• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

Breaking: 8 ಮಂದಿ ಪೊಲೀಸರನ್ನು ಹತ್ಯೆಗೈದಿದ್ದ ಪಾತಕಿ ವಿಕಾಸ್ ದುಬೆ ಎನ್‌ಕೌಂಟರ್‌

|

ಲಕ್ನೋ, ಜುಲೈ 10: ಎಂಟು ಮಂದಿ ಪೊಲೀಸರನ್ನು ಹತ್ಯೆಗೈದಿದ್ದ ಪಾತಕಿ ವಿಕಾಸ್ ದುಬೆಯನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದಾರೆ.

ಗುರುವಾರವಷ್ಟೇ ಮಧ್ಯಪ್ರದೇಶದಲ್ಲಿ ದೇವಸ್ಥಾನ ಒಂದರಲ್ಲಿ ಅಡಗಿದ್ದ ವಿಕಾಸ್ ದುಬೆಯನ್ನು ಪೊಲೀಸರು ಬಂಧಿಸಿದ್ದರು.ಪೊಲೀಸರು ತೆರಳುತ್ತಿದ್ದ ಎಸ್‌ಟಿಎಫ್ ಕಾರು ಅಪಘಾತಕ್ಕೀಡಾಗಿ ಆ ಸಂದರ್ಭದಲ್ಲಿ ಪೊಲೀಸರ ಆಯುಧಗಳನ್ನು ತೆಗೆದುಕೊಂಡು ಬೆದರಿಸಿ ಓಡಿ ಹೋಗಲು ಪ್ರಯತ್ನಿಸಿದಾಗ ಆತನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಕಾನ್ಪುರದಲ್ಲಿ ಘಟನೆ ನಡೆದಿದೆ. ಆತನನ್ನು ಲಾಲಾ ಲಜಪತ್ ರಾಯ್ ಆಸ್ಪತ್ರೆ ಅಥವಾ ಹ್ಯಾಲೆಟ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ.

ಒಂದು ವಾರದ ಹಿಂದಷ್ಟೇ ರೌಡಿ ವಿಕಾಸ್ ದುಬೆ ಇರುವ ಪ್ರದೇಶದ ಬಗ್ಗೆ ಪಕ್ಕಾ ಮಾಹಿತಿ ಪಡೆದು 50 ಪೊಲೀಸರ ತಂಡ ಆತನನ್ನು ಬಂಧಿಸಲು ತೆರಳಿತ್ತು. ಆಗ ವಿಕಾಸ್ ದುಬೆ ಮತ್ತು ಆತನ ಸಹಚರರು ಪೊಲೀಸರ ಆಯುಧಗಳನ್ನೇ ವಶಪಡಿಸಿಕೊಂಡು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ದಾಳಿಯಲ್ಲಿ 8 ಮಂದಿ ಪೊಲೀಸರು ಮೃತಪಟ್ಟಿದ್ದರು.

8 ಮಂದಿ ಪೊಲೀಸರನ್ನು ಹತ್ಯೆ ಮಾಡಿದ್ದ ರೌಡಿ ಶೀಟರ್ ವಿಕಾಸ್ ದುಬೆ ಬಂಧನ

2000ದಲ್ಲಿ ನಡೆದ ಥಾರಾಚಂದ್ ಕಾಲೇಜು ಪ್ರಿನ್ಸಿಪಾಲ್ ಮತ್ತು ಸಹಾಯಕ ಮ್ಯಾನೇಜರ್ ಹತ್ಯೆ ಪ್ರಕರಣದಲ್ಲಿಯೂ ಈತನ ಹೆಸರು ಕೇಳಿ ಬಂದಿತ್ತು.

2000ದಲ್ಲಿ ನಡೆದ ರಾಮ್ ಬಾಬು ಯಾದವ್ ಹತ್ಯೆ ಪ್ರಕರಣ, 2004ರಲ್ಲಿ ನಡೆದ ದಿನೇಶ್ ದುಬೆ ಹತ್ಯೆ ಪ್ರಕರಣದಲ್ಲಿಯೂ ವಿಕಾಸ್ ದುಬೆ ಹೆಸರು ಕೇಳಿ ಬಂದಿದೆ.

ಈ ಹತ್ಯೆಗಳು ನಡೆಯವಾಗ ಜೈಲಿನಲ್ಲಿದ್ದ ವಿಕಾಸ್ ದುಬೆ ಅಲ್ಲಿಂದಲೇ ಸಹಚರರ ಮೂಲಕ ಸಂಚು ರೂಪಿಸಿದ್ದ. ಆತನನನ್ನು ಹಿಡಿದುಕೊಟ್ಟವರಿಗೆ 5 ಲಕ್ಷ ಬಹುಮಾನ ನೀಡುವುದಾಗಿ ಪೊಲೀಸರು ತಿಳಿಸಿದ್ದರು.

ವಿಕಾಸ್ ದುಬೆ ಹರ್ಯಾಣದ ಹೋಟೆಲ್ ಒಂದರಲ್ಲಿ ಕಾಣಿಸಿಕೊಂಡಿದ್ದ, ಬಳಿಕ ಆತನನ್ನು ಬಂಧಿಸಲು ತೆರಳಿದಾಗ ಆತ ಅಲ್ಲಿಂದ ಎಸ್ಕೇಪ್ ಆಗಿದ್ದ, ರೌಡಿ ವಿಕಾಸ್ ದುಬೆ ವಿರುದ್ಧ ಬೆದರಿಕೆ, ಅಪಹರಣ, ಕೊಲೆ ಸೇರಿದಂತೆ 60ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ.

ಆತನ ಆಪ್ತ ಅಮರ್ ದುಬೆಯನ್ನು ಪೊಲೀಸರು ಬುಧವಾರ ಹತ್ಯೆ ಮಾಡಿದ್ದರು,ಗುರುವಾರ ಮತ್ತೊಬ್ಬ ಅತ್ಯಾಪ್ತ ಪ್ರಭಾತ್ ಮಿಶ್ರಾನನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದರು.

ಇದಕ್ಕೂ ಮುನ್ನ ಆತನ ತಾಯಿ ತನ್ನ ಮಗನನ್ನು ಕಂಡಲ್ಲಿ ಗುಂಡಿಟ್ಟು ಹತ್ಯೆ ಮಾಡಿ, ಅಂತಹ ಮಗ ನನಗೆ ಬೇಡ ಎಂದಿದ್ದರು. ಬಳಿಕ ಆತನ ಮನೆಯನ್ನು ಕೂಡ ಜಿಲ್ಲಾಡಳಿತ ನೆಲಸಮ ಮಾಡಿತ್ತು.

ಇಂದು ಪೊಲೀಸ್ ಕಾರಿನಲ್ಲಿ ತೆರಳುತ್ತಿದ್ದಾಗ ತಪ್ಪಿಸಿಕೊಳ್ಳಲು ಯತ್ನಿಸಿದ ವಿಕಾಸ್‌ನನ್ನು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

English summary
Vikas Dubey has reportedly been killed in an encounter in Kanpur. The encounter reportedly broke out between Vikas Dubey and the Uttar Pradesh Special Task Force (STF) when the gangster tried to flee. Vikas Dubey's death is yet to be confirmed by the officials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more