ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾರ್ಜಾಗೆ ಪರಾರಿಯಾಗಲು ಯತ್ನಿಸಿದ ಮಾಜಿ ಸಿಮಿ ಕಾರ್ಯಕರ್ತನ ಬಂಧನ

|
Google Oneindia Kannada News

ವಾರಣಾಸಿ, ಜನವರಿ 30: ನಿಷೇಧಿತ ಸಂಘಟನೆಯಾಗಿರುವ ಸ್ಟುಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ(ಸಿಮಿ)ದ ಮಾಜಿ ಕಾರ್ಯಕರ್ತನೊಬ್ಬನನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ವಾರಾಣಾಸಿಯಿಂದ ಶಾರ್ಜಾಗೆ ಪರಾರಿಯಾಗಲು ಯತ್ನಿಸುತ್ತಿದ್ದವನ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿಗೊಳಿಸಲಾಗಿತ್ತು.

ಲಾಲ್ ಬಹದ್ದೂರ್ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿತನಾದವನನ್ನು ಮೊಹಮ್ಮದ್ ಫೈಜ್ ಎಂದು ಗುರುತಿಸಲಾಗಿದೆ. ಅಜಮ್ ಘರ್ ನ ಖುದಾ ದಾದ್ ಪುರ್ ಗ್ರಾಮದ ನಿವಾಸಿಯಾಗಿದ್ದಾರೆ.

 ಮತ್ತೆ ಸುದ್ದಿಯಲ್ಲಿರುವ ಸಿಮಿ ಸಂಘಟನೆ ಏನು, ಎತ್ತ? ಮತ್ತೆ ಸುದ್ದಿಯಲ್ಲಿರುವ ಸಿಮಿ ಸಂಘಟನೆ ಏನು, ಎತ್ತ?

ಪಾಸ್ ಪೋರ್ಟ್ ಚೆಕ್ಕಿಂಗ್ ವೇಳೆ ಈತ ಸಿಮಿ ಸಂಘಟನೆಯ ಮಾಜಿ ಸದಸ್ಯ ಎಂದು ತಿಳಿದು ಬಂದಿದೆ. ದೇಶವನ್ನು ತೊರೆದು ಹೊರಗೆ ಹೋಗದಂತೆ ಫೈಜ್ ಗೆ ನ್ಯಾಯಾಲಯವು ಸೂಚಿಸಿತ್ತು. 2001ರಲ್ಲೇ ಈತನ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿಯಾಗಿತ್ತು. ಬಂಧಿತನನ್ನು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗಳು, ಅಜಮ್ ಘರ್ ಪೊಲೀಸರಿಗೆ ಒಪ್ಪಿಸಿದರು.

Former SIMI man accused of sedition arrested at Varanasi airport

ದೇಶದ ಸಮಗ್ರತೆಗೆ ಭಂಗ, ಸಾರ್ವಜನಿಕವಾಗಿ ಶಾಂತಿ ಕದಡಿದ್ದು, ದ್ವೇಷಪೂರಿತ ಭಾಷಣ ಮುಂತಾದ ಕಾರಣಕ್ಕೆ 2001ರಲ್ಲಿ ಫೈಜ್ ವಿರುದ್ಧ ಪ್ರಕರಣ ದಾಖಲಾಗಿತ್ತು. 2015ರಲ್ಲಿ ಒಮ್ಮೆ ಕೋರ್ಟಿನಿಂದ ನಿರ್ಬಂಧವಿದ್ದರೂ ಸೌದಿ ಅರೇಬಿಯದಲ್ಲಿರುವ ತನ್ನ ಮಳಿಗೆಗೆ ಹೋಗಿ ಬಂದಿದ್ದ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.

ಉತ್ತರ ಪ್ರದೇಶದ ಅಲಿಘಡದಲ್ಲಿ ಪ್ರೊಫೆಸರ್ ಅಹ್ಮದುಲ್ಲಾ ಸಿದ್ದೀಕಿ ಏಪ್ರಿಲ್ 25, 1977ರಲ್ಲಿ ಸಿಮಿ ಸಂಘಟನೆ ಆರಂಭಿಸಿದರು. ಸಿಮಿ ಸಂಘಟನೆಯ ಹಲವರಿಗೆ ಭಾರತದಲ್ಲಿ ಶರಿಯಾ ಕಾನೂನು ಜಾರಿಯಾಗಬೇಕು. ಮತ್ತು ಈ ಪ್ರಕ್ರಿಯೆಯಲ್ಲಿ ತೊಡಗಲು ಯುವಜನರನ್ನು ಸೆಳೆಯಲು ಆರಂಭಿಸಿತು. -ಉತ್ತರ ಪ್ರದೇಶ, ಕೇರಳ, ಮಧ್ಯಪ್ರದೇಶ, ಅಸ್ಸಾಂ, ಆಂಧ್ರಪ್ರದೇಶ, ಗುಜರಾತ್, ದೆಹಲಿಯಲ್ಲಿ ಪ್ರಬಲವಾಗಿದ್ದ ಈ ಸಂಘಟನೆಗೆ 2001ರಲ್ಲಿ ಭಯೋತ್ಪಾದನಾ ನಿಗ್ರಹ ಕಾಯ್ದೆ ಅಡಿಯಲ್ಲಿ ನಿಷೇಧ ಹೇರಲಾಯಿತು. ನಿಷೇಧ ಇದ್ದ ಕಾರಣಕ್ಕೆ ಸಿಮಿಗೆ ಕೆಲಸ ಮಾಡುವುದು ಕಷ್ಟವಾಗಿದ್ದರಿಂದ ಅದರ ಕಾರ್ಯಕರ್ತರು ಗುಂಪಿನಿಂದ ಹೊರಬಂದು ಇಂಡಿಯನ್ ಮುಜಾಹಿದೀನ್ ಸೇರಲು ಮುಂದಾದರು.

English summary
A former member of the Students Islamic Movement of India against whom a Look out Circular had been issued has been arrested, while trying to leave the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X