ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ತೊರೆದ ಬಿಜೆಪಿ ಮಾಜಿ ಸಂಸದೆ ಸಾವಿತ್ರಿಬಾಯಿ ಫುಲೆ

|
Google Oneindia Kannada News

ಲಕ್ನೋ, ಡಿಸೆಂಬರ್ 26: ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ರೆಬಲ್ ಸಂಸದೆ ಸಾವಿತ್ರಿಬಾಯಿ ಫುಲೆ ಈಗ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದಾರೆ. ಬಹ್ರಾಚ್ ಸಂಸದೆಯಾಗಿದ್ದ ಸಾವಿತ್ರಿಬಾಯಿ ಈಗ ಕಾಂಗ್ರೆಸ್ಸಿನಲ್ಲಿ ತಮ್ಮ ಮಾತಿಗೆ ಬೆಲೆ ಇಲ್ಲ ಎಂದು ಹೇಳಿ, ಪಕ್ಷ ತೊರೆದಿದ್ದಾರೆ.

ಕಳೆದ ವರ್ಷ ಡಾ. ಬಿಆರ್ ಅಂಬೇಡ್ಕರ್ ಅವರ ಪುಣ್ಯತಿಥಿ ದಿನದಂದು ಬಿಜೆಪಿ ಸದಸ್ಯತ್ವವನ್ನು ಸಾವಿತ್ರಿಬಾಯಿ ಅವರು ತೊರೆದಿದ್ದರು. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹನುಮಾನ್ ಜಾತಿ ಬಗ್ಗೆ ನೀಡಿದ್ದ ಹೇಳಿಕೆಯನ್ನು ಸಾವಿತ್ರಿಬಾಯಿ ಖಂಡಿಸಿದ್ದರು.

ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಬಿಗ್ ಶಾಕ್: ಸಂಸದೆ ರಾಜೀನಾಮೆಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಬಿಗ್ ಶಾಕ್: ಸಂಸದೆ ರಾಜೀನಾಮೆ

ಪರಿಶಿಷ್ಟ ಜಾತಿಯ ನಾಯಕಿಯಾಗಿರುವ ಸಾವಿತ್ರಿಬಾಯಿ ಅವರು ಮೊದಲಿಗೆ ಮಾಯಾವತಿ ಅವರ ಬಹುಜನ ಸಮಾಜವಾದಿ ಪಕ್ಷದ ಜತೆ ಗುರುತಿಸಿಕೊಂಡಿದ್ದರು. 2000ರಲ್ಲಿ ಬಿಜೆಪಿ ಸೇರಿ, 2002, 2007 ಹಾಗೂ 2012 ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. 2012ರಲ್ಲಿ ಗೆಲುವು ಸಾಧಿಸಿದ್ದರು. ಸಾಚನ್ ಅವರು ಫತೇಪುರ್ ಕ್ಷೇತ್ರದ ಸಂಸದರಾಗಿದ್ದು, ಎರಡು ಬಾರಿ ಶಾಸಕರಾಗಿದ್ದರು.

Former BJP MP Savitribai Phule Quits Congress, Says Her Voice Not Heard

"ನಾನು ಇಂದು ಬಿಜೆಪಿಗೆ ರಾಜೀನಾಮೆ ನೀಡುತ್ತಿದ್ದೇನೆ. ದಲಿತರು ಮತ್ತು ಹಿಂದುಳಿದವರ ಪರ ಇರುವ ಸಂವಿಧಾನ ಮತ್ತು ಮೀಸಲಾತಿಯನ್ನು ಅಳಿಸಿಹಾಕಲು ಪಿತೂರಿ ನಡೆಯುತ್ತಿದೆ. ಬಿಜೆಪಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ" ಆದ್ದರಿಂದ ನಾನು ಈ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಬಿಜೆಪಿ ತೊರೆದ ಸಂದರ್ಭದಲ್ಲಿ ಸಾಧ್ವಿ ಫುಲೆ ಹೇಳಿದ್ದರು.

English summary
Savitribai Phule, a BJP leader who joined the Congress before this year's national election, quit the party on Thursday alleging that her "voice was not heard".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X