ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೈಕ್ ಒಂದು ಸವಾರರು ಏಳು ಜನ: ವಿಡಿಯೋ

|
Google Oneindia Kannada News

ಗಾಜಿಯಾಬಾದ್ ಆಗಸ್ಟ್ 05: ಟ್ರಾಫಿಕ್ ನಿಯಮಗಳನ್ನು ಪಾಲಿಸುವಂತೆ ಪೊಲೀಸರು ಅದೆಷ್ಟೇ ಪ್ರಯತ್ನಪಟ್ಟರೂ ಕ್ರಮಗಳನ್ನು ಕೈಗೊಂಡರೂ ಜನ ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಲೇ ಇರುತ್ತಾರೆ. ರಾಜಧಾನಿ ದೆಹಲಿಯ ಪಕ್ಕದಲ್ಲಿರುವ ಯುಪಿಯ ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲಿ ಇಂತಹ ಹಲವು ಪ್ರಕರಣಗಳು ವರದಿಯಾಗಿವೆ. ಇದೀಗ ಮತ್ತೊಮ್ಮೆ ಗಾಜಿಯಾಬಾದ್‌ನ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಒಂದು ಬೈಕ್‌ ಮೇಲೆ ಒಂದಲ್ಲ ಎರಡಲ್ಲ ಬರೋಬ್ಬರಿ 7 ಮಂದಿ ಯುವಕರು ಸವಾರಿ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಪೊಲೀಸರು ಕ್ರಮ ಕೈಗೊಂಡು 24 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.

ಗಾಜಿಯಾಬಾದ್‌ನ ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರತಾಪ್ ವಿಹಾರ್ ರಸ್ತೆಯಲ್ಲಿ ಈ ವಿಡಿಯೋ ಸೆರೆಹಿಡಿಯಲಾಗಿದೆ. ಬೈಕ್ ನಲ್ಲಿ ಹೋಗುತ್ತಿದ್ದ ಏಳು ಜನ ಯುವಕರು ರಸ್ತೆಯಲ್ಲಿ ಮೋಜು ಮಸ್ತಿ ಮಾಡುತ್ತಿದ್ದರು. ಯುವಕರು ನಡುರಸ್ತೆಯಲ್ಲಿ ಬೈಕ್ ಓಡಿಸುತ್ತಲೇ ಇದ್ದರು. ಯುವಕರು ಬಹಿರಂಗವಾಗಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಬೈಕ್ ಹಿಂದೆ ಓಡುತ್ತಿದ್ದ ಮತ್ತೊಬ್ಬ ಬೈಕ್ ಸವಾರ ಈ ಯುವಕರನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ವೈರಲ್ ಆದ ವಿಡಿಯೋವನ್ನು ಅರಿತು ಪೊಲೀಸರು ಆರೋಪಿ ಯುವಕರ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

ಏಳು ಮಂದಿ ಯುವಕರು ಬೈಕ್ ಚಲಾಯಿಸುತ್ತಿರುವ ವಿಡಿಯೋ ವೈರಲ್ ಆದ ನಂತರ ಗಾಜಿಯಾಬಾದ್ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು 24 ಸಾವಿರ ರೂ. ದಂಡ ವಿಧಿಸಲಾಗಿದೆ. ಟ್ರಾಫಿಕ್ ಎಸ್‌ಪಿ ರಮಾನಂದ್ ಕುಶ್ವಾಹ ಪ್ರಕಾರ, ಬೈಕ್ ಅನ್ನು ನಿಯಮ ಪಾಲಿಸಿ ಓಡಿಸಬೇಕಿದ್ದು, ಈ ರೀತಿ 7 ಆಸನದ ಕಾರಿನಂತೆ ಬೈಕ್ ಓಡಿಸಿದರೆ ಭಾರೀ ದಂಡ ತೆರಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

Ghaziabad Video: One bike seven riders

ಮೋಟಾರ್ ಸೈಕಲ್‌ನಲ್ಲಿ ಇಬ್ಬರು ಕುಳಿತುಕೊಳ್ಳಲು ಆಸನವಿದೆ. ಸಂಚಾರಿ ನಿಯಮದ ಪ್ರಕಾರ ಬೈಕ್‌ನಲ್ಲಿ ಇಬ್ಬರಿಗಿಂತ ಹೆಚ್ಚು ಜನರು ಕುಳಿತುಕೊಳ್ಳುವುದು ನಿಯಮಕ್ಕೆ ವಿರುದ್ಧವಾಗಿದೆ. ಹಾಗೆ ಮಾಡಿದರೆ ದಂಡ ಪಾವತಿಸಬೇಕು. ಆದರೂ ನಿಯಮ ಉಲ್ಲಂಘಿಸಲು ಜನ ಹಿಂಜರಿಯುವುದಿಲ್ಲ. ಅಂತಹ ಜನರು ತನಗೆ ಮತ್ತು ರಸ್ತೆಯ ಇತರ ಚಾಲಕರಿಗೆ ಅಪಾಯಕಾರಿ ಎಂದು ಹೇಳಿದರು.

English summary
A video of seven people riding a bike in UP's Ghaziabad has gone viral. know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X