ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದಲ್ಲೇ ಮೊದಲು: ಉತ್ತರ ಪ್ರದೇಶದಲ್ಲಿ ಹಸುಗಳ ತುರ್ತು ಚಿಕಿತ್ಸೆಗೆ ಆಂಬುಲೆನ್ಸ್ ಸೇವೆ

|
Google Oneindia Kannada News

ಲಕ್ನೋ, ನವೆಂಬರ್ 15: ಭಾರತದಲ್ಲಿ ಗೋವಿನ ರಕ್ಷಣೆಗೆ ಸಂಬಂಧಿಸಿದಂತೆ ಈಗಾಗಲೇ ಹಲವು ನಿಯಮಗಳನ್ನು ಜಾರಿಗೊಳಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಹಸುಗಳ ರಕ್ಷಣೆಗೆ ವಿನೂತನ ಯೋಜನೆಗಳನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಾರಿಗೊಳಿಸಿದ್ದಾರೆ. ಈಗ ಅದೇ ಪಟ್ಟಿಗೆ ಮತ್ತೊಂದು ಯೋಜನೆ ಸೇರ್ಪಡೆಯಾಗಿದೆ.

ಉತ್ತರ ಪ್ರದೇಶದಲ್ಲಿ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಹಸುಗಳಿಗೆ ಆಂಬ್ಯುಲೆನ್ಸ್ ಸೇವೆಯನ್ನು ಪ್ರಾರಂಭಿಸಲು ಸರ್ಕಾರ ಸಿದ್ಧವಾಗಿದೆ ಎಂದು ರಾಜ್ಯ ಹೈನುಗಾರಿಕೆ ಅಭಿವೃದ್ಧಿ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ಲಕ್ಷ್ಮಿ ನಾರಾಯಣ ಚೌಧರಿ ಹೇಳಿದ್ದಾರೆ.

ಬಿಜೆಪಿ ಗೋವುಗಳ ರಕ್ಷಣೆ ಮಾಡುವುದಿಲ್ಲ ಎನ್ನುವುದಕ್ಕೆ ತಾಜಾ ಉದಾಹರಣೆಬಿಜೆಪಿ ಗೋವುಗಳ ರಕ್ಷಣೆ ಮಾಡುವುದಿಲ್ಲ ಎನ್ನುವುದಕ್ಕೆ ತಾಜಾ ಉದಾಹರಣೆ

ದೇಶದಲ್ಲಿ ಇದೇ ಮೊದಲ ಬಾರಿಗೆ ಹಸುಗಳಿಗೆ ಆಂಬುಲೆನ್ಸ್ ಸೇವೆಯನ್ನು ಒದಗಿಸಲಾಗುತ್ತಿದ್ದು, ಉತ್ತರ ಪ್ರದೇಶದಲ್ಲಿ ನೂತನ ಯೋಜನೆಗಾಗಿ 515 ಆಂಬ್ಯುಲೆನ್ಸ್‌ಗಳು ಸಿದ್ಧವಾಗಿವೆ. 112 ತುರ್ತು ಸೇವಾ ಸಂಖ್ಯೆಯಾಗಿದ್ದು, ಹೊಸ ಸೇವೆಯು ಗಂಭೀರವಾಗಿ ಅಸ್ವಸ್ಥಗೊಂಡ ಹಸುಗಳ ತ್ವರಿತ ಚಿಕಿತ್ಸೆಗೆ ದಾರಿ ಮಾಡಿಕೊಡುತ್ತದೆ" ಎಂದು ಸಚಿವ ಲಕ್ಷ್ಮಿ ನಾರಾಯಣ ಚೌಧರಿ ತಿಳಿಸಿದ್ದಾರೆ.

