ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ನಾಯಕ ಅತ್ಯಾಚಾರ ಮಾಡಿದ್ದಕ್ಕೆ "ಸ್ಫೋಟಕ ವಿಡಿಯೋ ಸಾಕ್ಷ್ಯ"

|
Google Oneindia Kannada News

ಲಖನೌ, ಸೆಪ್ಟೆಂಬರ್ 11: ಬಿಜೆಪಿ ನಾಯಕ ಚಿನ್ಮಯಾನಂದ್ ವಿರುದ್ಧ ಆರೋಪ ಮಾಡಿದ್ದ ಮಹಿಳೆ ಬಳಿ 'ಸ್ಫೋಟಕವಾದ ವಿಡಿಯೋ ಸಾಕ್ಷ್ಯ' ಇರುವುದಾಗಿ ತಿಳಿದುಬಂದಿದೆ. ಅದನ್ನು ತನ್ನ ಸ್ನೇಹಿತರ ಮೂಲಕ ಪೊಲೀಸರಿಗೆ ಹಸ್ತಾಂತರ ಮಾಡಿದ್ದಾರೆ. ಆ ಸ್ನೇಹಿತರು ಪೆನ್ ಡ್ರೈವ್ ಅನ್ನು ಸುಪ್ರೀಂ ಕೋರ್ಟ್ ನೇಮಕ ಮಾಡಿರುವ ವಿಶೇಷ ತನಿಖಾ ತಂಡಕ್ಕೆ ನೀಡಿದ್ದಾರೆ.

ಆ ವಿಶೇಷ ತಂಡವು ಮಹಿಳೆಯನ್ನು ಹದಿನೈದು ಗಂಟೆಗೂ ಹೆಚ್ಚು ಕಾಲ ಪ್ರಶ್ನೆಗಳನ್ನು ಕೇಳಿದೆ ಎಂದು ವರದಿ ಆಗಿದೆ. ಕೇಂದ್ರದ ಮಾಜಿ ಸಚಿವ ಚಿನ್ಮಯಾನಂದ್ ತನ್ನ ಮೇಲೆ ಒಂದು ವರ್ಷ ಅತ್ಯಾಚಾರ ನಡೆಸಿದ್ದಾರೆ ಎಂದು ಆಕೆ ಆರೋಪಿಸಿದ್ದರು. ಆಕೆಯ ಕನ್ನಡಕದಲ್ಲಿ ಇದ್ದ ಕ್ಯಾಮೆರಾ ಮೂಲಕ ದೃಶ್ಯವನ್ನು ಮಹಿಳೆ ಸೆರೆ ಹಿಡಿದಿದ್ದಾರೆ ಎನ್ನಲಾಗುತ್ತಿದೆ.

ಬಿಜೆಪಿ ನಾಯಕನಿಂದ ಒಂದು ವರ್ಷ ಅತ್ಯಾಚಾರ: ವಿದ್ಯಾರ್ಥಿನಿ ಆರೋಪಬಿಜೆಪಿ ನಾಯಕನಿಂದ ಒಂದು ವರ್ಷ ಅತ್ಯಾಚಾರ: ವಿದ್ಯಾರ್ಥಿನಿ ಆರೋಪ

ಇಪ್ಪತ್ಮೂರು ವರ್ಷದ ಮಹಿಳೆ ಆರೋಪಿಸುವ ಪ್ರಕಾರ, ವರ್ಷ ಕಾಲ ಆಕೆಯ ಮೇಲೆ ಚಿನ್ಮಯಾನಂದ್ ಅತ್ಯಾಚಾರ ಎಸಗಿ, ವಿಡಿಯೋ ಬಳಸಿ ಬೆದರಿಕೆ ಒಡ್ಡಿದ್ದಾರೆ.

Evidence In Pen Drive Against BJP Leader, Alleged By Woman

ಕಳೆದ ವರ್ಷ ಚಿನ್ಮಯಾನಂದ್ ಒಡೆತನದ ಕಾನೂನು ಕಾಲೇಜು ಪ್ರವೇಶಕ್ಕಾಗಿ ಮಹಿಳೆ ಹೋಗಿದ್ದರು. ಆಕೆಯನ್ನು ಕಾಲೇಜಿಗೆ ಸೇರಿಸಿಕೊಂಡ ಮೇಲೆ ಲೈಬ್ರರಿಯಲ್ಲಿ ಉದ್ಯೋಗವನ್ನು ನೀಡಿದ ಚಿನ್ಮಯಾನಂದ್, ಹಾಸ್ಟೆಲ್ ಸೇರುವಂತೆ ಸಲಹೆ ನೀಡಿದ್ದಾರೆ. ಆಕೆ ಸೇರಿದ ನಂತರ, ಆಕೆಯನ್ನು ಕರೆದು, ಮಹಿಳೆ ಸ್ನಾನ ಮಾಡುತ್ತಿದ್ದ ವಿಡಿಯೋವನ್ನು ಚಿನ್ಮಯಾನಂದ್ ತೋರಿಸಿದ್ದಾರೆ ಎಂದು ದೂರಿನಲ್ಲಿ ಆಕೆ ಆರೋಪಿಸಿದ್ದಾರೆ.

ಆ ವಿಡಿಯೋ ಮುಂದೆ ಮಾಡಿ ಬಿಜೆಪಿ ನಾಯಕ ಅತ್ಯಾಚಾರ ಎಸಗಿದ. ಆ ದೌರ್ಜನ್ಯದ ಚಿತ್ರೀಕರಣ ಕೂಡ ಮಾಡಿಕೊಂಡು, ಬ್ಲ್ಯಾಕ್ ಮೇಲ್ ಮಾಡಿದ. ಆದರೆ ಈ ವರ್ಷದ ಆರಂಭದಲ್ಲಿ ನಾನೇ ಚಿತ್ರೀಕರಣ ಮಾಡಬೇಕು ಎಂದು ತೀರ್ಮಾನಿಸಿ ನನ್ನ ಕನ್ನಡಕದಲ್ಲಿ ಕ್ಯಾಮೆರಾ ಅಳವಡಿಸಿದೆ ಎಂದು ಆ ಮಹಿಳೆ ಹೇಳಿದ್ದಾರೆ.

ಕಳೆದ ವಾರ ಮಹಿಳೆಯು ಚಿನ್ಮಯಾನಂದ್ ವಿರುದ್ಧ ದೂರು ನೀಡಿದ್ದಾರೆ. ಆದರೆ ಈ ಬಗ್ಗೆ ಈವರೆಗೆ ಆತನನ್ನು ಪೊಲೀಸರು ಪ್ರಶ್ನೆ ಮಾಡಿಲ್ಲ ಅಥವಾ ದೂರು ದಾಖಲಿಸಿಲ್ಲ. ಮಂಗಳವಾರದಂದು ವಿಶೇಷ ತನಿಖಾ ತಂಡವು ಮಹಿಳೆಯ ಹಾಸ್ಟೆಲ್ ರೂಮಿಗೆ ತೆರಳಿ, ಸಾಕ್ಷ್ಯಾಧಾರ ಸಂಗ್ರಹಕ್ಕೆ ಪ್ರಯತ್ನಿಸಿವೆ.

English summary
Evidence in pen drive against BJP leader Chinmayanand in rape allegation handed over to SIT by victim.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X