ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಓಂ' ಮತ್ತು 'ಗೋವು' ಎಂದರೆ ಕೆಲವರಿಗೆ ಸಿಟ್ಟು ಬರುತ್ತದೆ: ಮೋದಿ

|
Google Oneindia Kannada News

ಮಥುರಾ, ಸೆಪ್ಟೆಂಬರ್ 11: ''ಓಂ' ಮತ್ತು ಗೋವು ಎಂದು ಕೆಲವರಿಗೆ ಹೇಳಿದರೆ ಕೆಲವರಿಗೆ ಸಿಟ್ಟು ಬರುತ್ತದೆ, ದೇಶ ಇನ್ನೂ 16ನೇ ಶತಮಾನದಲ್ಲಿದೆ ಎಂಬಂತೆ ಭಾವಿಸುತ್ತಾರೆ' ಎಂದು ಪ್ರಧಾನಿ ಮೋದಿ ಲೇವಡಿ ಮಾಡಿದರು.

ಉತ್ತರ ಪ್ರದೇಶದ ಮಥುರಾ ನಲ್ಲಿ ಇಂದು ರಾಷ್ಟ್ರೀಯ ಪ್ರಾಣಿಗಳ ಕಾಯಿಲೆ ನಿಯಂತ್ರಣ ಕಾರ್ಯಕ್ರಮ (ಎನ್‌ಎಡಿಡಿಸಿಪಿ) ಕ್ಕೆ ಚಾಲನೆ ನೀಡಿ ಮೋದಿ ಮಾತನಾಡಿದರು.

ಪ್ರಧಾನ ಮಂತ್ರಿ ಕಾರ್ಯಾಲಯದಲ್ಲಿ ದೊಡ್ಡ ಬದಲಾವಣೆಪ್ರಧಾನ ಮಂತ್ರಿ ಕಾರ್ಯಾಲಯದಲ್ಲಿ ದೊಡ್ಡ ಬದಲಾವಣೆ

ಎನ್‌ಎಡಿಡಿಸಿಪಿ ಕಾರ್ಯಕ್ರಮದಡಿ ಹಸು, ಎತ್ತು, ಕುರಿ, ಆಡು, ಹಂದಿ ಇನ್ನಿತರೆ 50 ಕೋಟಿ ಜಾನುವಾರುಗಳಿಗೆ ಲಸಿಕೆ ಹಾಕುವ ಗುರಿಯನ್ನು ಹೊಂದಲಾಗಿದೆ. ಪ್ರಾಣಿಗಳನ್ನು ಕಾಲು ಮತ್ತು ಬಾಯಿ ರೋಗದಿಂದ ಕಾಪಾಡಲು ಈ ಕ್ರಮಕ್ಕೆ ಮುಂದಾಗಲಾಗಿದೆ.

For Some People Words Om And Cow Symbolise 16th Century: Modi

ಇದೇ ಸಮಯದಲ್ಲಿ ಭಯೋತ್ಪಾದನೆಯ ಬಗ್ಗೆಯೂ ಮಾತನಾಡಿದ ಅವರು, ಭಯೋತ್ಪಾದನೆಯನ್ನು ಏಕಾಂಗಿಯಾಗಿ ಎದುರಿಸುವ ಶಕ್ತಿಯನ್ನು ಭಾರತ ಹೊಂದಿದೆ ಎಂದರು.

ಹಾನಿಕಾರಕ ಪ್ಲಾಸ್ಟಿಕ್ ವಿರುದ್ಧ ಪ್ರಧಾನಿ ಮೋದಿ ಸಮರಹಾನಿಕಾರಕ ಪ್ಲಾಸ್ಟಿಕ್ ವಿರುದ್ಧ ಪ್ರಧಾನಿ ಮೋದಿ ಸಮರ

ಮುಂದುವರೆದು, ಭಯೋತ್ಪಾದನೆ ಅದೊಂದು ಆದರ್ಶವಾಗಿಬಿಟ್ಟಿದೆ, ಭಯೋತ್ಪಾದನೆ ಎಲ್ಲೆಲ್ಲೂ ಹಬ್ಬಿದೆ, ಅದಕ್ಕೆ ದೇಶಗಳ ಗಡಿ ಇಲ್ಲದಂತಾಗಿದೆ, ಅದರ ಮೂಲ ಬೇರುಗಳು ಪಾಕಿಸ್ತಾನದಲ್ಲಿ ಆಳವಾಗಿ ಬೇರೂರಿದೆ ಎಂದು ಆರೋಪಿಸಿದರು.

English summary
Prime minister Narendra Modi said, for some people words 'Om' And 'Cow' symbolize 16th century'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X