ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

12 ತಾಸು ದುಡಿದ ಬಳಿಕ ಪೊಲೀಸ್ ಕ್ಯಾಂಟೀನ್‌ನ ಕಳಪೆ ಆಹಾರ ಕಂಡು ಗಳಗಳನೆ ಅತ್ತ ಕಾನ್‌ಸ್ಟೆಬಲ್

|
Google Oneindia Kannada News

ಲಕ್ನೋ ಆಗಸ್ಟ್ 11: ಸುಮ್ಮನೇ ಹೀಗೊಂದು ಬಾರಿ ಯೋಚಿಸಿ. ನಮ್ಮ ಮನೆಯಲ್ಲಿ ನಾವು ಶ್ರಮ ವಹಿಸಿ ಕೆಲಸ ಮಾಡುತ್ತೇವೆ. ಊಟದ ಸಮಯ ಕೂಡ ಮರೆತು ಕೆಲಸದಲ್ಲಿ ಮಗ್ನನಾಗಿರುತ್ತೇವೆ ಅಂದುಕೊಳ್ಳಿ. ಕೆಲಸ ಮುಗಿಸಿ ಹೊಟ್ಟೆ ತುಂಬಾ ಊಟ ಮಾಡೋಣ ಅಂದುಕೊಂಡು ತಟ್ಟೆ ಮುಂದೆ ಕುಳಿತಾಗ ಊಟ ರುಚಿಯಾಗಿರುವುದು ಒಂದು ಕಡೆ ಇರಲಿ ಅದು ತಿನ್ನಲು ಯೋಗ್ಯವಾಗೇ ಇಲ್ಲ ಅಂದರೆ ನಿಮಗೆ ಹೇಗೆ ಅನಿಸಬೇಡ. ಆಕಾಶ ಭೂಮಿ ಒಂದೇ ಮಾಡುವಷ್ಟು ಕೋಪ ಬರುವುದರಲ್ಲಿ ಅನುಮಾನವೇ ಇಲ್ಲ. ಆದರೆ ಇಂತಹ ಪರಿಸ್ಥಿತಿಯಲ್ಲಿ ಈ ಕಾನ್‌ಸ್ಟೆಬಲ್ ಗೆ ಬಂದಿದ್ದು ಕೋಪವಲ್ಲ ಬದಲಿಗೆ ದುಃಖ. ಮನತುಂಬಿ ಅಳುವಷ್ಟು ದುಃಖ. ಹಸಿದ ಕಾನ್‌ಸ್ಟೆಬಲ್ ಕಣ್ಣೀರು ಹಾಕುತ್ತ ಕೈಯಲ್ಲಿ ತಟ್ಟೆ ಹಿಡಿದು ಅವ್ಯವಸ್ಥೆಯ ಆಹಾಯದ ಬಗ್ಗೆ ವಿವರಿಸುತ್ತಿರುವುದು ನಿಜಕ್ಕೂ ಕರಳು ಹಿಂಡುವ ದೃಶ್ಯ.

ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯಲ್ಲಿ ಪೊಲೀಸ್ ಪೇದೆಯೊಬ್ಬರು ಪೊಲೀಸ್ ಮೆಸ್‌ನಲ್ಲಿ ನೀಡಲಾದ ಆಹಾರದ ಗುಣಮಟ್ಟದ ಬಗ್ಗೆ ರಸ್ತೆಯ ಮೇಲೆ ನಿಂತು ಅಳುತ್ತಾ ವಿವರಿಸಿ ಅಪಾರ ಜನಸ್ತೋಮವನ್ನು ಸೆಳೆದಿದ್ದಾರೆ. 12 ಗಂಟೆಗಳ ಕರ್ತವ್ಯದ ನಂತರ ಹಸಿದ ಕಾನ್‌ಸ್ಟೆಬಲ್ ಅವ್ಯವಸ್ಥೆಯ ಆಹಾರವನ್ನು ನೋಡಿ ಕಣ್ಣೀರಾಕಿದ ಮನಕರಗುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಯುಪಿ ಫಿರೋಜಾಬಾದ್‌ನ ಕಾನ್‌ಸ್ಟೆಬಲ್ ಮನೋಜ್ ಕುಮಾರ್ ಪೊಲೀಸರ ಸ್ಥಿತಿಯನ್ನು ಪ್ರಸ್ತುತಪಡಿಸಿದ್ದಾರೆ.

