ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಂಭಮೇಳದಲ್ಲಿ ಇತಿಹಾಸ ಸೃಷ್ಟಿ, ಸಂಗಮದಲ್ಲಿ ಮಿಂದೆದ್ದ ತೃತೀಯ ಲಿಂಗಿಗಳು

|
Google Oneindia Kannada News

ಪ್ರಯಾಗರಾಜ್, ಜನವರಿ 17: ಜಗತ್ಪ್ರಸಿದ್ಧ ಕುಂಭಮೇಳದಲ್ಲಿ ಬುಧವಾರ ಇತಿಹಾಸವೊಂದು ಸೃಷ್ಟಿಯಾಗಿದೆ. ಕಳೆದ ಹತ್ತು ವರ್ಷಗಳಿಂದ ಕುಂಭಮೇಳದ ಪವಿತ್ರ ಸಂಗಮದಲ್ಲಿ ಸ್ನಾನ ಮಾಡಲು ಇಚ್ಛಿಸಿದ್ದ ತೃತೀಯ ಲಿಂಗಿಗಳ ಮಹದಾಸೆ ಕೊನೆಗೂ ಈಡೇರಿದೆ!

ಕುಂಭಮೇಳದಲ್ಲಿ ಇದುವರೆಗೂ ಯಾವುದೇ ತೃತೀಯಲಿಂಗಿಗಳು ಭಾಗವಹಿಸಲಿರಲಿಲ್ಲ. ಅದಕ್ಕಾಗಿ ಕಳೆದ ಹತ್ತು ವರ್ಷಗಳಿಂದಲೂ ಲಕ್ಷ್ಮಿ ನಾರಾಯಣ ತ್ರಿಪಾಠಿ ಎಂಬುವವರು ಹೋರಾಟ ನಡೆಸಿದ್ದರು. ಕಳೆದ ವರ್ಷ ಸಲಿಂಗಕಾಮ ಅಮರಾಧವಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಮೇಲೆ ತೃತೀಯ ಲಿಂಗಿಗಳನ್ನು ನೋಡುವ ದೃಷ್ಟಿಕೋನ ಬದಲಾಗಿದೆ.

ಮಗಳಾದನು ಮಗ... ಜಗತ್ತೇನೇ ಹೇಳಲಿ, ತುಂಬಿದೆ ಅಮ್ಮನ ಕಣ್ಣಾಲಿ! ಮಗಳಾದನು ಮಗ... ಜಗತ್ತೇನೇ ಹೇಳಲಿ, ತುಂಬಿದೆ ಅಮ್ಮನ ಕಣ್ಣಾಲಿ!

'ಕಿನ್ನಾರಾ' ಎಂಬ ಸಮುದಾಯದಲ್ಲಿ ಕರೆಯಲ್ಪಡುವ ಈ ತೃತೀಯ ಲಿಂಗಿಗಳು ಅದೃಷ್ಟದ ಸಂಕೇತ ಎಂದೇ ನೋಡಲಾಗುತ್ತದೆ. ಕುಂಭಮೇಳಕ್ಕೆ ಬಂದಿದ್ದ ಈ ತೃತೀಯ ಲಿಂಗಿಗಳಿಗೆ ಜನರು ಕೈಮುಗಿದು, ಕಾಲಿಗೆ ಬಿದ್ದು ಆಶೀರ್ವಾದ ಬೇಡಿ, ಅವರ ಬಳಿ ನಾಣ್ಯವನ್ನು ಮಂತ್ರಿಸಿಕೊಂಡು ಹೋಗುತ್ತಿದ್ದ ದೃಶ್ಯ ಸರ್ವೇ ಸಾಮಾನ್ಯ ಆಗಿತ್ತು.

First time in history transgenders take holy dip at Kumbh Mela in UP

ನಾಲ್ಕು ಗೋಡೆ ನಡುವೆ ನಡೆವ ಆ ಕ್ರಿಯೆ ಅಪರಾಧವಲ್ಲ: RJ ಪ್ರಿಯಾಂಕಾ ಸಂದರ್ಶನ ನಾಲ್ಕು ಗೋಡೆ ನಡುವೆ ನಡೆವ ಆ ಕ್ರಿಯೆ ಅಪರಾಧವಲ್ಲ: RJ ಪ್ರಿಯಾಂಕಾ ಸಂದರ್ಶನ

