• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾನ್ಪುರದಲ್ಲಿ ರಷ್ಯಾದ ಸ್ಪುಟ್ನಿಕ್ V ಕೊರೊನಾ ಲಸಿಕೆ ಪ್ರಯೋಗ

|

ಕಾನ್ಪುರ, ನವೆಂಬರ್ 17: ಕಾನ್ಪುರದಲ್ಲಿ ರಷ್ಯಾದ ಸ್ಪುಟ್ನಿಕ್ V ಕೊರೊನಾ ಲಸಿಕೆ ಪ್ರಯೋಗ ಶೀಘ್ರ ಆರಂಭವಾಗಿದೆ. ಲಸಿಕೆಯ 2-3ನೇ ಹಂತದ ಪರೀಕ್ಷೆಯು ಮುಂದಿನ ವಾರ ಉತ್ತರ ಪ್ರದೇಶದ ಕಾನ್ಪುರದ ಗಣೇಶ್ ಶಂಕರ್ ವಿದ್ಯಾರ್ಥಿ ವೈದ್ಯಕೀಯ ಕಾಲೇಜಿನಲ್ಲಿ ನಡೆಯಲಿದೆ. ಈ ಪರೀಕ್ಷೆಗೆ 180 ಮಂದಿ ಸ್ವಯಂ ಪ್ರೇರಿತವಾಗಿ ಭಾಗಿಯಾಗಲು ನೋಂದಣಿಯಾಗಿದ್ದಾರೆ.

ಈ ಕುರಿತು ಕಾಲೇಜು ಪ್ರಾಂಶುಪಾಲರಾದ ಆರ್‌ಬಿ ಕಮಲ್ ಪ್ರತಿಕ್ರಿಯೆ ನೀಡಿದ್ದು, 21 ದಿನಗಳ ಅಂತರದಲ್ಲಿ ಒಮ್ಮೆ ಎರಡು ಅಥವಾ ಮೂರು ಬಾರಿ ಲಸಿಕೆಯನ್ನು ನೀಡಲಾಗುತ್ತದೆ.ಲಸಿಕೆಯ ಪರಿಣಾಮವನ್ನು ಒಂದು ತಿಂಗಳವರೆಗೆ ಗಮನಿಸಿದ ಬಳಿಕ ಅದರ ಫಲಿತಾಂಶವನ್ನು ಘೋಷಿಸಲಾಗುತ್ತದೆ.

ಸಿಕ್ಕೇಬಿಡ್ತು ಸಂಜೀವಿನಿ, ಕೊರೊನಾ ವ್ಯಾಕ್ಸಿನ್ ಸಕ್ಸಸ್..?

ಆದಾಗ್ಯೂ ನಂತರದ 7 ತಿಂಗಳವರೆಗೂ ಲಸಿಕೆಯ ಪರಿಣಾಮವನ್ನು ಅಧ್ಯಯನ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಈ ಮಧ್ಯೆ ಸ್ಪುಟ್ನಿಕ್ ಲಸಿಕೆ ನಿರ್ವಹಣೆ ಭಾರತಕ್ಕೆ ದೊಡ್ಡ ಸವಾಲಾಗಿ ಪರಿಣಮಿಸುವ ನಿರೀಕ್ಷೆ ಇದೆ.

ಪಿಫೈಜರ್ ಲಸಿಕೆಯಂತೆ ಸ್ಪುಟ್ನಿಕ್ ಅನ್ನೂ -20 ರಿಂದ -70 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಇಡಬೇಕು, ಈ ಸೌಲಭ್ಯ ಒದಗಿಸಲು ಭಾರತಕ್ಕೆ ಸಾಧ್ಯವೇ ಎಂಬ ಪ್ರಶ್ನೆ ಉದ್ಭವವಾಗಿದೆ.

ಅಮೆರಿಕದ ಬಯೋಟೆಕ್ ಫರ್ಮ್ ಮಾಟೆರ್ನಾ ಅಭಿವೃದ್ಧಿಪಡಿಸಿರುವ ಕೊವಿಡ್ ಲಸಿಕೆ ಶೇ.94ರಷ್ಟು ಸುರಕ್ಷಿತ ಎನ್ನುವ ಮಾಹಿತಿ ಲಭ್ಯವಾಗಿದೆ.

ಮಾಡೆರ್ನಾವು 30 ಸಾವಿರ ಮಂದಿ ಮೇಲೆ ಕೊರೊನಾ ಲಸಿಕೆ ಪ್ರಯೋಗವನ್ನು ಮಾಡಿದೆ. ಕಳೆದ ವಾರವಷ್ಟೇ ಅಮೆರಿಕದ ಫಾರ್ಮಾಸುಟಿಕಲ್ ಕಂಪನಿ ಪಿಫೈಜರ್ ಹಾಗೂ ಅದರ ಜರ್ಮಲ್ ಪಾಲುದಾರ ಬಯೋಎನ್‌ಟೆಕ್ ತಮ್ಮ ಲಸಿಕೆ ಶೇ.90ರಷ್ಟು ಸುರಕ್ಷಿತ ಎಂದು ಹೇಳಿಕೊಂಡಿದ್ದವು. ಕೊರೊನಾ ಲಸಿಕೆಯ ಮೂರನೇ ಪ್ರಯೋಗದಲ್ಲಿ ಗಂಭೀರ ಸ್ಥಿತಿಯಲ್ಲಿರುವವರನ್ನು ಕೂಡ ಕೊರೊನಾ ಲಸಿಕೆ ಗುಣಪಡಿಸಿದೆ. ಈಗ ಪಿಫೈಜರ್ ನಂತರ ಎರಡನೇ ಕೊರೊನಾ ಲಸಿಕೆ ಮೇಲೆ ನಂಬಿಕೆ ಬಂದಿದೆ.

English summary
The first batch of Russian Sputnik V vaccine for Covid19 is likely to reach Kanpur's Ganesh Shankar Viyarthi Medical college by next week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X