ಲಕ್ನೋ: ಶಾಲೆಗಳ ಹೊರಗೆ ಫಾಸ್ಟ್ ಫುಡ್‌ ಮಾರಾಟಕ್ಕೆ ಬ್ರೇಕ್ಲಕ್ನೋ: ಶಾಲೆಗಳ ಹೊರಗೆ ಫಾಸ್ಟ್ ಫುಡ್‌ ಮಾರಾಟಕ್ಕೆ ಬ್ರೇಕ್

ಹಸಿದ ಕಾನ್‌ಸ್ಟೆಬಲ್ ಕಳಪೆ ಆಹಾರವನ್ನು ನೋಡಿ ಅಳಲು ಪ್ರಾರಂಭಿಸಿದ್ದಾರೆ. ಇಂತಹ ಆಹಾರವನ್ನು ಪ್ರಾಣಿಗಳು ತಿನ್ನುವುದಿಲ್ಲ. ನಾವು ತಿಂದು ತೇಗುತ್ತಿದ್ದೇವೆ ಎಂದು ಕ್ಯಾಮರಾ ಮುಂದೆ ಗಳಗಳನೇ ಅತ್ತಿದ್ದಾರೆ. ತಮ್ಮ ದುಃಖವನ್ನು ವ್ಯಕ್ತಪಡಿಸಿದ ಕಾನ್‌ಸ್ಟೆಬಲ್ ಮನೋಜ್ ಕುಮಾರ್ ಅವರಿಗೆ ನಾಯಿಗಳಿಗಿಂತ ಕೆಟ್ಟದಾಗಿ ಹೇಗೆ ಆಹಾರವನ್ನು ನೀಡಲಾಗುತ್ತಿದೆ ಎಂದು ವಿವರಿಸಿದ್ದಾರೆ. ವಿಡಿಯೋದಲ್ಲಿ ಮನೋಜ್‌ ಕುಮಾರ್ ಡಿಜಿಪಿ, ಆರ್‌ಐ ಸೇರಿದಂತೆ ಉನ್ನತ ಅಧಿಕಾರಿಗಳು ತಮ್ಮ ಮಾತನ್ನು ಕೇಳುತ್ತಿಲ್ಲ ಮತ್ತು ಬೆದರಿಕೆ ಹಾಕುತ್ತಿದ್ದಾರೆ ಎಂದು ಕಾನ್‌ಸ್ಟೆಬಲ್ ಹೇಳಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೋರುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಪೊಲೀಸನ ಕಷ್ಟ ಕೇಳಿ ರಾಜ್ಯದ ಅಧಿಕಾರಿಗಳು ಬೆಚ್ಚಿ ಬಿದ್ದಿದ್ದಾರೆ.

ಕ್ರಮಕೈಗೊಳ್ಳುವಂತೆ ಪೊಲೀಸ್ ಮನವಿ

ಕ್ರಮಕೈಗೊಳ್ಳುವಂತೆ ಪೊಲೀಸ್ ಮನವಿ

ಕಾನ್‌ಸ್ಟೆಬಲ್ ಮನೋಜ್ ಕುಮಾರ್ ಅಲಿಗಢ ನಿವಾಸಿಯಾಗಿದ್ದು, ಫಿರೋಜಾಬಾದ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಲ್ಲಿನ ಆಹಾರದ ಗುಣಮಟ್ಟ ತುಂಬಾ ಕಳಪೆಯಾಗಿದೆ. ಅದಕ್ಕಾಗಿಯೇ ನಾನು ನಿಮ್ಮ ನಡುವೆ ಊಟದ ತಟ್ಟೆಯೊಂದಿಗೆ ಬಂದಿದ್ದೇನೆ. ಪೋಲೀಸರಿಗೆ ಪೌಷ್ಠಿಕ ಆಹಾರ ನೀಡಲು ಮುಖ್ಯಮಂತ್ರಿಗಳು ಭತ್ಯೆ ಹೆಚ್ಚಿಸಿದ್ದರು. ಆದರೆ ನಮಗೆ ಊಟದಲ್ಲಿ ನೀರುಣಿಸಿದ ಬೇಳೆಕಾಳುಗಳು ಸಿಗುತ್ತಿವೆ. ಅದರಲ್ಲಿ ಏನೂ ಇರುವುದಿಲ್ಲ. ಈ ರೊಟ್ಟಿಗಳನ್ನು ಯಾರಾದರೂ ತಿನ್ನಬಹುದೇ? ಇಲ್ಲಿ ನಮಗೆ ಕೇಳುವವರು ಯಾರೂ ಇಲ್ಲ. ನಾವು ದೂರು ನೀಡಿದರೆ, ಮೆಸ್‌ನ ವ್ಯವಸ್ಥಾಪಕರು ನನ್ನನ್ನು ಕೆಲಸದಿಂದ ತೆಗೆದುಹಾಕುವುದಾಗಿ ಬೆದರಿಕೆ ಹಾಕುತ್ತಾರೆ ಎಂದು ಕಣ್ಣೀರು ಹಾಕಿದ್ದಾರೆ ಮನೋಜ್.