First State in India: Uttar Pradesh Govt Start Cow Ambulance Service

ಹಸುಗಳ ಆಂಬುಲೆನ್ಸ್ ಸೇವೆಯಲ್ಲಿ ಏನೇನಿದೆ?:

"ಉತ್ತರ ಪ್ರದೇಶದಲ್ಲಿ ಹಸುಗಳ ಆಂಬುಲೆನ್ಸ್ ಸೇವೆಗೆ ಕರೆ ಮಾಡಿದ 15 ರಿಂದ 20 ನಿಮಿಷಗಳ ಅವಧಿಯಲ್ಲಿ ಪಶುವೈದ್ಯರು ಮತ್ತು ಇಬ್ಬರು ಸಹಾಯಕರೊಂದಿಗೆ ಆಂಬ್ಯುಲೆನ್ಸ್ ಬರುತ್ತದೆ. ಡಿಸೆಂಬರ್ ವೇಳೆಗೆ ಪ್ರಾರಂಭವಾಗುವ ಯೋಜನೆಯಡಿ, ದೂರುಗಳನ್ನು ಸ್ವೀಕರಿಸಲು ಲಕ್ನೋದಲ್ಲಿ ಕಾಲ್ ಸೆಂಟರ್ ಅನ್ನು ಸ್ಥಾಪಿಸಲಾಗುವುದು. ಉಚಿತ ಉತ್ತಮ ಗುಣಮಟ್ಟದ ವೀರ್ಯ ಮತ್ತು ಭ್ರೂಣ ಕಸಿ ತಂತ್ರಜ್ಞಾನವನ್ನು ಒದಗಿಸುವುದರೊಂದಿಗೆ ರಾಜ್ಯದ ತಳಿ ಸುಧಾರಣಾ ಕಾರ್ಯಕ್ರಮಕ್ಕೆ ಉತ್ತೇಜನ ಸಿಗುತ್ತದೆ. ಹಸುವಿನ ತಳಿ ಸುಧಾರಣಾ ಕಾರ್ಯಕ್ರಮದಡಿಯಲ್ಲಿ ಜಾನುವಾರುಗಳಿಗೆ ಮೂರು ಬಾರಿ ಉಚಿತವಾಗಿ ಗರ್ಭಧಾರಣೆಯ ಸೌಲಭ್ಯವನ್ನು ನೀಡಲಾಗುವುದು," ಎಂದು ಸಚಿವರು ಮಾಹಿತಿ ನೀಡಿದರು.

ಉತ್ತರ ಪ್ರದೇಶದಲ್ಲಿ ಭ್ರೂಣ ಕಸಿ ತಂತ್ರಜ್ಞಾನ:

ಉತ್ತರ ಪ್ರದೇಶದಲ್ಲಿ ಪ್ರಸ್ತುತ ಭ್ರೂಣ ಕಸಿ ತಂತ್ರಜ್ಞಾನವು ಹೊಸ ಕ್ರಾಂತಿಗೆ ನಾಂದಿ ಹಾಡಿದೆ. ಇದರಿಂದ ಬರಡಾದ ಹಸುಗಳೂ ಸಹ ಹೆಚ್ಚು ಹಾಲು ನೀಡುವ ಪ್ರಾಣಿಗಳಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಹಸು ಸಾಕಾಣಿಕೆದಾರರು ದಿನಕ್ಕೆ ಕನಿಷ್ಠ 20 ಲೀಟರ್ ಹಾಲು ನೀಡುವ ಪ್ರಾಣಿಗಳನ್ನು ಬಿಡದಂತೆ ತಡೆಯುತ್ತದೆ. ಇದರಿಂದ ಬಿಡಾಡಿ ದನಗಳ ಸಮಸ್ಯೆಯನ್ನು ಪರಿಹರಿಸುತ್ತದೆ ಎಂದು ಸಚಿವ ಲಕ್ಷ್ಮಿ ನಾರಾಯಣ ಚೌಧರಿ ಹೇಳಿದ್ದಾರೆ.

