ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ಜ್ಞಾನವಾಪಿ ವಿವಾದ; 2 ಗಂಟೆಗೆ ಕೋರ್ಟ್‌ ತೀರ್ಪು

|
Google Oneindia Kannada News

ಲಕ್ನೋ, ಮೇ 24; ಜ್ಞಾನವಾಪಿ ಮಸೀದಿ ಕುರಿತು ಸಲ್ಲಿಕೆಯಾಗಿರುವ ಅರ್ಜಿಗಳ ಕುರಿತು ವಾರಣಾಸಿ ಜಿಲ್ಲಾ ನ್ಯಾಯಾಲಯ ಮಂಗಳವಾರ ತೀರ್ಪು ಪ್ರಕಟಿಸಲಿದೆ. ಸುಪ್ರೀಂಕೋರ್ಟ್ ಅರ್ಜಿಗಳ ವಿಚಾರಣೆಯನ್ನು ಜಿಲ್ಲಾ ಕೋರ್ಟ್‌ಗೆ ವರ್ಗಾವಣೆ ಮಾಡಿತ್ತು.

ವಿವಾದದ ಕುರಿತು ಹಿಂದೂಗಳು ಸಲ್ಲಿಕೆ ಮಾಡಿರುವ ಅರ್ಜಿ ಮೊದಲು ವಿಚಾರಣೆ ನಡೆಸಬೇಕೆ? ಅಥವ ಮುಸ್ಲಿಂಮರು ಸಲ್ಲಿಕೆ ಮಾಡಿರುವ ಅರ್ಜಿ ವಿಚಾರಣೆ ನಡೆಯಬೇಕೆ? ಎಂದು ಜಿಲ್ಲಾ ಕೋರ್ಟ್‌ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ತೀರ್ಪು ನೀಡಲಿದೆ.

Breaking: ಜ್ಞಾನವಾಪಿ ಮಸೀದಿ ಪ್ರಕರಣ ವಾರಣಾಸಿ ಜಿಲ್ಲಾ ಕೋರ್ಟ್‌ಗೆ ವರ್ಗಾವಣೆBreaking: ಜ್ಞಾನವಾಪಿ ಮಸೀದಿ ಪ್ರಕರಣ ವಾರಣಾಸಿ ಜಿಲ್ಲಾ ಕೋರ್ಟ್‌ಗೆ ವರ್ಗಾವಣೆ

ಜ್ಞಾನವಾಪಿ ಮಸೀದಿಯಲ್ಲಿ ದೇವತೆಗಳ ವಿಗ್ರಹಗಳಿವೆ. ಅವುಗಳ ಪೂಜೆಗೆ ಅವಕಾಶ ಕಲ್ಪಿಸಿ ಎಂದು ಹಿಂದೂ ಮಹಿಳೆಯರು ಸಿವಿಲ್ ಅರ್ಜಿಗಳನ್ನು ಸಲ್ಲಿಕೆ ಮಾಡಿದ್ದಾರೆ. ಅರ್ಜಿಯ ವಿಚಾರಣೆ ಮಧ್ಯಾಹ್ನ 2 ಗಂಟೆಗೆ ನಿಗದಿಯಾಗಿದೆ.

ಜ್ಞಾನವಾಪಿ ಪ್ರಕರಣ: ನ್ಯಾ| ಅಜಯ್ ಕೃಷ್ಣ ವಿಶ್ವೇಶ ಅವರ ಬಗ್ಗೆ ತಿಳಿಯಿರಿ ಜ್ಞಾನವಾಪಿ ಪ್ರಕರಣ: ನ್ಯಾ| ಅಜಯ್ ಕೃಷ್ಣ ವಿಶ್ವೇಶ ಅವರ ಬಗ್ಗೆ ತಿಳಿಯಿರಿ

Gyanvapi Masjid Case Petition Varanasi Court Order On Tuesday

ಮಸೀದಿಯಲ್ಲಿ ಹಲವು ದಶಕಗಳಿಂದ ನಮಾಜ್ ಮಾಡಲಾಗುತ್ತಿದೆ. 1991ರ ಪೂಜಾ ಸ್ಥಳಗಳ ಕಾಯ್ದೆಯ ಅನ್ವಯ ಮಸೀದಿ ಮೇಲೆ ಸಿವಿಲ್ ದಾವೆ ಹೂಡಲು ಸಾಧ್ಯವಿಲ್ಲ. ಆದ್ದರಿಂದ ಹಿಂದೂಗಳ ಅರ್ಜಿ ವಜಾಗೊಳಿಸಿ ಎಂದು ಮುಸ್ಲಿಂಮರು ಅರ್ಜಿ ಸಲ್ಲಿಸಿದ್ದಾರೆ.

