ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಜಿ ಉಪರಾಷ್ಟ್ರಪತಿ ಪತ್ನಿಯಿಂದ ಮದರಸಾದಲ್ಲಿ ದೇಗುಲ ನಿರ್ಮಾಣ

|
Google Oneindia Kannada News

ಅಲೀಗಢ (ಉತ್ತರಪ್ರದೇಶ), ಜುಲೈ 14: ಹಿಂದೂ- ಮುಸ್ಲಿಮರ ಬಾಂಧವ್ಯದ ದ್ಯೋತಕವಾಗಿ, ಆ ಬಂಧ ಮತ್ತಷ್ಟು ಗಟ್ಟಿಗೊಳಿಸುವ ಪ್ರಯತ್ನವಾಗಿ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಪತ್ನಿ ಸಲ್ಮಾ ಅವರು ಮದರಸಾದಲ್ಲಿ ದೇವಾಲಯ ಹಾಗೂ ಮಸೀದಿ ನಿರ್ಮಿಸಲು ಮುಂದಾಗಿದ್ದಾರೆ. ಉತ್ತರಪ್ರದೇಶದ ಅಲೀಗಢದಲ್ಲಿ ಸಲ್ಮಾ ಅವರು 'ಚಾಚಾ ನೆಹರೂ ಮದರಸಾ' ನಡೆಸುತ್ತಾರೆ.

ಹುಲಿ ಬೇಟೆ ಆಡಿದ್ದೇವೆ ಅಂದರೆ ಅದರ ಕಳೇಬರ ಎಲ್ಲಿ?: ಸರಕಾರಕ್ಕೆ ಅನ್ಸಾರಿ ಪ್ರಶ್ನೆಹುಲಿ ಬೇಟೆ ಆಡಿದ್ದೇವೆ ಅಂದರೆ ಅದರ ಕಳೇಬರ ಎಲ್ಲಿ?: ಸರಕಾರಕ್ಕೆ ಅನ್ಸಾರಿ ಪ್ರಶ್ನೆ

ಮಾಧ್ಯಮಗಳ ಜತೆಗೆ ಮಾತನಾಡಿದ ಸಲ್ಮಾ, ಇಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಭದ್ರತೆ ಹಾಗೂ ಸುರಕ್ಷತೆಗೂ ಇದರಿಂದ ಅನುಕೂಲ ಆಗುತ್ತದೆ ಎಂದಿದ್ದಾರೆ. ಮದರಸಾದಿಂದ ಹೊರಗೆ ಮಸೀದಿಗೋ ಅಥವಾ ದೇವಾಲಯಕ್ಕೋ ಹೋದಾಗ ಅಹಿತಕರ ಘಟನೆ ನಡೆದರೆ ಅದಕ್ಕೆ ನಾವು ಜವಾಬ್ದಾರರಾಗುತ್ತೇವೆ. ಆದ್ದರಿಂದ ಮಕ್ಕಳ ಸುರಕ್ಷತೆ ಮತ್ತು ಭದ್ರತೆ ಸಲುವಾಗಿ ಮದರಸಾದ ಒಳಗೆ ಮಸೀದಿ- ದೇಗುಲ ನಿರ್ಮಾಣಕ್ಕೆ ನಿರ್ಧರಿಸಿದೆವು ಎಂದು ಹೇಳಿದ್ದಾರೆ.

Salma- Hamid Ansari

ನಾವು ನಡೆಸುತ್ತಿರುವ ಈ ಮದರಸಾದಲ್ಲಿ ಹಿಂದೂ- ಮುಸ್ಲಿಂ ಎರಡೂ ಧರ್ಮದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದ್ದರಿಂದ ಅವರ ಸುರಕ್ಷತೆ ಹಾಗೂ ಭದ್ರತೆ ನಮಗೆ ಮುಖ್ಯ. ಅಂದ ಹಾಗೆ ಗುಂಪು ಹಲ್ಲೆ ತಡೆಯುವ ನಿಟ್ಟಿನಲ್ಲಿ ಮರಣದಂಡನೆಯೇ ಸರಿಯಾದ ದಾರಿ. ಇಂಥ ಅಪರಾಧಗಳು ಸಮಾಜದ ಕಪ್ಪು ಚುಕ್ಕೆ ಎಂದು ಸಲ್ಮಾ ಹೇಳಿದ್ದಾರೆ.

English summary
Former vice president Hamid Ansari wife Salma will build temple and Mosque in Chaha Nehru Madarasa, which is running by her in Aligarh, Uttar Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X