ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದೂ ದೇವತೆಗಳ ಅವಹೇಳನ: 'ತಾಂಡವ್' ವಿರುದ್ಧ ಎಫ್‌ಐಆರ್

|
Google Oneindia Kannada News

ಲಕ್ನೋ, ಜನವರಿ 18: ಹಿಂದಿ ವೆಬ್ ಸೀರೀಸ್ 'ತಾಂಡವ್' ನಿರ್ದೇಶಕ ಮತ್ತು ಬರಹಗಾರರಾದ ಅಲಿ ಅಬ್ಬಾಸ್ ಜಾಫರ್ ಹಾಗೂ ಗೌರವ್ ಸೋಲಂಕಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಹಿಂದೂ ದೇವತೆಗಳನ್ನು ಕೀಳಾಗಿ ಚಿತ್ರಿಸಿರುವ ಆರೋಪದಲ್ಲಿ ದೂರು ಸಲ್ಲಿಸಲಾಗಿದೆ.

ಉತ್ತರ ಪ್ರದೇಶದ ಹಜರತ್ ಗಂಜ್ ಪೊಲೀಸ್ ಠಾಣೆಯಲ್ಲಿ ಅಮೇಜಾನ್ ಪ್ರೈಮ್‌ನ ಮೂಲ ಕಾರ್ಯಕ್ರಮಗಳ ಭಾರತೀಯ ಮುಖ್ಯಸ್ಥೆ ಅಪರ್ಣಾ ಪುರೋಹಿತ್, ನಿರ್ಮಾಪಕ ಹಿಮಾಂಶು ಕೃಷ್ಣ ಮೆಹ್ರಾ ಮತ್ತು ಇನ್ನೊಬ್ಬ ಅನಾಮಧೇಯ ವ್ಯಕ್ತಿ ವಿರುದ್ಧ ಕೂಡ ಎಫ್‌ಐಆರ್ ದಾಖಲಾಗಿದೆ.

 ಆಂಧ್ರದಲ್ಲಿ ಸಾಲುಸಾಲು ಪುರಾತನ ದೇವಾಲಯಗಳ ಧ್ವಂಸ: ಭಾರೀ ಒತ್ತಡಲ್ಲಿ ಸಿಎಂ ಜಗನ್ ಆಂಧ್ರದಲ್ಲಿ ಸಾಲುಸಾಲು ಪುರಾತನ ದೇವಾಲಯಗಳ ಧ್ವಂಸ: ಭಾರೀ ಒತ್ತಡಲ್ಲಿ ಸಿಎಂ ಜಗನ್

ವಿಭಿನ್ನ ಧಾರ್ಮಿಕ ಗುಂಪುಗಳು, ಜನಾಂಗೀಯ, ಜನ್ಮ ಸ್ಥಳಗಳ ನಡುವೆ ವೈರತ್ವ ಬಿತ್ತುವುದು, ಆರಾಧನೆಯ ಅಥವಾ ಪವಿತ್ರ ಸ್ಥಳವನ್ನು ನಾಶಪಡಿಸುವಿಕೆ, ಹಾನಿ, ಅಥವಾ ಅಪವಿತ್ರಗೊಳಿಸುವ ಆರೋಪಗಳನ್ನು ಹೊರಿಸಲಾಗಿದೆ. ಪ್ರತಿಷ್ಠೆಗೆ ಚ್ಯುತಿ ತರುವ ಉದ್ದೇಶದಿಂದ ವಂಚನೆ ಮಾಡುವುದು, ಸಾರ್ವಜನಿಕ ಕೇಡುತನ ಉಂಟುಮಾಡುವ ಹೇಳಿಕೆ ನೀಡುವುದು, ಭಾರತದ ಏಕತೆ, ಸಮಗ್ರತೆ, ಸುರಕ್ಷತೆ ಅಥವಾ ಸಾರ್ವಭೌಮತೆಗೆ ಬೆದರಿಕೆ ಹಾಕುವ ಉದ್ದೇಶ ಮತ್ತು ಒಂದು ವರ್ಗದ ಜನರ ಮೇಲೆ ಬೆದರಿಕೆ ಹಾಕುವುದು ಈ ಆರೋಪಗಳಲ್ಲಿ ಸೇರಿದೆ.

FIR Filed Against Tandav Web Series Director And Writer For Promoting Religious Enimity

ಇದಕ್ಕೂ ಮುನ್ನ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಭಾರತದಲ್ಲಿನ ಅಮೆಜಾನ್ ಪ್ರೈಮ್ ವಿಡಿಯೋದ ಅಧಿಕಾರಿಗಳಿಗೆ ಸಮನ್ಸ್ ನೀಡಿತ್ತು.

ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿ ಹೇಳಿಕೆ: ಮುರುಗೇಶ್ ನಿರಾಣಿ ವಿರುದ್ಧ ದೂರು ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿ ಹೇಳಿಕೆ: ಮುರುಗೇಶ್ ನಿರಾಣಿ ವಿರುದ್ಧ ದೂರು

ಸೈಫ್ ಅಲಿ ಖಾನ್ ನಟಿಸಿರುವ ತಾಂಡವ್ ವೆಬ್ ಸೀರೀಸ್ ಹಿಂದೂ ಧರ್ಮೀಯರ ಭಾವನೆಗಳಿಗೆ ಧಕ್ಕೆ ತರುತ್ತಿದೆ ಎಂದು ಬಿಜೆಪಿಯ ಇಬ್ಬರು ನಾಯಕರು ಆರೋಪಿಸಿದ್ದರು. ವೆಬ್ ಸೀರೀಸ್ ವಿರುದ್ಧ ಬಿಜೆಪಿ ಮುಖಂಡ ರಾಮ್ ಕಡಂ ಅವರು ಮುಂಬೈನ ಘಟ್ಕೋಪರ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ವೆಬ್ ಸೀರೀಸ್ ಹಿಂದೂಗಳ ಭಾವನೆಗಳಿಗೆ ಗಾಸಿಯುಂಟುಮಾಡಿದೆ. ಇದನ್ನು ಸಹಿಸುವುದಿಲ್ಲ ಎಂದು ಅವರು ಹೇಳಿದ್ದರು.

English summary
An FIR was filed against the director and writer of Tandav web series for allegedly promoting Hindu gods in a bad light.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X