ಕಣ್ಣೀರು ಹಾಕಿದ ಯೋಧ

ಕಣ್ಣೀರು ಹಾಕಿದ ಯೋಧ

ಇಲ್ಲಿನ ಕಾನ್ಸ್‌ಟೇಬಲ್ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಮನೋಜ್ ಅಳಲು ತೋಡಿಕೊಂಡರು. ನಮ್ಮನ್ನು ಕೇಳುವವರೇ ಇಲ್ಲ, 'ಕ್ಯಾಪ್ಟನ್ ಸಾಹೇಬರು ಅವರಿಗೆ ಕೇಳಿದ್ದರೆ, ನಾನು ಇಲ್ಲಿಗೆ ಬರುವ ಅಗತ್ಯವೇ ಇರಲಿಲ್ಲ. ಕ್ಯಾಪ್ಟನ್ ಸಾಹೇಬರಿಗೆ ಜೈಹಿಂದ್ ಹೇಳಿದ ಮೇಲೆ ನಾವು ಇದರಲ್ಲಿ 5 ರೊಟ್ಟಿ ತಿನ್ನಬೇಕು. 12 ಗಂಟೆ ಡ್ಯೂಟಿ ಮುಗಿಸಿ ಪೊಲೀಸರು ಈ ರೊಟ್ಟಿಗಳನ್ನು ತಿನ್ನಬೇಕು. ಈ ಊಟವನ್ನು ಇಲ್ಲಿರುವ ನಾಯಿಗಳಿಗೆ ಹಾಕಿ, ನಿಮ್ಮ ಮಕ್ಕಳು ಈ ರೊಟ್ಟಿಗಳನ್ನು ತಿನ್ನಬಹುದೇ' ಎಂದು ನಾನು ಕೇಳಲು ಬಯಸುತ್ತೇನೆ ಎಂದು ಸೈನಿಕ ಕಣ್ಣೀರು ಹಾಕಿದ್ದಾರೆ.

'ಬೆಳಿಗ್ಗೆಯಿಂದ ಹಸಿದಿದ್ದೇನೆ ನಾನು'

'ಬೆಳಿಗ್ಗೆಯಿಂದ ಹಸಿದಿದ್ದೇನೆ ನಾನು'

ಉತ್ತರ ಪ್ರದೇಶ ಮತ್ತು ಭಾರತದಲ್ಲಿ ಮಾನವೀಯತೆ ಜೀವಂತವಾಗಿದ್ದರೆ, ಉತ್ತರ ಪ್ರದೇಶ ಪೊಲೀಸರಿಗೆ ಈ ಸ್ಥಿತಿ ಏಕೆ ಎಂದು ನಾನು ನಿಮ್ಮನ್ನು ಕೇಳಲು ಬಯಸುತ್ತೇನೆ ಎಂದು ಕಾನ್‌ಸ್ಟೆಬಲ್ ಹೇಳಿದರು. ನಾನು ಬೆಳಿಗ್ಗೆಯಿಂದ ಹಸಿದಿದ್ದೇನೆ, ಯಾರೂ ಕೇಳುತ್ತಿಲ್ಲ, ಯಾರಿಗೆ ಹೇಳಬೇಕು? ಇಲ್ಲಿ ನನ್ನ ಹೆತ್ತವರು ಇಲ್ಲ. ಹೀಗಿದ್ದರೂ ನನಗೆ ಬೆದರಿಕೆ ಹಾಕುತ್ತಿದ್ದಾರೆ. ಸಾರ್ವಜನಿಕವಾಗಿ ಹೋದರೆ ನಿಮ್ಮನ್ನು ಕೆಲಸದಿಂದ ತೆಗೆದು ಬಿಡುತ್ತೇವೆ ಎಂದು ಆರ್ ಐ, ಮೆಸ್ ಮ್ಯಾನೇಜರ್ ಬೆದರಿಕೆ ಹಾಕುತ್ತಿದ್ದಾರೆ. ಡಿಜಿಪಿಯ ಪಿಎಸ್‌ಗೆ ಕರೆ ಮಾಡಿದರೆ, ಫೋನ್ ಸಂಪರ್ಕ ಕಡಿತಗೊಳಿಸಿ, ಇಲ್ಲದಿದ್ದರೆ ನನ್ನನ್ನು ವಜಾ ಮಾಡಲಾಗುವುದು ಎಂದು ಹೇಳುತ್ತಾರೆ. ನನ್ನ ಅಧಿಕಾರಿಗಳು ಕೇಳಲು ಸಿದ್ಧರಿಲ್ಲದಿದ್ದರೆ ನನ್ನ ಸಮಸ್ಯೆಯನ್ನು ಯಾರ ಬಳಿ ಹೇಳಲಿ. ಪ್ರತಿದಿನವೂ ಸೈನಿಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದನ್ನು ನೋಡುತ್ತಿದ್ದೀರಿ. ಈ ಜನ ಅವರನ್ನು ಹತ್ತಿಕ್ಕುತ್ತಲೇ ಇದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

