ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಪ್ರದೇಶ,ಉತ್ತರಾಖಂಡ್ ರಾಜ್ಯಗಳ ಮಾಜಿ ಸಿಎಂ ತಿವಾರಿ ನಿಧನ

|
Google Oneindia Kannada News

ನವದೆಹಲಿ, ಅಕ್ಟೋಬರ್ 18: ಕಾಂಗ್ರೆಸ್ ಪಕ್ಷದ ಮಾಜಿ ಹಿರಿಯ ನಾಯಕ, ಉತ್ತರಪ್ರದೇಶ,ಉತ್ತರಾಖಂಡ್ ರಾಜ್ಯಗಳ ಮಾಜಿ ಮುಖ್ಯಮಂತ್ರಿ ಎನ್. ಡಿ ತಿವಾರಿ ಅವರು ಗುರುವಾರ ಮಧ್ಯಾಹ್ನ ನಿಧನರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು. ಬಹುಕಾಲದಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಅವರ ಜನ್ಮದಿನ (ಅಕ್ಟೋಬರ್ 18, 1925 ಜನನ)ವಾಗಿದ್ದು, ಇಂದೇ ಇಹಲೋಕ ವ್ಯಾಪಾರ ಮುಗಿಸಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್ 20ರಂದು ಸಾಕೇತ್ ನಲ್ಲಿ ಮ್ಯಾಕ್ಸ್ ಆಸ್ಪತ್ರೆಗೆ ಎನ್ ಡಿ ತಿವಾರಿ ಅವರನ್ನು ಸೇರಿಸಲಾಗಿತ್ತು. ಬ್ರೈನ್ ಸ್ಟ್ರೋಕ್ ಆಗಿದ್ದರಿಂದ ಚಿಕಿತ್ಸೆ ಪಡೆಯುತ್ತಿದ್ದರು. ಎರಡು ರಾಜ್ಯಗಳ ಮುಖ್ಯಮಂತ್ರಿಯಾಗಿದ್ದ ಏಕೈಕ ರಾಜಕಾರಣಿ, ಉತ್ತರಾಖಂಡ್ ನಲ್ಲಿ ಪೂರ್ಣಾವಧಿ ಅಧಿಕಾರ ಕಂಡರು.

ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ತಿವಾರಿ ಅವರು ನಂತರ ಕಾಂಗ್ರೆಸ್ ಪಕ್ಷ ಸೇರಿದ್ದರು. ರಾಜೀವ್ ಗಾಂಧಿ ಅವರ ಸಚಿವ ಸಂಪುಟದಲ್ಲಿ ವಿದೇಶಾಂಗ ಖಾತೆ ಸಚಿವರಾಗಿದ್ದರು.

ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ತಿವಾರಿ

ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ತಿವಾರಿ

* ಪ್ರಜಾ ಸೋಷಿಯಲಿಸ್ಟ್ ಪಕ್ಷದಲ್ಲಿದ್ದ ನಾರಾಯಣ ದತ್ತ ತಿವಾರಿ ಅವರು ನಂತರ ಕಾಂಗ್ರೆಸ್ ಸೇರಿದರು.
* 1976-77, 1984-85, 1988-89ರಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದರು.
* 2002-2007ರ ತನಕ ಉತ್ತರಾಖಂಡ್ ನ ಮುಖ್ಯಮಂತ್ರಿಯಾಗಿದ್ದರು.
* ಎರಡು ರಾಜ್ಯಗಳಿಗೆ ಮುಖ್ಯಮಂತ್ರಿಯಾಗಿದ್ದ ಏಕೈಕ ರಾಜಕಾರಣಿ.
* 1986-1987ರಲ್ಲಿ ರಾಜೀವ್ ಗಾಂಧಿ ಸಂಪುಟದಲ್ಲಿ ವಿದೇಶಾಂಗ ಖಾತೆ ಸಚಿವರಾಗಿದ್ದರು.
* 2007 ರಿಂದ 2009ರ ತನಕ ಆಂಧ್ರಪ್ರದೇಶದ ರಾಜ್ಯಪಾಲರಾಗಿದ್ದರು.

ನನ್ನ ಅಪ್ಪ ತಿವಾರಿ ಎಂದಿದ್ದ ರೋಹಿತ್

ನನ್ನ ಅಪ್ಪ ತಿವಾರಿ ಎಂದಿದ್ದ ರೋಹಿತ್

ಆಂಧ್ರ ಪ್ರದೇಶದ ಮಾಜಿ ರಾಜ್ಯಪಾಲ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಡಿ ತಿವಾರಿ ಅವರು ನನ್ನ ತಂದೆ ಎಂದು 34 ವರ್ಷ ರೋಹಿತ್ ಶೇಖರ್ 2008ರಲ್ಲಿ ಮೊದಲ ಬಾರಿಗೆ ಕೋರ್ಟ್ ಮೆಟ್ಟಿಲೇರಿದ್ದರು.

