ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ್ಞಾನವಾಪಿ ಬಗ್ಗೆ ಟಿಕಾಯತ್: 'ಪ್ರತಿ ಬೆಟ್ಟಗಳ ಮೇಲೆ ಶಿವಲಿಂಗ ಆಕೃತಿ'

|
Google Oneindia Kannada News

ಬುಲಂದ್‌ಶಹರ್ ಜೂನ್ 01: ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ವಿಭಜನೆಯ ನಂತರ ರೈತ ಮುಖಂಡ ರಾಕೇಶ್ ಟಿಕಾಯತ್ ಅವರು ಜ್ಞಾನವಾಪಿ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ಮಂಗಳವಾರ ಮೇ 31 ರಂದು ಬುಲಂದ್‌ಶಹರ್ ತಲುಪಿದ ರಾಕೇಶ್ ಟಿಕಾಯತ್ ಅವರು ಜ್ಞಾನವಾಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಹೇಳಿಕೆ ನೀಡಿದ್ದಾರೆ. 'ಭಾರತದ ಪ್ರತಿ ಬೆಟ್ಟಗಳ ಮೇಲೆ ಶಿವಲಿಂಗ ಆಕೃತಿ ಕಾಣಬಹುದು' ಎಂದು ಟಿಕಾಯತ್ ಹೇಳಿದ್ದಾರೆ. ಇದೇ ವೇಳೆ ಕರ್ನಾಟಕದಲ್ಲಿ ನಡೆದ ದಾಳಿಯ ಕುರಿತು ಮಾತನಾಡಿದ ಅವರು, ದಾಳಿ ಮಾಡಿದವರು ಗೃಹ ಸಚಿವರು ಮತ್ತು ಮುಖ್ಯಮಂತ್ರಿ ಜೊತೆಗಿನ ಫೋಟೋ ಹೊಂದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ ಎಂದಿದ್ದಾರೆ.

ರೈತ ನಾಯಕ ರಾಕೇಶ್ ಟಿಕಾಯಿತ್‌ಗೆ ಮಸಿ - ಪೊಲೀಸರ ವೈಫಲ್ಯ..!ರೈತ ನಾಯಕ ರಾಕೇಶ್ ಟಿಕಾಯಿತ್‌ಗೆ ಮಸಿ - ಪೊಲೀಸರ ವೈಫಲ್ಯ..!

ಬಿಕೆಯು ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕೈತ್ ಮಂಗಳವಾರ ಬುಲಂದ್‌ಶಹರ್ ತಲುಪಿ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದರು. ಈ ವೇಳೆ ಮಾಧ್ಯಮದವರು ರಾಕೇಶ್ ಟಿಕಾಯತ್ ಅವರಿಗೆ ಜ್ಞಾನವಾಪಿ ವಿಚಾರವಾಗಿ ಪ್ರಶ್ನೆ ಕೇಳಿದರು. ಅದಕ್ಕೆ ನೇರ ಉತ್ತರ ನೀಡದ ಟಿಕಾಯತ್ 'ಭಾರತದ ಪ್ರತಿ ಬೆಟ್ಟಗಳ ಮೇಲೆ ಶಿವಲಿಂಗ ಆಕೃತಿ ಕಾಣಬಹುದು' ಎಂದು ಹೇಳಿದರು. ಪರ್ವತದಿಂದ ಯಾವುದಾದರೂ ಕಲ್ಲನ್ನು ಎತ್ತಿಕೊಳ್ಳಿ, ಅದು ಶಿವಲಿಂಗ ಎಂದು ರಾಕೇಶ್ ಟಿಕಾಯತ್ ಹೇಳಿದ್ದಾರೆ. ಇದು ನಮ್ಮ ನಂಬಿಕೆ. ಹೀಗಿರುವಾಗ ಪ್ರತೀಯೊಂದು ಪವರ್ತವನ್ನು ಬಯಸಲು ಸಾಧ್ಯವೇ ಎಂಬರ್ಥದಲ್ಲಿ ಟಿಕಾಯತ್ ಹೇಳಿದ್ದಾರೆ.

Gyanvapi case: Shivling in stone of every mountain in India Says Rakesh Tikait

BKU ಗೆ ಸಂಬಂಧಿಸಿದ ರಾಜ್ಯದಾದ್ಯಂತದ ರೈತರು ಟ್ರ್ಯಾಕ್ಟರ್‌ಗಳೊಂದಿಗೆ ಶೀಘ್ರದಲ್ಲೇ ಲಕ್ನೋಗೆ ಮುತ್ತಿಗೆ ಹಾಕಲಿದ್ದಾರೆ ಮತ್ತು ವಿದ್ಯುತ್, ಹಣದುಬ್ಬರ, ಕಬ್ಬಿನ ಪಾವತಿ ಮತ್ತು ಇತರ ಬೇಡಿಕೆಗಳ ಕುರಿತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಲಿದ್ದಾರೆ ಎಂದು ರಾಕೇಶ್ ಟಿಕಾಯತ್ ಹೇಳಿದರು. ಸರಕಾರ ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಅದೇ ಸಮಯದಲ್ಲಿ, ಕರ್ನಾಟಕದಲ್ಲಿ ನಡೆದ ದಾಳಿಯ ಬಗ್ಗೆ ಮಾತನಾಡಿದ ಅವರು, ಇದು ನನ್ನ ವಿರುದ್ಧ ನಡೆದ ಸಂಚು ಎಂದು ಟಿಕಾಯತ್ ಹೇಳಿದರು. ಈ ಹಿಂದೆಯೂ ಅವರ ಮೇಲೆ ಹಲ್ಲೆಗೆ ಸಂಚು ರೂಪಿಸಲಾಗಿತ್ತು ಎಂದಿದ್ದಾರೆ.

Gyanvapi case: Shivling in stone of every mountain in India Says Rakesh Tikait

ಈ ವೇಳೆ ದಾಳಿ ಮಾಡಿದವರು ಕರ್ನಾಟಕ ಗೃಹ ಸಚಿವರು ಮತ್ತು ಮುಖ್ಯಮಂತ್ರಿಗಳ ಜೊತೆಗೆ ಫೋಟೋ ತೆಗೆಸಿಕೊಂಡಿದ್ಧಾರೆ ಎಂದು ಅಲ್ಲಿನ ಪೊಲೀಸರು ಹೇಳಿದ್ದಾರೆ. ಈ ಬಗ್ಗೆ ಕರ್ನಾಟಕ ಪೊಲೀಸರು ಪ್ರಾಮಾಣಿಕವಾಗಿ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

(ಒನ್ಇಂಡಿಯಾ ಸುದ್ದಿ)

Recommended Video

ಶಿವಾಂಗಿ ಗೋಯೆಲ್ UPSC ನಲ್ಲಿ 177ನೇ ರಾಂಕ್ !! | OneIndia Kannada

English summary
Gyanvapi case: 'Shivalinga can be seen on every hill in India,' Farmers' leader Rakesh Tikayat said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X