ದಟ್ಟ ಮಂಜು, 8 ವಾಹನಗಳ ನಡುವೆ ಸರಣಿ ಅಪಘಾತ: ಇಬ್ಬರು ಸಾವು
ನೊಯ್ಡಾ, ನವೆಂಬರ್ 09: ಉತ್ತರ ಪ್ರದೇಶದ ಹತ್ರಾಸ್ ಬಳಿ ಎಂಟು ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ.
ಮಂಜು ಕವಿದಿದ್ದ ಕಾರಣ ಬೆಳಗ್ಗೆ 7.15ರ ಸಮಯದಲ್ಲಿ ಎಂಟು ವಾಹನಗಳ ನಡುವೆ ಡಿಕ್ಕಿ ಸಂಭವಿಸಿದೆ. ಪರಿಣಾಮ ಇಬ್ಬರು ಮೃತಪಟ್ಟಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ
ಹೊಸಪೇಟೆ ಬಳಿ ಲಾರಿಗೆ ಬೈಕ್ ಡಿಕ್ಕಿ, ಜಿಂದಾಲ್ ನೌಕರ ಸಾವು
ಯಮುನಾ ಎಕ್ಸ್ಪ್ರೆಸ್ ವೇ ನಲ್ಲಿ ಘಟನೆ ನಡೆದಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಯಮುನಾ ಎಕ್ಸ್ಪ್ರೆಸ್ ವೇ ದೆಹಲಿ ಮತ್ತು ಆಗ್ರಾಗೆ ಸಂಪರ್ಕ ಕಲ್ಪಿಸಿಕೊಡುತ್ತದೆ.
ಇದು ಆರು ಲೇನ್ಗಳ ಹೆದ್ದಾರಿಯಾಗಿದ್ದು,ಸಾಮಾನ್ಯವಾಗಿ ಎಲ್ಲರೂ ಅತಿ ವೇಗದಲ್ಲಿ ವಾಹನ ಚಲಾಯಿಸುತ್ತಿರುತ್ತಾರೆ.
ಸಾಮಾನ್ಯವಾಗಿ ಚಳಿಗಾಲದಲ್ಲಿ ಬೆಳಗಿನ ಜಾವ ಮಂಜು ಮುಸುಕಿರುವ ಕಾರಣ ಎದುರಲ್ಲಿ ವಾಹನಗಳಿದ್ದರೂ ಕಾಣಿಸುವುದಿಲ್ಲ ಹೀಗಾಗಿ ಇಂತಹ ದುರ್ಘಟನೆ ಸಂಭವಿಸಿದೆ ಎಂದು ಹತ್ರಾಸ್ ಎಸ್ಪಿ ವಿನಿತ್ ತಿಳಿಸಿದ್ದಾರೆ.