ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಟುಂಬದವರಿಗೆ ವಿಷ ಹಾಕಿ ಪ್ರಿಯಕರನ ಜೊತೆ ಓಡಿ ಹೋದ ಅಪ್ರಾಪ್ತೆ

|
Google Oneindia Kannada News

ಲಕ್ನೋ, ಸೆಪ್ಟೆಂಬರ್ 12: ಕುಟುಂಬದವರಿಗೆ ವಿಷ ಹಾಕಿ ಅಪ್ರಾಪ್ತೆ ಪ್ರಿಯಕರನ ಜೊತ ಓಡಿ ಹೋಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ತಮ್ಮ ಪ್ರೀತಿಗೆ ಕುಟುಂಬದವರು ಮುಳ್ಳಾಗುತ್ತಾರೆ ಎಂದು ಭಾವಿಸಿ ಅಪ್ರಾಪ್ತೆಯೊಬ್ಬಳು ಕುಟುಂಬದವರಿಗೇ ವಿಷ ಹಾಕಿದ್ದಾಳೆ. ಬಳಿಕ ರಾತ್ರಿ ಓಡಿಹೋಗಿದ್ದಾರೆ.

ಸುಳ್ವಾಡಿ ವಿಷ ಪ್ರಸಾದ ದುರಂತ: ಇಮ್ಮಡಿ ಮಹದೇವಸ್ವಾಮಿಗೆ ಮಠದಿಂದ ಕೊಕ್?ಸುಳ್ವಾಡಿ ವಿಷ ಪ್ರಸಾದ ದುರಂತ: ಇಮ್ಮಡಿ ಮಹದೇವಸ್ವಾಮಿಗೆ ಮಠದಿಂದ ಕೊಕ್?

ರಾತ್ರಿ ತಯಾರಿಸಿದ್ದ ಅಡುಗೆಯಲ್ಲಿ ಆಕೆ ವಿಷ ಬೆರೆಸಿದ್ದಾಳೆ, ಆಹಾರ ಸೇವಿಸಿದ ಬಳಿಕ ಬಾಲಕಿಯ ತಾಯಿ, ಸಹೋದರ, ಸಹೋದರಿಯರು, ಅತ್ತಿಗೆ ಪ್ರಜ್ಞೆ ತಪ್ಪಿದ್ದಾರೆ.

Girl Poisons Family And Ran Away With Boyfriend

ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂಬ ಆರೋಪ ಮೇಲೆ ಯುವಕ ಜೈಲು ಸೇರಿದ್ದ. ಈ ಸಂಬಂಧ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಯುವಕ ಜೈಲಿನಿಂದ ಹೊರಬಂದಿದ್ದು ಅದೇ ಬಾಲಕಿ ಜೊತೆಗೆ ಇದೀಗ ಓಡಿಹೋಗಿದ್ದಾನೆ.

ಪುನರ್ವಸತಿ ಕೇಂದ್ರದಲ್ಲಿ ವಿಷಾಹಾರ ಸೇವನೆ: 30 ನಿರಾಶ್ರಿತರು ಅಸ್ವಸ್ಥಪುನರ್ವಸತಿ ಕೇಂದ್ರದಲ್ಲಿ ವಿಷಾಹಾರ ಸೇವನೆ: 30 ನಿರಾಶ್ರಿತರು ಅಸ್ವಸ್ಥ

ಈ ವೇಳೆ ಬಾಲಕಿ ಪ್ರಿಯಕರನ ಜೊತೆ ಎಸ್ಕೇಪ್ ಆಗಿದ್ದಾಳೆ. ಆಹಾರದಲ್ಲಿ ವಿಷದ ಪ್ರಮಾಣ ಕಡಿಮೆ ಇದ್ದಿದ್ದರಿಂದ ಪ್ರಜ್ಞೆ ತಪ್ಪಿದ್ದಾರೆ ಅಷ್ಟೇ. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರಿಂದ ಪ್ರಾಣಾಪಾಯದಿಂದ ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಮೊರಾದಬಾದ್ ನಲ್ಲಿ ನಡೆದಿದೆ.

English summary
Girl Poisons Family And Ran Away With Boyfriend, girl ran away along with her boyfriend after allegedly poisoning the meals meant for her household in Uttar Pradesh’s Moradabad district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X