• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಾಲಕಿ ಮೇಲೆ ಅತ್ಯಾಚಾರವೆಸಗಿ ಶ್ವಾಸಕೋಶ ಕಿತ್ತು ತೆಗೆದ ಆರೋಪಿಗಳು

|

ಕಾನ್ಪುರ, ನವೆಂಬರ್ 17: ಆರು ವರ್ಷದ ಬಾಲೆ ಮೇಲೆ ಅತ್ಯಾಚಾರವೆಸಗಿದ ಆರೋಪಿಗಳು ಶ್ವಾಸಕೋಶವನ್ನು ಕಿತ್ತು ತೆಗೆದಿದ್ದಾರೆ.

ಉತ್ತರ ಪ್ರದೇಶದ ಕಾಡಿನಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು. ಆಕೆಯ ಮೇಲ ಸಾಮೂಹಿಕ ಅತ್ಯಾಚಾರ ನಡೆಸಿ , ಶ್ವಾಸಕೋಶವನ್ನು ಕಿತ್ತು ತೆಗೆದು ಕೊಲೆ ಮಾಡಿದ್ದರು.

ಹಾವೇರಿಯಲ್ಲಿ ಹೆತ್ತ ತಾಯಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಮಗ

ವಾಮಾಚಾರ ನಡೆಸಿ ಆಕೆಯನ್ನು ಹತ್ಯೆ ಮಾಡಲಾಗಿತ್ತು , ದೀಪಾವಳಿ ದಿನ ಬಾಲಕಿ ನಾಪತ್ತೆಯಾಗಿದ್ದಳು. ಭಾನುವಾರ ಆರೋಪಿಗಳಾದ ಅಂಕುಲ್ ಕುರಿಲ್, ಬೀರನ್‌ನನ್ನು ಬಂಧಿಸಲಾಗಿದೆ.

ವಾಮಾಚಾರ ಮಾಡಿದ ಪರಶುರಾಮ್ ಹಾಗೂ ಇದೆಲ್ಲಾ ಘಟನೆ ತಿಳಿದಿದ್ದೂ ಹೇಳದ ಪತ್ನಿಯನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಪರಶುರಾಮ ಮೊದಲು ಪೊಲೀಸರನ್ನು ದಾರಿತಪ್ಪಿಸಲು ಮುಂದಾಗಿದ್ದ, ಬಳಿಕ ಪೊಲೀಸರ ತನಿಖೆ ವೇಳೆ ಸತ್ಯವನ್ನು ಒಪ್ಪಿಕೊಂಡಿದ್ದಾನೆ.

ಬಾಲಕಿಯನ್ನು ಕೊಂದು ಆಕೆಯ ಶ್ವಾಸಕೋಶವನ್ನು ಹೊರಗೆ ತೆಗೆಯುವುದರಿಂದ ಪರಶುರಾಮನ ಪತ್ನಿಗೆ ಮಕ್ಕಳಾಗುತ್ತದೆ ಎಂದು ಯಾರೋ ಹೇಳಿದ್ದ ಸುಳ್ಳನ್ನು ಸತ್ಯವೆಂದು ನಂಬಿ ಈ ರೀತಿ ಮಾಡಿದ್ದರು.

ಅಂಕುಲ್ ಹಾಗೂ ಬೀರನ್ ಅವರ ಬಳಿ ಬಾಲಕಿಯನ್ನು ಅಪಹರಿಸುವಂತೆ ಪರಶುರಾಮ್ ಹೇಳಿದ್ದ, ಆದರೆ ಅಂಕುಲ್ ಮತ್ತು ಬೀರನ್ ಇಬ್ಬರೂ ಮದ್ಯದ ಅಮಲಿನಲ್ಲಿದ್ದರು, ಆಕೆಯನ್ನು ಅಪಹರಿಸಿ ಕರೆ ತರುವ ಮುನ್ನ ಆಕೆಯ ಮೇಲೆ ಅತ್ಯಾಚಾರವೆಗಿದ್ದರು.

ಬಾಲಕಿ ಪಟಾಕಿ ತರಲೆಂದು ಅಂಗಡಿಗೆ ಹೊರಟಾಗ ಇವರಿಬ್ಬರು ಆಕೆಯನ್ನು ಅಪಹಿಸಿದ್ದರು.

ಬಾಲಕಿ ಕಾಣೆಯಾದ ಬಳಿಕ ಮನೆಯ ಹತ್ತಿರದ ಎಲ್ಲಾ ಪ್ರದೇಶಗಳಲ್ಲಿ ಆಕೆಯನ್ನು ಹುಡುಕಿದ್ದಾರೆ. ಆದರೆ ಭಾನುವಾರ ಸಂಜೆ ಕಾಡಿನಲ್ಲಿ ದೇಹ ಪತ್ತೆಯಾಗಿದೆ. ಮರದ ಬಳಿ ಆಕೆಯ ಬಟ್ಟೆ, ಚಪ್ಪಲಿಗಳು ದೊರೆತಿದ್ದವು.

English summary
A six-year-old girl, who was found dead in a forested area in this Uttar Pradesh district on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X