ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೇಥಿಯಲ್ಲಿ ರಾಹುಲ್ ಗಾಂಧಿ ಸೋಲು? ಚಿಂತಾಮಣಿ-5ಡಾಟ್ಸ್ ಸಮೀಕ್ಷೆ

|
Google Oneindia Kannada News

Recommended Video

ರಾಹುಲ್ ಗಾಂಧಿಯಿಂದ ಕಾಂಗ್ರೆಸ್ ಗೆ ತೀವ್ಯ ಮುಖಭಂಗವಾಗುತ್ತಾ..? | Oneindia Kannada

ಅಮೇಥಿ, ಮೇ 21: ಪ್ರಸಿದ್ಧ ರಾಜಕೀಯ ವಿಶ್ಲೇಷಕರಾದ ಚಿಂತಾಮಣಿ ಅವರು 5ಡಾಟ್ಸ್ ನ್ಯೂಸ್ ಏಜೆನ್ಸಿಯೊಂದಿಗೆ ನಡೆಸಿದ ಲೋಕಸಭೆ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಕೇವಲ ಒಂದೇ ಸ್ಥಾನದಲ್ಲಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆ ಹೇಳಿದೆ.

ಅಂದರೆ ಅಮೇಥಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೋಲುವ ಸೂಚನೆಯನ್ನು I ಸಮೀಕ್ಷೆ ನೀಡಿದೆ.

ಚಿಂತಾಮಣಿ ಸಮೀಕ್ಷೆ : ಸುಮಲತಾಗೆ ಸೋಲು, ಬಿಜೆಪಿಗೆ 22 ಸ್ಥಾನಚಿಂತಾಮಣಿ ಸಮೀಕ್ಷೆ : ಸುಮಲತಾಗೆ ಸೋಲು, ಬಿಜೆಪಿಗೆ 22 ಸ್ಥಾನ

ಉತ್ತರ ಪ್ರದೇಶದ 80 ಕ್ಷೇತ್ರಗಳಲ್ಲಿ ಎನ್ ಡಿಎ 56 ಯುಪಿಎ 1, ಎಸ್ಪಿ-ಬಿಎಸ್ಪಿ 23 ಸ್ಥಾನಗಳಲ್ಲಿ ಜಯಗಳಿಸಲಿವೆ ಎಂದು ಈ ಸಮೀಕ್ಷೆ ಹೇಳಿದೆ.

ಅಂದರೆ ರಾಯ್ಬರೇಲಿಯಲ್ಲಿ ಸೋನಿಯಾ ಗಾಂಧಿ ಅವರು ಸೋಲುವ ಸಾಧ್ಯತೆ ತೀರಾ ಕಡಿಮೆ ಇರುವ ಕಾರಣ, ರಾಹುಲ್ ಗಾಂಧಿ ಆವರು ಸೋಲಬಹುದು ಎಂದು ಈ ಸಮೀಕ್ಷೆ ಅಂದಾಜಿಸಿದಂತಿದೆ. ಸೋಲುವ ಭೀತಿಯಿಂದಲೇ ರಾಹುಲ್ ಗಾಂಧಿ ಅವರು ಕೇರಳದ ವಯನಾಡಿನಿಂದಲೂ ಸ್ಪರ್ಧಿಸಿದ್ದರು ಎನ್ನಲಾಗಿತ್ತು.

ಚಿಂತಾಮಣಿ-5 ಡಾಟ್ಸ್ ಸಮೀಕ್ಷೆ: ಎನ್ ಡಿಎ ಗೆ 347ಚಿಂತಾಮಣಿ-5 ಡಾಟ್ಸ್ ಸಮೀಕ್ಷೆ: ಎನ್ ಡಿಎ ಗೆ 347

ಚುನಾವಣಾ ಪೂರ್ವ ಸಮೀಕ್ಷೆಯಯಲ್ಲಿ ಎನ್ ಡಿಎ 335 ಸ್ಥಾನಗಳಲ್ಲಿ ಗೆಲ್ಲಲಿದ್ದು, ಬಿಜೆಪಿ 271 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ಅದು ಹೇಳಿತ್ತು. ಆದರೆ ಚುನಾವಣೋತ್ತರ ಸಮೀಕ್ಷೆಯಲ್ಲಿ ಎನ್ ಡಿಎ 347 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದು, ಯುಪಿಎ ಕೇವಲ 89 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದಿದೆ.

ಸೋಲುವ ಸಾಧ್ಯತೆ ಹೆಚ್ಚು!

ಸೋಲುವ ಸಾಧ್ಯತೆ ಹೆಚ್ಚು!

ಚಿಂತಾಮಣಿ 5ಡಾಟ್ಸ್ ಸಮೀಕ್ಷೆಯ ಪ್ರಕಾರ ರಾಹುಲ್ ಗಾಂಧಿ ಸೋಲುವ ಸಾಧ್ಯತೆಯೇ ಹೆಚ್ಚು. 2014 ರ ಲೋಕಸಭಾ ಚುನಾವಣೆಯಲ್ಲಿ ಸ್ಮೃತಿ ಇರಾನಿ ಅವರು ಕೇವಲ ಒಂದು ಲಕ್ಷ ಮತಗಳ ಅಂತರದಿಂದ ರಾಹುಲ್ ಗಾಂಧಿ ಅವರ ವಿರುದ್ಧ ಸೋತಿದ್ದರು. 2009 ರಲ್ಲಿ 3.7 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ರಾಹುಲ್ ಗಾಂಧಿ, ಒಂದು ಲಕ್ಷ ಮತಗಳ ಅಂತರವನ್ನು ಕಡೆಗಣಿಸುವಂತಿಲ್ಲ. ಅದೂ ಅಲ್ಲದೆ ಈ ಬಾರಿ ರಾಹುಲ್ ಗಾಂಧಿ ಅಮೇಥಿಯಲ್ಲಿ ಹೆಚ್ಚು ಪ್ರಚಾರವನ್ನೂ ನಡೆಸಿಲ್ಲ.

