ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಜಿಯಾಬಾದ್: 5 ವರ್ಷ ಬಾಲಕಿಯ ಮಂಕಿಪಾಕ್ಸ್ ಪರೀಕ್ಷಾ ವರದಿ ಬಹಿರಂಗ

|
Google Oneindia Kannada News

ಘಾಜಿಯಾಬಾದ್ ಜೂನ್ 07: ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯಲ್ಲಿ ಮಂಗನ ಕಾಯಿಲೆಯ ಶಂಕಿತ ರೋಗಿಯ ಬಗ್ಗೆ ಕಳೆದ ಎರಡು-ಮೂರು ದಿನಗಳಿಂದ ಇದ್ದ ಆತಂಕಗಳು ಅಂತ್ಯಗೊಂಡಿವೆ. ಇಂದು (ಜೂನ್ 07 ರಂದು) ಪುಣೆಯ ಐಸಿಎಂಆರ್‌ನಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಲ್ಯಾಬ್‌ನಿಂದ ಐದು ವರ್ಷದ ಬಾಲಕಿಯ ವರದಿ ಬಂದಿದೆ.

ಪ್ರಯೋಗಾಲಯದ ವರದಿಯ ಪ್ರಕಾರ, ಬಾಲಕಿಗೆ ಮಂಕಿಪಾಕ್ಸ್ ಇಲ್ಲ ಮತ್ತು ಆಕೆಯ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ವಾಸ್ತವವಾಗಿ ಜೂನ್ 03 ರಂದು, ಬಾಲಕಿ ದೇಹದ ಮೇಲೆ ತುರಿಕೆ ಮತ್ತು ದದ್ದುಗಳು ಕಾಣಿಸಿಕೊಂಡಿದ್ದವು. ಐದು ವರ್ಷದ ಬಾಲಕಿಯ ವರದಿಯನ್ನು ಪರೀಕ್ಷೆಗಾಗಿ ಪುಣೆಯಲ್ಲಿರುವ ಲ್ಯಾಬ್‌ಗೆ ಕಳುಹಿಸಲಾಗಿತ್ತು.

ಗಾಜಿಯಾಬಾದ್: 5 ವರ್ಷದ ಬಾಲಕಿಯಲ್ಲಿ ಮಂಕಿಪಾಕ್ಸ್ ಲಕ್ಷಣ, ಪರೀಕ್ಷೆಗೆ ಮಾದರಿಗಾಜಿಯಾಬಾದ್: 5 ವರ್ಷದ ಬಾಲಕಿಯಲ್ಲಿ ಮಂಕಿಪಾಕ್ಸ್ ಲಕ್ಷಣ, ಪರೀಕ್ಷೆಗೆ ಮಾದರಿ

5 ವರ್ಷದ ಬಾಲಕಿಗೆ ಮಂಕಿಪಾಕ್ಸ್ ಇಲ್ಲ

5 ವರ್ಷದ ಬಾಲಕಿಗೆ ಮಂಕಿಪಾಕ್ಸ್ ಇಲ್ಲ

ಶುಕ್ರವಾರ ಗಾಜಿಯಾಬಾದ್‌ನ ರಾಜನಗರದಲ್ಲಿರುವ ಹರ್ಷ ಇಎನ್‌ಟಿ ಕ್ಲಿನಿಕ್‌ನಲ್ಲಿ ಐದು ವರ್ಷದ ಬಾಲಕಿಯನ್ನು ಕಿವಿಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಮಯದಲ್ಲಿ, ಹುಡುಗಿ ದೇಹದ ಮೇಲೆ ತುರಿಕೆ ಮತ್ತು ದದ್ದುಗಳು ಕಂಡುಬಂದಿರುವುದನ್ನ ವೈದ್ಯರು ಗಮನಿಸಿದ್ದಾರೆ. ಮಗುವಿನಲ್ಲಿ ಮಂಕಿಪಾಕ್ಸ್ ಲಕ್ಷಣಗಳು ಕಂಡುಬಂದ ನಂತರ ಆರೋಗ್ಯ ಇಲಾಖೆಯು ಎಚ್ಚೆತ್ತುಕೊಂಡಿದೆ. ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಆರ್.ಕೆ.ಗುಪ್ತಾ ಅವರು ತಂಡ ಮಂಗನಪಾಕ್ಸ್ ಶಂಕಿತ ರೋಗಿಯ ಮಾದರಿಯನ್ನು ಪುಣೆಯ NIV ಲ್ಯಾಬ್‌ಗೆ ಕಳುಹಿಸಿದ್ದಾರೆ. ಜೊತೆಗೆ ಬಾಲಕಿಯ ಕುಟುಂಬಸ್ಥರು ಪ್ರತ್ಯೇಕಗೊಳಿಸಲಾಗಿತ್ತು.

