ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗಸ್ಟ್ 30ರ ತನಕ ಸರ್ಕಾರಿ ಉದ್ಯೋಗಿಗಳ ರಜೆ ಕಡಿತ

|
Google Oneindia Kannada News

ಲಕ್ನೋ, ಜುಲೈ 09 : ಲಕ್ನೋ ಜಿಲ್ಲಾಡಳಿತ ಎಲ್ಲಾ ಸರ್ಕಾರಿ ಉದ್ಯೋಗಿಗಳ ರಜೆಗಳನ್ನು ಆಗಸ್ಟ್ 30ರ ತನಕ ಕಡಿತಗೊಳಿಸಿದೆ. ಕೋವಿಡ್ -19 ಪರಿಸ್ಥಿತಿ ಹಿನ್ನಲೆಯಲ್ಲಿ ಎಲ್ಲರೂ ಕಾರ್ಯ ನಿರ್ವಹಣೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.

Recommended Video

Facebook , Instagram , tinder ಸೇರಿದಂತೆ ಬಾರತೀಯ ಸೇನೆಯು 89 ಆ್ಯಪ್‌ಗಳನ್ನು ನಿಷೇಧಿಸಿದೆ.| Oneindia Kannada

ಗುರುವಾರ ಲಕ್ನೋ ಜಿಲ್ಲಾಡಳಿತ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ -1987ರ ಅಡಿ ಈ ಆದೇಶ ಹೊರಡಿಸಿದೆ. ಜಿಲ್ಲಾ ಮಟ್ಟದಲ್ಲಿ ನಿಯೋಜನೆಗೊಂಡ ಅಧಿಕಾರಿ, ಬೇರೆ ಇಲಾಖೆಗಳಿಗೆ ಕೋವಿಡ್ ನಿಯಂತ್ರಣಕ್ಕೆ ನಿಯೋಜನೆಗೊಂಡವರು ಆಗಸ್ಟ್ 30ರ ತನಕ ರಜೆ ಪಡೆಯಬಾರದು ಎಂದು ತಿಳಿಸಲಾಗಿದೆ.

ಎಮ್ಮೆ ನೋಡಿಕೊಳ್ಳಲು ರಜೆ ಬೇಕು; ಪೊಲೀಸ್ ಕಾನ್ಸ್‌ಟೇಬಲ್ ರಜೆ ಪತ್ರ ವೈರಲ್ ಎಮ್ಮೆ ನೋಡಿಕೊಳ್ಳಲು ರಜೆ ಬೇಕು; ಪೊಲೀಸ್ ಕಾನ್ಸ್‌ಟೇಬಲ್ ರಜೆ ಪತ್ರ ವೈರಲ್

ಜಿಲ್ಲಾಧಿಕಾರಿ ಅಭಿಷೇಕ್ ಪ್ರಕಾಶ್ ಈ ಕುರಿತು ಮಾಹಿತಿ ನೀಡಿದ್ದು, "ಉದ್ಯೋಗಿಗಳು ಸಿಎಲ್ ಪಡೆಯಲು ಸಹ ಅವಕಾಶವಿಲ್ಲ. ಎಲ್ಲಾ ಇಲಾಖೆಯ ನೌಕರರಿಗೂ ಈ ನಿಯಮ ಅನ್ವಯವಾಗಲಿದೆ" ಎಂದು ಹೇಳಿದ್ದಾರೆ.

ಹೆಚ್ಚುತ್ತಿರುವ ಕೊರೊನಾ: ಬಿಬಿಎಂಪಿ ನೌಕರರಿಗೆ ರಜೆ ರದ್ದುಹೆಚ್ಚುತ್ತಿರುವ ಕೊರೊನಾ: ಬಿಬಿಎಂಪಿ ನೌಕರರಿಗೆ ರಜೆ ರದ್ದು

Government Employees Leave Cancelled Till August 30

ನೌಕರರು ರಜೆ ಕೇಳಿದರು ಎಂದು ರಜೆ ಮಂಜೂರು ಮಾಡುವುದು ಸಹಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ 1987ರ ಅನ್ವಯ ಅಪರಾಧವಾಗಿದೆ. ರಜೆ ನೀಡಿದವರು ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಂದೆ ವಿವರಣೆ ನೀಡಬೇಕಾಗುತ್ತದೆ ಎಂದು ತಿಳಿಸಲಾಗಿದೆ.

ಕೊರೊನಾಭೀತಿ: ಮುಂದಿನ ಅನಾಹುತ ತಪ್ಪಿಸಿ ರಜೆ ಕೊಡಿ-ಸರ್ಕಾರಿ ನೌಕರರ ಅಳಲು ಕೊರೊನಾಭೀತಿ: ಮುಂದಿನ ಅನಾಹುತ ತಪ್ಪಿಸಿ ರಜೆ ಕೊಡಿ-ಸರ್ಕಾರಿ ನೌಕರರ ಅಳಲು

ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಪ್ರಸ್ತುತ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 1783. ತೀರಾ ತುರ್ತು ಪರಿಸ್ಥಿತಿಯಲ್ಲಿ ಸರ್ಕಾರಿ ಉದ್ಯೋಗಿಗಳು ರಜೆ ಪಡೆಯಬಹುದಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

English summary
Lucknow district administration cancelled all leaves of government employees till August 30, 2020 in a view of COVID - 19 pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X