ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿವಾಹ ನೋಂದಣಿಗೆ ಬಂದಿದ್ದ ಯುವಕನ ಬಂಧಿಸಿದ ಮೊರಾದಾಬಾದ್ ಪೊಲೀಸರು

By Lekhaka
|
Google Oneindia Kannada News

ಲಕ್ನೋ, ಡಿಸೆಂಬರ್ 06: ವಿವಾಹ ನೋಂದಣಿ ಮಾಡಿಸಲು ಬಂದಿದ್ದ ಮುಸ್ಲಿಂ ಯುವಕನನ್ನು ಪೊಲೀಸರು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ ನಲ್ಲಿ ಭಾನುವಾರ ನಡೆದಿದೆ.

ಐದು ತಿಂಗಳ ಹಿಂದೆ ಆತ ಹಿಂದೂ ಯುವತಿಯನ್ನು ಮದುವೆಯಾಗಿದ್ದ ಎನ್ನಲಾಗಿದೆ. ವಿವಾಹವನ್ನು ನೋಂದಣಿ ಮಾಡಿಸಿಕೊಳ್ಳಲು ಆತ ಯುವತಿಯೊಂದಿಗೆ ರೆಜಿಸ್ಟ್ರಾರ್ ಕಚೇರಿಗೆ ಬಂದಿದ್ದ. ಈ ಸಂದರ್ಭ ಬಜರಂಗದಳದ ಸದಸ್ಯರು ಪೊಲೀಸರಿಗೆ ಇವರನ್ನು ಒಪ್ಪಿಸಿದ್ದಾರೆ. ಯುವಕ ಹಾಗೂ ಯುವಕನ ಸಹೋದರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಾನೂನು ಬಾಹಿರ ಮತಾಂತರ ನಿಷೇಧ ಸುಗ್ರೀವಾಜ್ಞೆ: ಉ.ಪ್ರದೇಶ ರಾಜ್ಯಪಾಲರ ಅಂಕಿತಕಾನೂನು ಬಾಹಿರ ಮತಾಂತರ ನಿಷೇಧ ಸುಗ್ರೀವಾಜ್ಞೆ: ಉ.ಪ್ರದೇಶ ರಾಜ್ಯಪಾಲರ ಅಂಕಿತ

ಜುಲೈ 24ರಂದು ಡೆಹ್ರಾಡೂನ್ ನಲ್ಲಿ ಈ ಜೋಡಿ ಮದುವೆಯಾಗಿತ್ತು. ಯುವತಿಯು ತನ್ನ ಒಪ್ಪಿಗೆ ಮೇರೆಗೆ ಆತನನ್ನು ಮದುವೆಯಾಗಿದ್ದು, ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದುದಾಗಿ ತಿಳಿಸಿದ್ದಾಳೆ. ಕಳೆದ ನಾಲ್ಕೈದು ತಿಂಗಳಿನಿಂದ ಕಾಂತ್ ನಲ್ಲಿ ಇವರು ನೆಲೆಸಿದ್ದಾರೆ. ಯುವಕ ಅಥವಾ ಯುವತಿ ಮತಾಂತರವಾಗಿದ್ದಾರಾ ಎಂಬ ಕುರಿತು ಮಾಹಿತಿ ಇಲ್ಲ.

 Fifth Case Registered Under Unlawful Conversion Of Religion Ordinance In Moradabad

ಕಾನೂನುಬಾಹಿರ ಮತಾಂತರ ನಿಷೇಧ ಸುಗ್ರೀವಾಜ್ಞೆ 2020 ಜಾರಿ ನಂತರ ಉತ್ತರ ಪ್ರದೇಶದಲ್ಲಿ ದಾಖಲಾಗಿರುವ ಐದನೇ ಪ್ರಕರಣ ಇದಾಗಿದೆ. ಬಲವಂತವಾಗಿ ಮತಾಂತರ ಅಥವಾ ಮದುವೆ ಉದ್ದೇಶದಿಂದ ಮತಾಂತರ ಮಾಡುವ ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು ತೆಗೆದುಕೊಳ್ಳುವ ಉದ್ದೇಶದೊಂದಿಗೆ ಉತ್ತರ ಪ್ರದೇಶ ಸರ್ಕಾರ ಸುಗ್ರೀವಾಜ್ಞೆ ಜಾರಿಗೊಳಿಸಲು ಒಪ್ಪಿಗೆ ಸೂಚಿಸಿತ್ತು.

ಯುವತಿ ತಾಯಿಯಿಂದ ದೂರು: ಯುವತಿ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ತನ್ನ ಮಗಳನ್ನು ಮದುವೆಗೆ ಪ್ರೇರೇಪಿಸಿ, ಅವಳಿಗೆ ಕೆಲಸ ಕೊಡಿಸುವ ನೆಪದಲ್ಲಿ ಮತಾಂತರ ಮಾಡಿರುವುದಾಗಿ ಅವರು ದೂರಿದ್ದಾರೆ.

ಡೆಹ್ರಾಡೂನ್ ನಲ್ಲಿ ಇವರಿಬ್ಬರೂ ಮದುವೆಯಾಗಿ, ಮತಾಂತರಗೊಳ್ಳಲು ಕಾಂತ್ ತಹಶೀಲ್ದಾರ್ ಕಚೇರಿಗೆ ಬಂದಿದ್ದರು. ನಾವು ಬರುವಷ್ಟರಲ್ಲಿ ಅವರು ಅಲ್ಲಿರಲಿಲ್ಲ. ಅವರನ್ನು ಹುಡುಕಿ ಪೊಲೀಸರಿಗೆ ಒಪ್ಪಿಸಿದ್ದೇವೆ ಎಂದು ಬಜರಂಗದಳ ಮುಖಂಡ ರಾಕೇಶ್ ಕುಮಾರ್ ತಿಳಿಸಿದ್ದಾರೆ.

English summary
Fifth case has been registered under unlawful conversion of religion ordinance in Moradabad of uttara pradesh. Moradabad police arrested him while he came to register his marriage with hindu girl
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X