ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ದೆಹಲಿ ಬಳಿಯ ಘಾಜಿಯಾಬಾದ್‌ನ ಗೋಡೌನ್‌ನಲ್ಲಿ ಅಗ್ನಿ ಅವಘಡ

|
Google Oneindia Kannada News

ನವದೆಹಲಿ, ಜೂನ್ 3: ನಿನ್ನೆ ಗುರುವಾರ ಸಂಜೆ ಗುಜರಾತ್‌ನ ವಡೋದರಾದಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಇಂದು ಶುಕ್ರವಾರ ಮುಂಜಾನೆ ಉತ್ತರಪ್ರದೇಶದ ಘಾಜಿಯಾಬಾದ್ ಜಿಲ್ಲೆಯಲ್ಲಿ ಅಗ್ನಿ ಆಕಸ್ಮಿಕ ಘಟನೆ ವರದಿಯಾಗಿದೆ. ರಾಷ್ಟ್ರರಾಜಧಾನಿ ದೆಹಲಿಗೆ ಸಮೀಪ ಇರುವ ಘಾಜಿಯಾಬಾದ್‌ನ ಶಾಹೀದ್ ನಗರ್ ಮೆಟ್ರೋ ಸ್ಟೇಷನ್ ಬಳಿಯ ಗೋಡೌನ್‌ನಲ್ಲಿ ಬೆಳಗ್ಗೆ ಬೆಂಕಿಹೊತ್ತಿಕೊಂಡಿದೆ.

ಗುಜರಾತ್: ರಾಸಾಯನಿಕ ಘಟಕದಲ್ಲಿ ಬೆಂಕಿ; 7 ಅಸ್ವಸ್ಥ- 700 ಜನರ ಸ್ಥಳಾಂತರಗುಜರಾತ್: ರಾಸಾಯನಿಕ ಘಟಕದಲ್ಲಿ ಬೆಂಕಿ; 7 ಅಸ್ವಸ್ಥ- 700 ಜನರ ಸ್ಥಳಾಂತರ

ಸದ್ಯ ಯಾರಿಗೂ ಸಾವಾಗಲೀ, ಗಾಯವಾಗಲೀ ಆಗಿರುವ ಬಗ್ಗೆ ವರದಿಗಳು ಬಂದಿಲ್ಲ. 12 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಬಂದಿದ್ದು, ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಅಗ್ನಿಶಾಮಕ ಅಧಿಕಾರಿಗಳು ನೀಡಿರುವ ಮಾಹಿತಿಯಂತೆ ಸದ್ಯ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ.

Fire Accident At Godown in Ghaziabad, UP

"ಹನ್ನೆರಡಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ. ಬೆಂಕಿ ಅವಘಡದಲ್ಲಿ ಜನರಿಗೆ ಹಾನಿಯಾಗಿಲ್ಲ. ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಎಎನ್‌ಐ ಸುದ್ದಿ ಸಂಸ್ಥೆಗೆ ಮುಖ್ಯ ಅಗ್ನಿಶಾಮಕ ಅಧಿಕಾರಿ ಸುನೀಲ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
"ಗೋದಾಮಿನಲ್ಲಿ ಬಟ್ಟೆ ಮತ್ತು ಪ್ಲಾಸ್ಟಿಕ್ ವಸ್ತುಗಳು ಇರುವುದರಿಂದ ಸಾಕಷ್ಟು ಬೆಂಕಿ ವ್ಯಾಪಿಸಿದೆ. ಇದರಿಂದಾಗಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲು ಇನ್ನಷ್ಟು ಸಮಯ ಬೇಕಾಗುತ್ತದೆ" ಎಂದು ಸಿಂಗ್ ಮಾಹಿತಿ ನೀಡಿದ್ದಾರೆ.

Fire Accident At Godown in Ghaziabad, UP

ಗುಜರಾತ್‌ನಲ್ಲಿ ಕೆಮಿಕಲ್ ಫ್ಯಾಕ್ಟರಿಯಲ್ಲಿ ಬೆಂಕಿ:
ನಿನ್ನೆ ಗುರುವಾರ ಗುಜರಾತ್‌ನ ವಡೋದರದಲ್ಲಿರುವ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಭಾರೀ ಸ್ಫೋಟ ಆಗಿ ಬೆಂಕಿ ಹೊತ್ತಿಕೊಂಡಿರುವ ಘಟನೆ ವರದಿಯಾಗಿತ್ತು. ರಾಸಾಯನಿಕ ಹೊಗೆಯಿಂದ ಅಸ್ವಸ್ಥಗೊಂಡಿರುವ ಏಳು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಖಾನೆ ಸುತ್ತಮುತ್ತ ಇರುವ 700 ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ.

(ಒನ್ಇಂಡಿಯಾ ಸುದ್ದಿ)

English summary
Fire has broke out at a godown in Ghaziabad district of Uttar Pradesh on May 3rd morning. No casualty reported yet says ANI News Agency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X