ಜ್ಞಾನವಾಪಿ ಮಸೀದಿಯಲ್ಲಿ ನಮಾಜ್‌ಗೆ ಅಡ್ಡಿಯಾಗಬಾರದು: ಸುಪ್ರೀಂಕೋರ್ಟ್‌ ಸೂಚನೆ ಜ್ಞಾನವಾಪಿ ಮಸೀದಿಯಲ್ಲಿ ನಮಾಜ್‌ಗೆ ಅಡ್ಡಿಯಾಗಬಾರದು: ಸುಪ್ರೀಂಕೋರ್ಟ್‌ ಸೂಚನೆ

ಜ್ಞಾನವಾಪಿ ಮಸೀದಿ ನಿರ್ವಹಣೆಯನ್ನು ಮಾಡುತ್ತಿರುವ ಅಂಜುಮಾನ್ ಇಂತೆ ಝಮಿಯಾ ಸಮಿತಿ ಸಲ್ಲಿಕೆ ಮಾಡಿರುವ ಅರ್ಜಿ ಸಹ ಕೋರ್ಟ್‌ ಮುಂದೆ ಇದೆ. ಮೊದಲು ಸಲ್ಲಿಕೆಯಾಗಿದ್ದ ಎರಡು ಅರ್ಜಿ ಪರಿಗಣಿಸಿದ್ದ ಕೋರ್ಟ್‌ ಮಸೀದಿಯಲ್ಲಿ ವಿಡಿಯೋ ಸಮೀಕ್ಷೆ ನಡೆಸುವಂತೆ ಸೂಚನೆ ನೀಡಿತ್ತು.

ವಿಡಿಯೋ ಸಮೀಕ್ಷೆ ರದ್ದುಕೋರಿ ಮಸೀದಿ ಸಮಿತಿ ಅಲಹಾಬಾದ್ ಹೈಕೋರ್ಟ್‌ ಮೊರೆ ಹೋಗಿತ್ತು. ಆದರೆ ಕೋರ್ಟ್ ಅರ್ಜಿ ವಜಾಗೊಳಿಸಿತ್ತು. ಬಳಿಕ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು. ಸಮೀಕ್ಷೆ ವರದಿ ಸೋರಿಕೆಯಾಗಿ ಮಸೀದಿಯಲ್ಲಿ ಶಿವಲಿಂಗ ಇದೆ ಎಂಬ ವಿಚಾರ ಬಹಿರಂಗಗೊಂಡಿತ್ತು.

ಮಸೀದಿ ನಿರ್ವಹಣಾ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ವಾರಣಾಸಿ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿತ್ತು. ವಿಡಿಯೋ ಸಮೀಕ್ಷೆ ನಡೆಸಿರುವ ಆಯೋಗ ಮುಚ್ಚಿದ ಲಕೋಟೆಯಲ್ಲಿ ವಾರಣಾಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಕೆ ಮಾಡಿದೆ.

ವಿಡಿಯೋ ಸಮೀಕ್ಷೆ ವೇಳೆ ಶಿವಲಿಂಗ ಪತ್ತೆಯಾಗಿದೆ ಎಂಬ ವರದಿ ಆಧರಿಸಿ ಕಾಶಿ ವಿಶ್ವನಾಥ ದೇವಾಲಯದ ಪ್ರಧಾನ ಅರ್ಚಕ ಕುಲಪತಿ ತಿವಾರಿ ಸೋಮವಾರ ಕೋರ್ಟ್‌ಗೆ ಹೊಸ ಅರ್ಜಿ ಸಲ್ಲಿಸಿದ್ದಾರೆ. ಶಿವಲಿಂಗ ಪೂಜಿಸಲು ಅವಕಾಶ ನೀಡುವಂತೆ ಕೋರಿದ್ದಾರೆ.

English summary
Uttar Pradesh Varanasi district court will hear Gyanvapi Masjid case at 2 pm on Tuesday. Court may order on which petition will take first.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X