ಹೆಣ್ಣು ಮಗುವಿಗೆ ಬೇರೆ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲ ಮತ್ತು ಕಳೆದ 1 ತಿಂಗಳಿನಿಂದ ಆಕೆ ಅಥವಾ ಆಕೆಯ ಆಪ್ತರು ವಿದೇಶ ಪ್ರವಾಸ ಮಾಡಿಲ್ಲ. ಆದರೆ ಬಾಲಕಿ ದೇಹದ ಮೇಲೆ ದದ್ದುಗಳು ಕಾಣಿಸಿಕೊಂಡಿವೆ. ಇದು ಎಲ್ಲರಿಗೂ ಆತಂಕವನ್ನು ಮೀಡಿಸಿತ್ತು. ಆದರೀಗ ಪುಣೆಯಲ್ಲಿರುವ ಐಸಿಎಂಆರ್‌ನಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಲ್ಯಾಬ್‌ನಿಂದ ವರದಿ ಬಂದಿದೆ, ಅದು ನೆಗೆಟಿವ್ ಆಗಿದೆ.

ಭಾರತದಲ್ಲಿ ಮಂಕಿಪಾಕ್ಸ್ ಪ್ರಕರಣ ಕಂಡುಬಂದಿಲ್ಲ

ಭಾರತದಲ್ಲಿ ಮಂಕಿಪಾಕ್ಸ್ ಪ್ರಕರಣ ಕಂಡುಬಂದಿಲ್ಲ

ಯುಕೆ ಮತ್ತು ಇತರ ಕೆಲವು ದೇಶಗಳಲ್ಲಿ ಮಂಕಿಪಾಕ್ಸ್ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಆದರೂ ಭಾರತದಲ್ಲಿ ಇದುವರೆಗೆ ಯಾವುದೇ ಪ್ರಕರಣ ವರದಿಯಾಗಿಲ್ಲ. ಆದರೆ ಮುನ್ನೆಚ್ಚರಿಕೆಯಾಗಿ, ಕೇಂದ್ರ ಸರ್ಕಾರವು 'ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್' ಮತ್ತು 'ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್' ಈ ಬಗ್ಗೆ ಎಚ್ಚರವಾಗಿರುವಂತೆ ಹೇಳಿದೆ. ಆದ್ದರಿಂದ ಪ್ರತಿಯೊಬ್ಬರೂ ಈ ಕಾಯಿಲೆಯ ಚಿಹ್ನೆಗಳು ಮತ್ತು ರೋಗಲಕ್ಷಣಗಳ ಬಗ್ಗೆ ತಿಳಿದಿರುವುದು ಮುಖ್ಯವಾಗಿದೆ.

ಸೋಂಕು ಎಷ್ಟು ದಿನ ಬಾಧಿಸುತ್ತದೆ?

ಸೋಂಕು ಎಷ್ಟು ದಿನ ಬಾಧಿಸುತ್ತದೆ?

