ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಡುಗಿಯರಿಗೆ ಮೊಬೈಲ್‌ ನೀಡಬಾರದು, ಅದು ಅತ್ಯಾಚಾರಕ್ಕೆ ಕಾರಣವಾಗುತ್ತೆ ಎಂದ ಯುಪಿ ಮಹಿಳಾ ಆಯೋಗ ಸದಸ್ಯೆ!

|
Google Oneindia Kannada News

ಲಕ್ನೋ, ಜೂ. 10: ''ಹುಡುಗಿಯರಿಗೆ ಮೊಬೈಲ್ ಫೋನ್ ನೀಡಬಾರದು, ಅದು ಅತ್ಯಾಚಾರಗಳಿಗೆ ಕಾರಣವಾಗುತ್ತದೆ'' ಎಂಬ ವಿವಾದಾತ್ಮಕ ಹೇಳಿಕೆಯನ್ನು ಉತ್ತರ ಪ್ರದೇಶ ಮಹಿಳಾ ಆಯೋಗದ ಸದಸ್ಯೆ ನೀಡಿದ್ದಾರೆ. ಅಲಿಗಢ ಜಿಲ್ಲೆಯ ಮಹಿಳೆಗೆ ಸಂಬಂಧಿಸಿದ ದೂರಿನ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ ಮೀನಾ ಕುಮಾರಿ ಈ ಹೇಳಿಕೆ ನೀಡಿದ್ದಾರೆ.

"ಹುಡುಗಿಯರಿಗೆ ಮೊಬೈಲ್ ಫೋನ್ ನೀಡಬಾರದು. ಹುಡುಗಿಯರು ಹುಡುಗರೊಂದಿಗೆ ಗಂಟೆಗಟ್ಟಲೆ ಫೋನ್‌ಗಳಲ್ಲಿ ಮಾತನಾಡುತ್ತಾರೆ. ಬಳಿಕ ಹುಡುಗರೊಂದಿಗೆ ಓಡಿಹೋಗುತ್ತಾರೆ. ಹುಡುಗಿಯರ ಫೋನ್‌ಗಳನ್ನು ಕೂಡಾ ಈ ಪರಿಶೀಲನೆ ಮಾಡಲಾಗುತ್ತಿಲ್ಲ. ಕುಟುಂಬ ಸದಸ್ಯರಿಗೆ ಈ ವಿಚಾರದ ಅರಿವೇ ಇರುವುದಿಲ್ಲ" ಎಂದು ಯುಪಿ ಮಹಿಳಾ ಆಯೋಗದ ಸದದ್ಯೆ ಮೀನಾ ಕುಮಾರಿ ಹೇಳಿದ್ದಾರೆ.

 ಅರೆಬರೆ ಹರಿದ ಜೀನ್ಸ್‌ ತೊಟ್ಟ ಮಹಿಳೆ ಏನು ಸಂದೇಶ ನೀಡಬಲ್ಲಳು?; ಉತ್ತರಾಖಂಡ ಸಿಎಂ ವಿವಾದಾತ್ಮಕ ಹೇಳಿಕೆ ಅರೆಬರೆ ಹರಿದ ಜೀನ್ಸ್‌ ತೊಟ್ಟ ಮಹಿಳೆ ಏನು ಸಂದೇಶ ನೀಡಬಲ್ಲಳು?; ಉತ್ತರಾಖಂಡ ಸಿಎಂ ವಿವಾದಾತ್ಮಕ ಹೇಳಿಕೆ

''ಮಹಿಳೆಯರ ಮೇಲಿನ ಹೆಚ್ಚುತ್ತಿರುವ ಅಪರಾಧಗಳ ಬಗ್ಗೆ ಸಮಾಜವೇ ಗಂಭೀರವಾಗಿರಬೇಕು. ಪೋಷಕರು, ವಿಶೇಷವಾಗಿ ತಾಯಂದಿರು ದೊಡ್ಡ ಜವಾಬ್ದಾರಿಯನ್ನು ಹೊಂದಿದ್ದಾರೆ. ತಾಯಂದಿರು ತಮ್ಮ ಹೆಣ್ಣುಮಕ್ಕಳ ಮೇಲೆ ನಿಗಾವಹಿಸಬೇಕು. ಈ ವಿಚಾರದಲ್ಲಿ ತಾಯಂದಿರಿಗೆ ದೊಡ್ಡ ಜವಾಬ್ದಾರಿ ಇದೆ. ತಾಯಂದಿರು ತಮ್ಮ ಹೆಣ್ಣುಮಕ್ಕಳ ಬಗ್ಗೆ ಅಸಡ್ಡೆ ಹೊಂದಿದ್ದರೆ, ಮುಂದಿನ ಪರಿಣಾಮಕ್ಕೆ ತಾಯಂದಿರೇ ಜವಾಬ್ದಾರರು" ಎಂದಿದ್ದಾರೆ.

Girls should not be given phones as it leads to rapes says UP Womens Commission member

ಆದರೆ ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಆಯೋಗದ ಉಪಾಧ್ಯಕ್ಷೆ ಅಂಜು ಚೌಧರಿ, ''ಹೆಣ್ಣು ಮಕ್ಕಳಿಗೆ ಮೊಬೈಲ್‌ ಫೋನ್‌ ನೀಡದಿರುವುದು ಲೈಂಗಿಕ ದೌರ್ಜನ್ಯವನ್ನು ಕೊನೆಗೊಳಿಸಲು ಇರುವ ಉಪಾಯವಲ್ಲ, ಇದು ಪರಿಹಾರವೂ ಅಲ್ಲ'' ಎಂದು ಸ್ಪಷ್ಟಪಡಿಸಿದ್ದಾರೆ.

ಜನವರಿಯಲ್ಲಿ, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಚಂದ್ರಮುಖಿ ದೇವಿ ಬಾದೌನ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ತಮ್ಮ ಅಭಿಪ್ರಾಯ ನೀಡುವ ಸಂದರ್ಭ ಈ ರೀತಿಯೇ ವಿವಾದ ಮೈಮೇಲೆ ಎಳೆದುಕೊಂಡಿದ್ದರು. ''ಮಹಿಳೆಯರು ಸಂಜೆ ಹೊರಗೆ ಹೋಗದಿದ್ದರೆ ಈ ಘಟನೆಯನ್ನು ತಪ್ಪಿಸಬಹುದಿತ್ತು'' ಎಂದು ಕೂಡಾ ಹೇಳಿದ್ದರು. ಈ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಚಂದ್ರಮುಖಿ ದೇವಿ ತನ್ನ ಹೇಳಿಕೆಯನ್ನು ಹಿಂತೆಗೆದುಕೊಂಡಿದ್ದರು.

(ಒನ್‌ಇಂಡಿಯಾ ಸುದ್ದಿ)

English summary
Girls should not be given phones as it leads to rapes: UP Women's Commission member Meena Kumari's Controversial statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X