"ನಮ್ಮನ್ನು ಯಾವ ತಕರಾರಿಲ್ಲದೆ ಮುಖ್ಯವಾಹಿನಿಯು ಬರಮಾಡಿಕೊಂಡಿದ್ದು ಸಾಕಷ್ಟು ಸಂತಸ ತಂದಿದೆ. ಸ್ರಷ್ಟಿಕರ್ತ ಎಲ್ಲರನ್ನೂ ಸಮನಾಗಿ ನೋಡುತ್ತಾನೆ, ತನ್ನಲ್ಲಿ ಸ್ವೀಕರಿಸುತ್ತಾನೆ" ಎಂದು ಲಕ್ಷ್ಮಿ ನಾರಾಯಣ ತ್ರಿಪಾಠಿ ಅಭಿಪ್ರಾಯಪಟ್ಟಿದ್ದಾರೆ.

ನಮ್ಮ ಧರ್ಮದ ವೈಶಿಷ್ಠ್ಯ ಇದೇ!

ಕುಂಭಮೇಳದಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ತೃತೀಯ ಲಿಂಗಿಗಳು ಪವಿತ್ರಸ್ನಾನ ಮಾಡಿದ್ದಾರೆ. ಇದು ನಮ್ಮ ಧರ್ಮದ ವೈಶಿಷ್ಟ್ಯ. ಇದನ್ನೂ ವಿರೋಧಿಸುವವರು ಯಾರಾದರೂ ಇದ್ದಾರೆಯೇ ಎಂದು ಗೋವಿಂದ್ ಎಚ್ ಎಂಬುವವರು ಪ್ರಶ್ನಿಸಿದ್ದಾರೆ.

Array

ವಿವಿಧತೆಯಲ್ಲಿ ಏಕತೆ ಎಂದರೆ ಇದೇ!

ವಿವಿಧತೆಯಲ್ಲಿ ಏಕತೆ ಎಂದರೆ ಅಬ್ರಾಹ್ಮಣರೊಂದಿಗೆ ಗೋಮಾಂಸ ತಿನ್ನುವುದಲ್ಲ. ಕುಂಭಮೇಳವನ್ನು ನೋಡಿ. ಇಲ್ಲಿ ಎಲ್ಲ ಜಾತಿಯ, ಪಂಥದ, ಲಿಂಗದ ಸಾಧುಗಳು ಒಂದಾಗಿದ್ದಾರೆ. ತೃತೀಯ ಲಿಂಗಿಗಳು ಸಹ ಎಂದಿದ್ದಾರೆ ಶ್ಯಾಮಾಂಜನ್ ಸುರ್.

ಇದು ಅತ್ಯಂತ ಒಳ್ಳೆಯ ಸುದ್ದಿ!

ಇದು ನೀವು ಇಂದು ಓದುತ್ತಿರುವ ಅತ್ಯಂತ ಒಳ್ಳೆಯ, ಧನಾತ್ಮಕ ಸುದ್ದಿ. ಹಿಂದುಮತದಲ್ಲಿ ಸತತವಾಗಿ ನಡೆಯುತ್ತಿರುವ ವಿಕಾಸವೇ ಅದು ಎಷ್ಟೋ ಶತಮಾನಗಳ ದಾಳಿಯ ನಂತರವೂ ಗಟ್ಟಿಯಾಗಿ ಅಸ್ತಿತ್ವ ಕಾಯ್ದುಕೊಂಡಿರುವುದಕ್ಕೆ ಕಾರಣ ಎಂದಿದ್ದಾರೆ ಸ್ಮಿತಾ ಬಾರೂಹ್.

ಇದೊಂದು ಕ್ರಾಂತಿಕಾರಿ ಹೆಜ್ಜೆ

ತೃತೀಯಲಿಂಗಿಗಳನ್ನು ಮುಖ್ಯವಾಹಿನಿಗೆ ತರಲು ಇದೊಂದು ಕ್ರಾಂತಿಕಾರಿ ಹೆಜ್ಜೆ. ಮೊಟ್ಟಮೊದಲ ಬಾರಿಗೆ ತೃತೀಯಲಿಂಗಿ ಕಿನ್ನಾರಾ ಅಖಾಡಾ ಸಮುದಾಯ ಕುಂಭಮೇಳದಲ್ಲಿ ಭಾಗವಹಿಸಿದೆ ಎಂದು ಇಂಡಿಯನ್ ಈಗಲ್ ಖಾತೆಯಿಂದ ಶ್ಲಾಘಿಸಲಾಗಿದೆ.

English summary
After a decades fight of a transgender, for the first time in history transgenders took holy dip in Kumbh Mela in Prayagraj in Uttar Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X