ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲವ್ ಜಿಹಾದ್ ವಿರುದ್ಧದ ಹೊಸ ಕಾನೂನಿನಡಿ ಮೊದಲ ಕೇಸ್ ದಾಖಲು

|
Google Oneindia Kannada News

ಲಕ್ನೋ, ನ. 29: ಉತ್ತರಪ್ರದೇಶದಲ್ಲಿ ಈಗ ಕಾನೂನು ರಹಿತ ಮತಾಂತರ, ಬಲವಂತವಾಗಿ ಮತಾಂತರ ಅಥವಾ ಮದುವೆ ಉದ್ದೇಶದಿಂದ ಮತಾಂತರ ಮಾಡುವ 'ಲವ್ ಜಿಹಾದ್ ' ವಿರುದ್ಧ ಕಠಿಣ ಕಾನೂನು ರೂಪುಗೊಂಡಿದೆ. ಈ ಹೊಸ ಕಾನೂನಿನಡಿಯಲ್ಲಿ ಮೊದಲ ಪ್ರಕರಣ ಬರೇಲಿ ಜಿಲ್ಲೆಯಲ್ಲಿ ದಾಖಲಿಸಲಾಗಿದೆ

Prohibition of Unlawful Conversion of Religion Ordinance, 2020 ಎಂದು ಕರೆಯುವ ಅಕ್ರಮ ಮತಾಂತರ ವಿಧೇಯಕದ ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಬರೇಲಿ ಜಿಲ್ಲೆಯ ದೇವರ್ನಿಯಾನ್ ದ ಪೊಲೀಸ್ ಅಧಿಕಾರಿ ಕಾನೂನು ಮತ್ತು ಸುವವ್ಯವಸ್ಥೆ ಎಡಿಜಿ ಪ್ರಶಾಂತ್ ಕುಮಾರ್ ಹೇಳಿದ್ದಾರೆ.

First case under new anti-conversion law in Bareilly district

ಷರೀಫ್ ನಗರ ಗ್ರಾಮದ ನಿವಾಸಿ ಟೀಕಾರಾಮ್ ಎಂಬುವರು ದೂರು ದಾಖಲಿಸಿದ್ದು,ತಮ್ಮ ಪುತ್ರಿಯ ವಿರೋಧದ ನಡುವೆ ಮತಾಂತರ ಮಾಡಲಾಗಿದೆ ಎಂದು ದೂರಿದ್ದಾರೆ. ಈ ಕುರಿತಂತೆ ದೇವರ್ನಿಯಾನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದ ಆರೋಪಿಯನ್ನು ಯುವೈಷ್ ಅಹ್ಮದ್ ಎಂದು ಗುರುತಿಸಲಾಗಿದ್ದು, ಯುವತಿಯನ್ನು ಪುಸಲಾಯಿಸಿ ಮತಾಂತರ ಮಾಡಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.

ಕಾನೂನು ಮೀರಿ ಮತಾಂತರಕ್ಕೆ ಮುಂದಾದವರಿಗೆ 1 ರಿಂದ 5 ವರ್ಷ ಜೈಲುಶಿಕ್ಷೆ, 15,000 ರು ದಂಡ ವಿಧಿಸಲಾಗುವುದು. ಅಪ್ರಾಪ್ತರು ಹಾಗೂ ಎಸ್ ಸಿ, ಎಸ್ಟಿ ಸಮುದಾಯದ ಮಹಿಳೆಯರನ್ನು ಬಲವಂತವಾಗಿ ಮತಾಂತರ ಮಾಡಿದರೆ 3 ರಿಂದ 10 ವರ್ಷ ಜೈಲುಶಿಕ್ಷೆ ಹಾಗೂ 25,000 ರು ದಂಡ ವಿಧಿಸುವ ವಿಧೇಯಕಕ್ಕೆ ಶನಿವಾರದಂದು ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿಬೇನ್ ಪಟೇಲ್ ಅವರು ಅಂಕಿತ ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Uttar Pradesh registered first case under the newly-promulgated Prohibition of Unlawful Conversion of Religion Ordinance, 2020, at Deorania Police station in Bareilly district, the police informed on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X