ಮಂಕಿಪಾಕ್ಸ್‌ನ ಲಕ್ಷಣಗಳು ಮಂಕಿಪಾಕ್ಸ್ ಸಿಡುಬಿನಂತೆಯೇ ಅಪರೂಪದ ವೈರಲ್ ಸೋಂಕು. ಈ ಸೋಂಕು ಜ್ವರ, ತಲೆನೋವು, ಊತ, ಬೆನ್ನು ನೋವು, ಸ್ನಾಯು ನೋವು ಮತ್ತು ಸಾಮಾನ್ಯ ಆಲಸ್ಯವನ್ನು ಒಳಗೊಂಡಿರುತ್ತದೆ. ಜ್ವರದ ಸಮಯದಲ್ಲಿ ತೀವ್ರವಾದ ತುರಿಕೆ ದದ್ದು ಚರ್ಮದ ಮೇಲೆ ಬೆಳೆಯಬಹುದು. ಇದು ಸಾಮಾನ್ಯವಾಗಿ ಮುಖದ ಮೇಲೆ ಪ್ರಾರಂಭವಾಗುತ್ತದೆ ಮತ್ತು ದೇಹದ ಇತರ ಭಾಗಗಳಿಗೆ ಹರಡುತ್ತದೆ. ಸೋಂಕು ಸಾಮಾನ್ಯವಾಗಿ 14 ರಿಂದ 21 ದಿನಗಳವರೆಗೆ ಇರುತ್ತದೆ.

ತಜ್ಞರ ಸಲಹೆಗಳು

ತಜ್ಞರ ಸಲಹೆಗಳು

*ಸಾಬೂನು ಮತ್ತು ನೀರು ಅಥವಾ ಆಲ್ಕೋಹಾಲ್ ಆಧಾರಿತ ಸ್ಯಾನಿಟೈಜರ್‌ನಿಂದ ನಿಮ್ಮ ಕೈಗಳನ್ನು 20 ಸೆಕೆಂಡುಗಳ ಕಾಲ ಸ್ವಚ್ಛಗೊಳಿಸುವ ಮೂಲಕ ಕೈಗಳ ನೈರ್ಮಲ್ಯವು ಅತ್ಯಂತ ಪ್ರಮುಖ ತಡೆಗಟ್ಟುವ ಕ್ರಮವಾಗಿದೆ.

*ಪ್ರಾಣಿಗಳಿಂದ ಮನುಷ್ಯರಿಗೆ ಸೋಂಕು ಹರಡುವುದನ್ನು ತಡೆಯಬೇಕು. ನೀವು ಮಾಂಸಾಹಾರಿಗಳಾಗಿದ್ದರೆ, ಮಾಂಸವನ್ನು ಸರಿಯಾಗಿ ಬೇಯಿಸಿದ ನಂತರವೇ ತಿನ್ನಿರಿ.

*ರಾಶಸ್ ದೂರು ಹೊಂದಿರುವ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬರುವುದನ್ನು ತಪ್ಪಿಸಿ.

*ಅನಾರೋಗ್ಯದ ರೋಗಿಯು ಬಳಸುವ ಯಾವುದೇ ದ್ರವ ಅಥವಾ ವಸ್ತುವಿನ ಸಂಪರ್ಕಕ್ಕೆ ಬರುವುದನ್ನು ತಪ್ಪಿಸಿ. ಇತ್ತೀಚಿನ ದಿನಗಳಲ್ಲಿ ಮಂಗನ ಕಾಯಿಲೆ ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದ್ದರೂ, ಜನರು ಭಯಭೀತರಾಗದಂತೆ ಮನವಿ ಮಾಡಿದೆ. ಈ ವೈರಸ್ COVID-19 ನಂತೆ ಅಲ್ಲ ಎಂದು ಈ ತಜ್ಞರು ಖಚಿತಪಡಿಸಿದ್ದಾರೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

English summary
The fears of a 5-year-old girl's suspected of monkeypox in the Ghaziabad district of Uttar Pradesh have come to an end over. A 5-year-old girl's monkeypox test report revealed from the National Institute of Virology Lab at ICMR, Pune today (June 07).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X