• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಗಳ ಶಿರಚ್ಛೇದ ಮಾಡಿ, ರುಂಡದೊಂದಿಗೆ ಪೊಲೀಸರಿಗೆ ಶರಣಾದ ತಂದೆ

|
Google Oneindia Kannada News

ಲಕ್ನೋ, ಮಾರ್ಚ್ 04: ಮಗಳು ಪ್ರೀತಿ ಮಾಡಿದ ಹುಡುಗ ತನಗಿಷ್ಟವಿಲ್ಲವೆಂದು ತಂದೆಯೊಬ್ಬ ಅಪ್ರಾಪ್ತ ಮಗಳ ತಲೆಯನ್ನೇ ಕತ್ತರಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

17 ವರ್ಷದ ಬಾಲಕಿ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು, ಆದರೆ ಪ್ರೀತಿಯಾಗಲೀ, ಆ ಯುವಕನಾಗಲಿ ಹುಡುಗಿಯ ತಂದೆಗೆ ಇಷ್ಟವಿರಲಿಲ್ಲ, ಹೀಗಾಗಿ ಕೋಪಗೊಂಡು ಮಗಳ ತಲೆಯನ್ನೇ ಕತ್ತರಿಸಿದ್ದಾನೆ.

ಮೊಜಾಂಬಿಕ್: ಉಗ್ರರಿಂದ 50 ಗ್ರಾಮಸ್ಥರ ಶಿರಚ್ಛೇದ ಮೊಜಾಂಬಿಕ್: ಉಗ್ರರಿಂದ 50 ಗ್ರಾಮಸ್ಥರ ಶಿರಚ್ಛೇದ

ಬಳಿಕ ರುಂಡದೊಂದಿದೆ ಪೊಲೀಸ್ ಠಾಣೆಗೆ ಬಂದು, ತಾನು ಮಾಡಿದ ತಪ್ಪು ಒಪ್ಪಿಕೊಂಡು ಶರಣಾಗಿದ್ದಾನೆ. ಆರೋಪಿ ತಂದೆ ಸರ್ವೇಶ್ ಕುಮಾರ್ ಪಾಂಡೆತಾರಾ ಗ್ರಾಮದವನಾಗಿದ್ದಾನೆ. ಇದು ಮಾಜ್‌ಹಿಲಾ ಪೊಲೀಸ್ ಠಾಣೆಗೆ ವ್ಯಾಪ್ತಿಗೆ ಒಳಪಡುತ್ತದೆ.

ಬುಧವಾರ ಸುಮಾರು ಸಂಜೆ 3 ಗಂಟೆ ವೇಳೆಗೆ ಮಗಳ ಶಿರಚ್ಛೇದ ಮಾಡಿ, ಮಗಳ ರುಂಡ ಹಿಡಿದು 2 ಕಿ.ಮೀ ನಡೆದು ಬಂದು ಪೊಲೀಸರಿಗೆ ಶರಣಾಗಿದ್ದಾನೆ. ಆತನ ಕೈಲಿದ್ದ ರುಂಡ ನೋಡಿ ಪೊಲೀಸರೇ ಒಮ್ಮೆ ಬೆಚ್ಚಿಬಿದ್ದಿದ್ದಾರೆ.

ಸರ್ವೇಶ್ ತರಕಾರಿ ಮಾರಾಟಗಾರನಾಗಿ ಕೆಲಸ ಮಾಡುತ್ತಿದ್ದಾನೆ, ಮಗಳು ಬೇರೆ ಯುವಕನ ಜತೆಗೆ ಇದ್ದಾಗ ಸಿಕ್ಕಿಬಿದ್ದಿದ್ದಾಳೆ, ಆತ ತನ್ನ ಮಗಳಿಗೆ ಪಾಠ ಕಲಿಸಬೇಕು ಎಂದು ಆಲೋಚನೆ ಮಾಡಿದ್ದ, ಈ ಕುರಿತು ಬಾಲಕಿ ತಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆತನನ್ನು ಬಂಧಿಸಿ ಎಫ್‌ಐಆರ್ ದಾಖಲಿಸಿದ್ದಾರೆ.

ಪ್ರತ್ಯೇಕ ಘಟನೆಯಲ್ಲಿ, ಪತ್ನಿ ಪತಿಯನ್ನು ಕತ್ತು ಸೀಳಿ ಹತ್ಯೆ ಮಾಡಿದ್ದಾರೆ, ಆತನ ಮೃತದೇಹ ಬ್ರಿಜ್ಡ್ ಬಳಿ ದೊರೆತಿತ್ತು. ಆಕೆ ಬೇರೊಬ್ಬನ ಜತೆ ಅನೈತಿಕ ಸಂಬಂಧ ಹೊಂದಿರುವುದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.

ಮಹಾರಾಷ್ಟ್ರದಲ್ಲಿ ನಡೆದ ಘಟನೆ ಇದಾಗಿದೆ. ಬಳಿಕ ಆಕೆಯನ್ನು ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಾಯ್ಬಿಟ್ಟಿದ್ದಳು.

English summary
In a horrifying incident, a man in Hardoi district of Uttar Pradesh allegedly beheaded his minor daughter and then walked to the local police with her severed head to surrender before cops.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X