ರಾಜ್ಯದ ಎಂಟು ಜಿಲ್ಲೆಗಳಲ್ಲಿ ಪ್ರಯೋಗಿಕ ಚಾಲನೆ:

ಹಸುಗಳಿಗೆ ತುರ್ತು ವೈದ್ಯಕೀಯ ಸೌಲಭ್ಯ ಸಿಗುವಂತೆ ಮಾಡುವ ಉದ್ದೇಶದಿಂದಾಗಿ ರಾಜ್ಯದಲ್ಲಿ ಹಸುಗಳ ಆಂಬುಲೆನ್ಸ್ ಸೇವೆಯನ್ನು ಆರಂಭಿಸಲಾಗುತ್ತಿದೆ. ಉತ್ತರ ಪ್ರದೇಶದ ಎಂಟು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಯೋಜನೆಯನ್ನು ಆರಂಭಿಸಲಾಗುತ್ತದೆ. ತದನಂತರದಲ್ಲಿ ಈ ಯೋಜನೆಯನ್ನು ರಾಜ್ಯದ ಇತರೆ ಜಿಲ್ಲೆಗಳಿಗೆ ವಿಸ್ತರಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

First State in India: Uttar Pradesh Govt Start Cow Ambulance Service

ಬಿಡಾಡಿ ದನಗಳ ಸಾಕಾಣಿಕೆಗೆ ಗೋಶಾಲೆ:

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರವು ಗೋ-ರಕ್ಷಣೆಗೆ ಹೆಚ್ಚಿನ ಒತ್ತು ನೀಡುತ್ತದೆ. ದೇಶದಲ್ಲಿಯೇ ಮೊದಲ ಬಾರಿಗೆ ಬಿಡಾಡಿ ದನಗಳ ಸಾಕಾಣಿಕೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರವು ಅನುದಾನ ನೀಡಿದೆ. ರಾಜ್ಯದಲ್ಲಿ ಹಿಂದಿನ ಯಾವುದೇ ಸರ್ಕಾರಗಳು ಈ ರೀತಿಯ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ರಾಜ್ಯ ಹೈನುಗಾರಿಕೆ ಅಭಿವೃದ್ಧಿ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ಲಕ್ಷ್ಮಿ ನಾರಾಯಣ ಚೌಧರಿ ಹೇಳಿದ್ದಾರೆ.

ಉತ್ತರ ಪ್ರದೇಶ ಚುನಾವಣೆ ಹೊಸ್ತಿಲಿನಲ್ಲಿ ಯೋಜನೆ:

ರಾಜ್ಯ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಮತದಾರರನ್ನು ಸೆಳೆಯುವುದಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಒಂದೊಂದೇ ಯೋಜನೆಗಳನ್ನು ಹಾಕಿಕೊಳ್ಳುತ್ತಿದೆ. ನಿರ್ದಿಷ್ಟವಾಗಿ ಒಂದು ವರ್ಗ ಅಥವಾ ಸಮಾಜದ ಮತಗಳನ್ನು ಪಡೆಯುವ ಉದ್ದೇಶದಿಂದಾಗಿ ಗೋ-ಹತ್ಯೆ ನಿಷೇಧ ಕಾಯ್ದೆ ಮತ್ತು ಹಸುಗಳ ಆಂಬುಲೆನ್ಸ್ ಸೇವೆ ಸೇರಿದಂತೆ ವಿಭಿನ್ನ ಯೋಜನೆಯನ್ನು ಪರಿಚಯಿಸಲು ಮುಂದಾಗಿದೆ. 2022ರಲ್ಲಿ ಉತ್ತರ ಪ್ರದೇಶದ 403 ವಿಧಾನಸಭೆಗೆ ಚುನಾವಣೆ ನಡೆಯಲಿದೆ.

Recommended Video

ರೇಡಿಯೋದಿಂದ ರಾಜಕೀಯದ ವರೆಗೂ ಲಾವಣ್ಯ ನಡೆದು ಬಂದ ಹಾದಿ | Oneindia Kannada

English summary
First State in India: Uttar Pradesh Govt Start Ambulance Service For Cows.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X