ಆನಂತರ ಆ ಸಿಕ್ಕಿನಿಂದ ಬಿಡಿಸಿಕೊಳ್ಳಲು ತಿವಾರಿ ಶತಾಯಗತಾಯ ಯತ್ನಿಸಿದರು. ಆದರೆ ಕೊನೆಗೆ ರೋಹಿತ್ ಶೇಖರ್ ವಿಜಯದ ನಗೆ ಬೀರಿದ್ದರು. ಡಿಎನ್ಎ ಪರೀಕ್ಷೆ ಕೂಡಾ ಈ ಕಾನೂನು ಸಮರದಲ್ಲಿ ಮಹತ್ವದ ಪಾತ್ರವಹಿಸಿತ್ತು. ಇದಕ್ಕೂ ಮುನ್ನ ರೋಹಿತ್ ಜನ್ಮಕ್ಕೆ ಕಾರಣರಾದ ಉಜ್ವಲ ಶರ್ಮ(62) ಎಂಬುವವರನ್ನು 88 ವರ್ಷ ವಯಸ್ಸಿನಲ್ಲಿ ತಿವಾರಿ ವರಿಸಿದ್ದರು.

ಸೆಕ್ಸ್ ಹಗರಣದಲ್ಲಿ ತಿವಾರಿ

ಸೆಕ್ಸ್ ಹಗರಣದಲ್ಲಿ ತಿವಾರಿ

ಆಂಧ್ರಪ್ರದೇಶದ ರಾಜ್ಯಪಾಲರಾಗಿದ್ದಾಗ ತಿವಾರಿ ಅವರು ರಾಜಭವನದಲ್ಲಿ ಮೂವರು ಮಹಿಳೆಯರ ಜತೆ ಹಾಸಿಗೆ ಹಂಚಿಕೊಂಡಿರುವ ದೃಶ್ಯಾವಳಿಯನ್ನು ತೆಲುಗು ನ್ಯೂಸ್ ಚಾನೆಲ್ ಎಬಿಎನ್ ಆಂಧ್ರಜ್ಯೋತಿ ಪ್ರಸಾರ ಮಾಡಿತ್ತು. 2009ರಲ್ಲಿ ಇದು ಸಂಚಲನ ಮೂಡಿಸಿತ್ತು. ತಿವಾರಿ ವಿರುದ್ಧ ಪೊಲೀಸರಿಗೆ ದೂರು ನೀಡಲಾಯಿತು. ಸಾರ್ವಜನಿಕವಾಗಿ ತಿವಾರಿ ಅವರು ಕ್ಷಮೆಯಾಚಿಸಿದರು. ಆದರೆ, ಇದು ರಾಜಕೀಯ ಷಡ್ಯಂತ್ರ ಎಂದು ವಾದಿಸಿದರು. ಇಎಸ್ಎಲ್ ನರಸಿಂಹನ್ ಅವರನ್ನು ತಿವಾರಿ ಸ್ಥಾನದಲ್ಲಿ ನೇಮಿಸಲಾಯಿತು.

ಪ್ರಧಾನಿಯಾಗುವ ಯೋಗವಿತ್ತು

ಪ್ರಧಾನಿಯಾಗುವ ಯೋಗವಿತ್ತು

90ರ ದಶಕದಲ್ಲಿ ಪಿವಿ ನರಸಿಂಹ ರಾವ್ ಅವರು ಪ್ರಧಾನಿಯಾಗುವ ರೇಸಿನಲ್ಲಿದ್ದಾಗ ಹಿರಿಯ ರಾಜಕಾರಣಿ ಎನ್ ಡಿ ತಿವಾರಿ ಅವರಿಗೂ ಪ್ರಧಾನಿಯಾಗುವ ಯೋಗ ಬಂದಿತ್ತು. ಆದರೆ, 800 ಮತಗಳಿಂದ ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದ ತಿವಾರಿ ಮುಂದೆ 1994ರಲ್ಲಿ ಕಾಂಗ್ರೆಸ್ ತೊರೆದು ಆಲ್ ಇಂಡಿಯಾ ಇಂದಿರಾ ಕಾಂಗ್ರೆಸ್ (ತಿವಾರಿ) ಸ್ಥಾಪಿಸಿ, ಅರ್ಜುನ್ ಸಿಂಗ್ ಜತೆ ಬಂಡಾಯವೆದ್ದರು. ಆದ್ರೆ, ನಂತರ ಸೋನಿಯಾ ಗಾಂಧಿ ಅವರು ಎಐಸಿಸಿ ಅಧ್ಯಕ್ಷೆಯಾದ ಬಳಿಕ ಕಾಂಗ್ರೆಸ್ ಗೆ ಮರಳಿದರು.

English summary
Former Congress leader and chief minister of UP and Uttarakhand ND Tiwari passed away at the Max Hospital in Saket on Thursday. He was 93.He was ailing for a long time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X