ಜನರ ವಿಶ್ವಾಸ ಸಾಧಿಸಿರುವ ಸ್ಮೃತಿ

ಜನರ ವಿಶ್ವಾಸ ಸಾಧಿಸಿರುವ ಸ್ಮೃತಿ

ಅಮೇಥಿಯ ಜನರು ಸ್ಮೃತಿ ಇರಾನಿ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿದ್ದಾರೆ. ಅದಕ್ಕೆ ಮುಖ್ಯ ಕಾರಣ, 2014 ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಸೋತರೂ, ಸ್ಮೃತಿ ಇರಾನಿ ಅವರು ನಿಯಮಿತವಾಗಿ ಈ ಕ್ಷೇತ್ರಗಕ್ಕೆ ತೆರಳಿ, ಸಾಕಷ್ಟು ಕೆಲಸ ಮಾಡಿದ್ದಾರೆ. ಇಲ್ಲಿನ ಜನರ ಬಾಯಲ್ಲಿ ಸ್ಮೃತಿ ದೀದಿ ಆಗಿದ್ದಾರೆ.

ಎಕ್ಸಿಟ್ ಪೋಲ್ : ಉತ್ತರಪ್ರದೇಶದಲ್ಲಿ ನಿರೀಕ್ಷೆಗೂ ಮೀರಿದ ಬಿಜೆಪಿ ಸಾಧನೆಎಕ್ಸಿಟ್ ಪೋಲ್ : ಉತ್ತರಪ್ರದೇಶದಲ್ಲಿ ನಿರೀಕ್ಷೆಗೂ ಮೀರಿದ ಬಿಜೆಪಿ ಸಾಧನೆ

ಎರಡು ಬಾರಿ ಸೋತಿದ್ದ ಕಾಂಗ್ರೆಸ್

ಎರಡು ಬಾರಿ ಸೋತಿದ್ದ ಕಾಂಗ್ರೆಸ್

ಅಮೇಥಿ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋತಿದ್ದು ಎರಡೇ ಬಾರಿ. 1977 ರಲ್ಲಿ ಜನತಾ ಪಕ್ಷದ ಅಲೆ ಎದ್ದಿದ್ದ ಸಮಯದಲ್ಲಿ ಮತ್ತು 1998 ರಲ್ಲಿ ಮಾತ್ರವೇ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಸೋತಿತ್ತು. ಸಂಜಯ್ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಈ ಕ್ಷೇತ್ರದಿಂದ ನಿರಂತರವಾಗಿ ಗೆಲ್ಲುತ್ತ ಬಂದಿದ್ದಾರೆ. ಆದರೆ ಈ ಬಾರ ಸ್ಮೃತಿ ಇರಾನಿ ಅವರು ಈ ದಾಖಲೆಯನ್ನು ಮುರಿಯುತ್ತಾರೆಯೇ ಎಂಬುದನ್ನು ಕಾದು ನೋಡಬೇಕು!

ಪ್ರಮುಖ ರಾಜ್ಯಗಳಲ್ಲಿ...

ಪ್ರಮುಖ ರಾಜ್ಯಗಳಲ್ಲಿ...

ಚಿಂತಾಮಣಿ ಪ್ರಕಾರ ಉತ್ತರ ಪ್ರದೇಶದೊಂದಿಗೆ ಮತ್ತಿತರ ಪ್ರಮುಖ ರಾಜ್ಯಗಳಲ್ಲಿ ಪಕ್ಷಗಳು ಪಡೆಯಹುದಾದ ಸೀಟುಗಳ ಸಂಖ್ಯೆ ಇಲ್ಲಿದೆ.
ಪಶ್ಚಿಮಬಂಗಾಳ- ಬಿಜೆಪಿ- 16, ಕಾಂಗ್ರೆಸ್ 3, ಟಿಎಂಸಿ: 23, ಸಿಪಿಎಂ: 0 ರಾಜಸ್ಥಾನ: ಬಿಜೆಪಿ: 25, ಕಾಂಗ್ರೆಸ್: 0 ಬಿಹಾರ: ಎನ್ ಡಿಎ: 32, ಯುಪಿಎ: 8
ಮಹಾರಾಷ್ಟ್ರ: ಬಿಜೆಪಿ: 40, ಕಾಂಗ್ರೆಸ್: 8,
ಮಧ್ಯಪ್ರದೇಶ: ಬಿಜೆಪಿ: 25, ಕಾಂಗ್ರೆಸ್: 4
ಗುಜರಾತ್: ಬಿಜೆಪಿ: 26, ಕಾಂಗ್ರೆಸ್: 0

English summary
Lok Sabha exit poll 2019: Chintamani 5dots predicts Congress will win only one seat in Uttar Pradesh. That means Rahul Gandhi may lose his battle to Smriti Irani in Amethi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X