ್-ಜ್ಞಾನವಾಪಿ ಸಂಕೀರ್ಣದ ಹೊರಗೆ ಗುಂಪು ಜಮಾಯಿಸಿ ಘೋಷಣೆಗಳನ್ನು ಕೂಗಿದರು. ಪೊಲೀಸರು ಗುಂಪನ್ನು ಚದುರಿಸಿದರು ಮತ್ತು ಒಬ್ಬ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡರು. ಶುಕ್ರವಾರವೂ ಸ್ಥಳದ ಹೊರಗೆ ಪ್ರತಿಭಟನೆ ನಡೆಸಲಾಯಿತು. ನಂತರ ಶನಿವಾರ ಅಜಯ್ ಕುಮಾರ್ ಅವರು ಮತ್ತು ಅವರ ತಂಡದೊಂದಿಗೆ ಸಂಕೀರ್ಣದಲ್ಲಿರುವ ಅನೇಕ ದೇವತೆಗಳ ಸಮೀಕ್ಷೆ ಮತ್ತು ವೀಡಿಯೊಗಳನ್ನು ಮಾಡಲು ಆಗಮಿಸಿದರು. ಆದರೆ ನ್ಯಾಯಾಲಯದ ನಿರ್ದೇಶನದೊಂದಿಗೆ ಆಗಮಿಸಿದ ಮಸೀದಿ ಆಡಳಿತದ ವಕೀಲರು ಸ್ಥಳಪರಿಶೀಲನೆಯನ್ನು ವಿರೋಧಿಸಿದ್ದರು. ಆದರೆ ಇಂದು ಸ್ಥಳ ಪರಿಶೀಲನೆ ಮಾಡಿದ ಸಮೀಕ್ಷೆಯ ತಂಡಕ್ಕೆ ಮಸೀದಿಯಲ್ಲಿ ಸ್ವಸ್ತಿಕ್ ಚಿಹ್ನೆಗಳಿರುವುದು ಕಂಡುಬಂದಿದೆ. ಇದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿದೆ.

English summary
Gyanvapi Masjid controversy: Two symbols of Swastik were found near the survey site at the Gyanvapi Mosque near the famed Kashi Vishwanath temple in Varanasi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X