ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿ ಚುನಾವಣೆಗೂ ಮುನ್ನ ಕಾಂಗ್ರೆಸ್ ತೊರೆದ ಆರ್‌ಪಿಎನ್ ಸಿಂಗ್

|
Google Oneindia Kannada News

ಲಕ್ನೋ, ಜನವರಿ 25: ಉತ್ತರಪ್ರದೇಶ ವಿಧಾನಸಭೆ ಚುನಾವಣೆಗೆ ಕೆಲವೇ ವಾರಗಳ ಮುನ್ನ ಮಾಜಿ ಕೇಂದ್ರ ಸಚಿವ ಹಾಗೂ ಉತ್ತರಪ್ರದೇಶ ಕಾಂಗ್ರೆಸ್ ಆರ್‌ಪಿಎನ್ ಸಿಂಗ್ ಅವರು ಮಂಗಳವಾರ ಪಕ್ಷ ತೊರೆದಿದ್ದಾರೆ.

ಆರ್‌ಪಿಎನ್ ಸಿಂಗ್ ಉತ್ತರಪ್ರದೇಶದ ಪದ್ರೌನಾ ಕ್ಷೇತ್ರದಿಂದ ಸಂಸದರಾಗಿದ್ದು, ಇವರ ರಾಜೀನಾಮೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಹೊಡೆತ ಬಿದ್ದಂತಾಗಿದೆ.

ಆರ್‌ಪಿಎನ್ ಸಿಂಗ್ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ದೊಡ್ಡ ನಾಯಕರಲ್ಲಿ ಒಬ್ಬರಾಗಿದ್ದು, ಇಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಉದ್ದೇಶಿಸಿ ತಮ್ಮ ರಾಜೀನಾಮೆ ಪತ್ರವನ್ನು ಟ್ವೀಟ್ ಮಾಡಿದ್ದಾರೆ.

Former Union Minister RPN Singh Quits Congress Ahead of Uttar Pradesh Polls

"ಇಂದು, ಈ ಸಮಯದಲ್ಲಿ, ನಾವು ನಮ್ಮ ಮಹಾನ್ ಗಣರಾಜ್ಯದ ರಚನೆಯನ್ನು ಆಚರಿಸುತ್ತಿದ್ದೇವೆ, ನನ್ನ ರಾಜಕೀಯ ಪಯಣದಲ್ಲಿ ನಾನು ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತೇನೆ. ಜೈ ಹಿಂದ್,'' ಆರ್‌ಪಿಎನ್ ಸಿಂಗ್ ತಮ್ಮ ಸಂಕ್ಷಿಪ್ತ ಪತ್ರವನ್ನು ಹಂಚಿಕೊಂಡಿದ್ದಾರೆ.

ಮಂಗಳವಾರ ಬೆಳಗ್ಗೆ ಆರ್‌ಪಿಎನ್ ಸಿಂಗ್ ತಮ್ಮ ಟ್ವಿಟರ್ ಬಯೋವನ್ನು ಬದಲಾಯಿಸಿದಾಗ ಮತ್ತು "ಕಾಂಗ್ರೆಸ್' ಅನ್ನು ತೊರೆದಾಗ ಬಿಜೆಪಿ ಸೇರ್ಪಡೆಯಾಗುವ ಊಹಾಪೋಹಗಳು ಪ್ರಾರಂಭವಾವೆ. ಟ್ವಿಟರ್ ಬಯೋದಲ್ಲಿ ಈಗ "ನನ್ನ ಧ್ಯೇಯವಾಕ್ಯ ಭಾರತ ಮೊದಲು, ಯಾವಾಗಲೂ' ಎಂದು ಬದಲಾಗಿದೆ. ಇದು ಮೊದಲು ಎಐಸಿಸಿ (ಅಖಿಲ ಭಾರತ ಕಾಂಗ್ರೆಸ್ ಸಮಿತಿ) ಉಸ್ತುವಾರಿ ಎಂದು ಇತ್ತು.

ಕಳೆದ ವರ್ಷ ಜಿತಿನ್ ಪ್ರಸಾದ್ ರಾಜೀನಾಮೆ ನೀಡಿದ ನಂತರ ಉತ್ತರಪ್ರದೇಶದಲ್ಲಿ ಕಾಂಗ್ರೆಸ್‌ನಿಂದ ಇದು ಎರಡನೇ ದೊಡ್ಡ ನಿರ್ಗಮನವಾಗಿದೆ. ಜಿತಿನ್ ಪ್ರಸಾದ್ ಬಿಜೆಪಿ ಸೇರಿದ ನಂತರ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರ್ಕಾರದಲ್ಲಿ ಸಚಿವರಾದರು.