ಮನೋಜ್ ನನ್ನು ಬಲವಂತವಾಗಿ ಜೀಪ್‌ನಲ್ಲಿ ಕರೆದೊಯ್ದ ಪೊಲೀಸರು

ಮನೋಜ್ ನನ್ನು ಬಲವಂತವಾಗಿ ಜೀಪ್‌ನಲ್ಲಿ ಕರೆದೊಯ್ದ ಪೊಲೀಸರು

ಈ ವಿಡಿಯೊ ಕಾಣಿಸಿಕೊಂಡ ನಂತರ, ಸಿವಿಲ್ ಲೈನ್ಸ್ ಔಟ್‌ಪೋಸ್ಟ್‌ನ ಕಾನ್‌ಸ್ಟೆಬಲ್‌ಗಳು ಪೊಲೀಸ್ ಜೀಪ್‌ನಲ್ಲಿ ಕಾನ್‌ಸ್ಟೆಬಲ್ ಅನ್ನು ಬಲವಂತವಾಗಿ ಕರೆದೊಯ್ದರು. ಆಹಾರದ ಗುಣಮಟ್ಟವನ್ನು ಪರಿಶೀಲಿಸುವಂತೆ ಫಿರೋಜಾಬಾದ್ ಪೊಲೀಸರು ಸಿಒ ಸಿಟಿಗೆ ಆದೇಶಿಸಿದ್ದಾರೆ. ಇದಾದ ನಂತರ ಫಿರೋಜಾಬಾದ್ ಪೊಲೀಸರ ಪರವಾಗಿ ಮನೋಜ್ ಕುಮಾರ್ ವಿರುದ್ಧ ಅಶಿಸ್ತು, ಗೈರು ಹಾಜರಿ ಮತ್ತು ನಿರ್ಲಕ್ಷ್ಯ ಸೇರಿದಂತೆ ಎಲ್ಲಾ ದೂರುಗಳನ್ನು ದಾಖಲಿಸಲಾಗಿದೆ. ಫಿರೋಜಾಬಾದ್ ಪೊಲೀಸರ ಪರವಾಗಿ ಟ್ವೀಟ್ ಮಾಡುವ ಮೂಲಕ ಇದನ್ನು ಬರೆಯಲಾಗಿದೆ, ಸಿಒ ಸಿಟಿ ಅವ್ಯವಸ್ಥೆಯ ಆಹಾರದ ಗುಣಮಟ್ಟಕ್ಕೆ ಸಂಬಂಧಿಸಿದ ದೂರಿನ ಟ್ವೀಟ್‌ನಲ್ಲಿ ಆಹಾರದ ಗುಣಮಟ್ಟದ ಬಗ್ಗೆ ತನಿಖೆ ನಡೆಸುತ್ತಿದೆ. ಕಳೆದ ವರ್ಷಗಳಲ್ಲಿ ಸದರಿ ದೂರುದಾರ ಕಾನ್ಸ್‌ಟೇಬಲ್‌ಗೆ ಅಭ್ಯಾಸದ ಅಶಿಸ್ತು, ಗೈರು ಹಾಜರಿ ಮತ್ತು ನಿರ್ಲಕ್ಷ್ಯಕ್ಕೆ ಸಂಬಂಧಿಸಿದ 15 ಶಿಕ್ಷೆಗಳನ್ನು ನೀಡಲಾಗಿದೆ ಎಂಬುದು ಗಮನಾರ್ಹ.

Recommended Video

Hubballi ಯ Engineering collegeನ ಕಿರಾತಕರು ಮಾಡಿದ್ದೇನು ಗೊತ್ತಾ...? | OneIndia Kannada

English summary
A police constable in Firozabad district of Uttar Pradesh on Wednesday drew a huge crowd as he stood on the road and wept bitterly over the quality of food served in the police mess.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X