ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದಲ್ಲಿ ಲಾಕ್ ಡೌನ್ ಭೀತಿ; ವಲಸೆ ಕಾರ್ಮಿಕರ ಗುಳೆ

|
Google Oneindia Kannada News

ಲಕ್ನೋ, ಏಪ್ರಿಲ್ 13; ಮಹಾರಾಷ್ಟ್ರ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸೋಮವಾರ ರಾಜ್ಯದಲ್ಲಿ 51,751 ಹೊಸ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆಯಾಗುವ ಸಾಧ್ಯತೆ ಇದೆ.

ಮುಂಬೈ ಸೇರಿದಂತೆ ಮಹಾರಾಷ್ಟ್ರದ ವಿವಿಧ ನಗರದಲ್ಲಿ ಕೆಲಸ ಮಾಡುವ ವಲಸೆ ಕಾರ್ಮಿಕರು ಲಾಕ್ ಡೌನ್ ಘೋಷಣೆ ಬಗ್ಗೆ ಆತಂಕಗೊಂಡಿದ್ದಾರೆ. ಉತ್ತರ ಪ್ರದೇಶಕ್ಕೆ ರೈಲುಗಳಲ್ಲಿ ವಾಪಸ್ ಆಗುತ್ತಿದ್ದಾರೆ.

ಮಹಾರಾಷ್ಟ್ರ, ಪಂಜಾಬ್‌ನಲ್ಲಿ ಕೊರೊನಾ ಸೋಂಕು ಹೆಚ್ಚಳಕ್ಕೆ ಮೋದಿಯನ್ನು ದೂಷಿಸಿದ ರಾವತ್ ಮಹಾರಾಷ್ಟ್ರ, ಪಂಜಾಬ್‌ನಲ್ಲಿ ಕೊರೊನಾ ಸೋಂಕು ಹೆಚ್ಚಳಕ್ಕೆ ಮೋದಿಯನ್ನು ದೂಷಿಸಿದ ರಾವತ್

ಗೋರಖ್‌ಪುರ, ವಾರಣಾಸಿ, ಪ್ರಯಾಗ್‌ ರಾಜ್, ಲಕ್ನೋ ಮುಂತಾದ ನಿಲ್ದಾಣಗಳಿಗೆ ಮಹಾರಾಷ್ಟ್ರದಿಂದ ನೂರಾರು ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ವಾಪಸ್ ಆಗುತ್ತಿದ್ದಾರೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಹಿನ್ನಲೆಯಲ್ಲಿ ಭಾರತೀಯ ರೈಲ್ವೆ ವಿಶೇಷ ರೈಲುಗಳನ್ನು ಓಡಿಸುತ್ತಿದೆ.

ಕೊರೊನಾ ಸೋಂಕು ಹೆಚ್ಚಳ: ಮಹಾರಾಷ್ಟ್ರದಲ್ಲಿ 10,12ನೇ ತರಗತಿ ಪರೀಕ್ಷೆ ಮುಂದೂಡಿಕೆ ಕೊರೊನಾ ಸೋಂಕು ಹೆಚ್ಚಳ: ಮಹಾರಾಷ್ಟ್ರದಲ್ಲಿ 10,12ನೇ ತರಗತಿ ಪರೀಕ್ಷೆ ಮುಂದೂಡಿಕೆ

Fearing A Lockdown In Maharashtra Migrant Labourers Return To Uttar Pradesh

ರೈಲು ನಿಲ್ದಾಣಕ್ಕೆ ಬಂದ ಹಲವಾರು ವಲಸೆ ಕಾರ್ಮಿಕರು ಮಹಾರಾಷ್ಟ್ರದಲ್ಲಿ ಸೋಂಕಿನ ಸಂಖ್ಯೆ ಹೆಚ್ಚಳವಾಗಿದ್ದರಿಂದ ಆತಂಕವಾಗಿದೆ. ಪುನಃ ಲಾಕ್ ಡೌನ್ ಆಗುವ ಸಾಧ್ಯತೆ ಇದೆ ಎಂದು ವಾಪಸ್ ಆಗಿದ್ದೇವೆ ಎಂದು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ 50 ಸಾವಿರದಂಚಿನಲ್ಲಿ ಕೊರೊನಾ ಪ್ರಕರಣ; ಮುಂಬೈ ನಗರದಲ್ಲಿ ಆತಂಕಮಹಾರಾಷ್ಟ್ರದಲ್ಲಿ 50 ಸಾವಿರದಂಚಿನಲ್ಲಿ ಕೊರೊನಾ ಪ್ರಕರಣ; ಮುಂಬೈ ನಗರದಲ್ಲಿ ಆತಂಕ

ಮುಂಬೈ-ಸುಲ್ತಾನ್‌ಪುರ್ ರೈಲಿನಲ್ಲಿ ಕಾರ್ಮಿಕರು ಹೆಚ್ಚಾಗಿ ವಾಪಸ್ ಆಗುತ್ತಿದ್ದಾರೆ. 45 ವಿಶೇಷ ರೈಲುಗಳಲ್ಲಿ ಶೇ 80ರಷ್ಟು ಸೀಟುಗಳು ಭರ್ತಿಯಾಗಿದ್ದವು ಎಂದು ರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ.

ಮುಂಬೈನಲ್ಲಿ ಪರಿಸ್ಥಿತಿ ತೀರಾ ಕೆಟ್ಟದಾಗಿದೆ. ಅಲ್ಲಿ ಕೆಲಸವೂ ಸಿಗುತ್ತಿಲ್ಲ. ನಮ್ಮ ಬಳಿ ಉಳಿದಿರುವ ಸ್ವಲ್ಪ ಹಣದಲ್ಲಿ ನಾವು ಊರಿಗೆ ವಾಪಸ್ ಆಗಿದ್ದೇವೆ ಎಂದು ಕಾರ್ಮಿಕರು ಹೇಳಿದ್ದಾರೆ. ಮುಂಬೈನಲ್ಲಿ ಸರಿಯಾಗಿ ಆರೋಗ್ಯ ಸೇವೆಯೂ ಸಿಕ್ಕಿಲ್ಲ, ಲಸಿಕೆ ಕೂಡಾ ಸಿಗುತ್ತಿಲ್ಲ. ಆದ್ದರಿಂದ, ಸುಲ್ತಾನ್‌ಪುರ್‌ಗೆ ವಾಪಸ್ ಆಗಿದ್ದೇವೆ ಎಂದು ಕಾರ್ಮಿಕರು ತಿಳಿಸಿದ್ದಾರೆ.

ಅಂದಹಾಗೆ ಮುಂಬೈ ನಗರದಲ್ಲಿ ಸೋಮವಾರ 6,905 ಹೊಸ ಪ್ರಕರಣ ದಾಖಲಾಗಿದೆ. ಒಟ್ಟು 43 ಜನರು ಮೃತಪಟ್ಟಿದ್ದಾರೆ. ನಗರದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 5,27,119ಕ್ಕೆ ಏರಿಕೆಯಾಗಿದೆ. ಏಪ್ರಿಲ್ 1ರಂದು 8,646 ಮತ್ತು ಏಪ್ರಿಲ್ 4ರಂದು 11,163 ಹೊಸ ಪ್ರಕರಣ ನಗರದಲ್ಲಿ ದಾಖಲಾಗಿತ್ತು.

English summary
New Covid cases number raised in Maharashtra. Fearing a lockdown in state migrant labourers are return to Uttar Pradesh by trains.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X