ಫೆಬ್ರವರಿ 10ರಿಂದ ಏಳು ಹಂತಗಳಲ್ಲಿ ಚುನಾವಣೆ
ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 10ರಿಂದ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಉತ್ತರಪ್ರದೇಶದಲ್ಲಿ ಫೆಬ್ರವರಿ 10, 14, 20, 23, 27 ಮತ್ತು ಮಾರ್ಚ್ 3 ಮತ್ತು 7ರಂದು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10ರಂದು ಮತ ಎಣಿಕೆ ನಡೆಯಲಿದೆ.

ರಾಜ್ಯದಲ್ಲಿ ಕಾಂಗ್ರೆಸ್ 30 ವರ್ಷಕ್ಕೂ ಹೆಚ್ಚು ಕಾಲ ಅಧಿಕಾರದಿಂದ ಹೊರಗುಳಿದಿದ್ದು, 2017ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 312 ವಿಧಾನಸಭಾ ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಗೆಲುವು ಸಾಧಿಸಿತ್ತು. 403 ಸದಸ್ಯ ಬಲದ ಅಸೆಂಬ್ಲಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷವು 39.67ರಷ್ಟು ಮತಗಳನ್ನು ಗಳಿಸಿತ್ತು. ಸಮಾಜವಾದಿ ಪಕ್ಷ (ಎಸ್‌ಪಿ) 47 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ, ಬಿಎಸ್‌ಪಿ 19 ಸ್ಥಾನಗಳನ್ನು ಗೆದ್ದಿತ್ತು ಮತ್ತು ಕಾಂಗ್ರೆಸ್ ಕೇವಲ 7 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿತ್ತು.

Recommended Video

Virat ವಿಕೆಟ್ ತೆಗೆದ ಸೌತ್ ಆಫ್ರಿಕಾ ಬೌಲರ್ ಬಾಯಲ್ಲಿ ಜೈ ಶ್ರೀರಾಮ್ ಜಪ | Oneindia Kannada

ಕಾಂಗ್ರೆಸ್ ತೊರೆದು ಎನ್‌ಸಿಪಿ ಸೇರಿದ ಗೋವಾ ಕಾಂಗ್ರೆಸ್ ನಾಯಕ
ಎನ್‌ಸಿಪಿ ತೊರೆದ ಒಂದು ದಶಕದ ನಂತರ, ಮಾಜಿ ಪ್ರವಾಸೋದ್ಯಮ ಸಚಿವ ಫ್ರಾನ್ಸಿಸ್ಕೊ ಮಿಕ್ಕಿ ಪಚೆಕೊ ಮರಳಿ ಪಕ್ಷಕ್ಕೆ ಮರಳಿದ್ದಾರೆ. ಕಾಂಗ್ರೆಸ್ ಬೆನೌಲಿಮ್ ಟಿಕೆಟ್ ನಿರಾಕರಿಸಿದ ನಂತರ ಫ್ರಾನ್ಸಿಸ್ಕೊ ಮಿಕ್ಕಿ ಪಚೆಕೊ ಅವರು ನುವೆಮ್‌ನಿಂದ ಎನ್‌ಸಿಪಿ ಪಕ್ಷದ ಅಭ್ಯರ್ಥಿಯಾಗಿ ಗೋವಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ.

ಕಾಂಗ್ರೆಸ್‌ನಿಂದ ಹಿಡಿದು ಕ್ರಾಂತಿಕಾರಿ ಗೋವಾನ್ಸ್‌ಗಳವರೆಗೆ ಎಲ್ಲರೂ ಗೋವಾವನ್ನು ನಾಶಪಡಿಸಿದ್ದಾರೆ ಮತ್ತು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಪಚೆಕೊ ಆರೋಪಿಸಿದರು. ಮಾಜಿ ಸಿಎಂ ದಿಗಂಬರ್ ಕಾಮತ್ ಹಾಗೂ ಮಾಜಿ ವಿದ್ಯುತ್ ಸಚಿವ ಅಲೆಕ್ಸೋ ಸಿಕ್ವೇರಾ ಅವರಿಂದಲೇ ಗೋವಾದಲ್ಲಿ ಬಿಜೆಪಿ ಪ್ರವರ್ಧಮಾನಕ್ಕೆ ಬಂದಿದೆ ಎಂದರು.

English summary
Former Union minister and Uttar Pradesh Congressman RPN Singh left the party on Tuesday, just weeks before the Uttar Pradesh Assembly elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X