• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎಲ್ಲರೂ ಲಸಿಕೆ ಪಡೆದುಕೊಳ್ಳಿ, ಲಸಿಕೆ ಹೆಸರಲ್ಲಿ ರಾಜಕೀಯ ಬೇಡ: ಮಾಯಾವತಿ

|
Google Oneindia Kannada News

ಲಕ್ನೋ, ಜೂನ್ 22: ಪ್ರತಿಯೊಬ್ಬರೂ ಕೊರೊನಾ ಲಸಿಕೆ ಪಡೆದುಕೊಳ್ಳಿ, ಲಸಿಕೆ ಹೆಸರಲ್ಲಿ ರಾಜಕೀಯ ಬೇಡ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.

ದೇಶದ ಎಲ್ಲಾ ನಾಗರಿಕರಿಗೂ ಲಸಿಕೆ ಲಭ್ಯವಾಗಬೇಕು, ಇದಕ್ಕಾಗಿ ಲಸಿಕೆ ಹೆಸರಿನಲ್ಲಿ ನಡೆಯುತ್ತಿರುವ ರಾಜಕೀಯ ಅಂತ್ಯವಾಗಬೇಕು ಎಂದಿದ್ದಾರೆ. ಲಸಿಕೆ ಜತೆಗೆ ವಿಜ್ಞಾನಿಗಳು ಮತ್ತು ತಜ್ಞರಿಗೆ ಸರಿಯಾದ ಸಹಕಾರ, ಬೆಂಬಲ ನೀಡುವುದು ಅವಶ್ಯಕ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆರೋಗ್ಯ ಸೌಲಭ್ಯವನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಈ ಮೊದಲೇ ಲಸಿಕೆ ವಿಷಯದಲ್ಲಿ ಸಾಕಷ್ಟು ರಾಜಕೀಯ, ವಿವಾದಗಳು ನಡೆದಿವೆ, ಇದರಿಂದ ಜನರು ಸಾಕಷ್ಟು ನೋವು ಅನುಭವಿಸಿದ್ದಾರೆ. ದೇಶದ ಎಲ್ಲಾ ನಾಗರಿಕರು ಲಸಿಕೆಯಲಾಭ ಪಡೆಯಬೇಕು, ಇದಕ್ಕಾಗಿ ಲಸಿಕೆ ಹೆಸರಿನಲ್ಲಿ ನಡೆಯುತ್ತಿರುವ ರಾಜಕೀಯ ಅಂತ್ಯವಾಗಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಕೊರೊನಾ ಸೋಂಕು ಎನ್ನುವುದು ಜನರಲ್ಲಿ ವಿಭಿನ್ನವಾದ ಸಮಸ್ಯೆ ತಲೆದೋರಿದೆ, ಈಗಾಗಲೇ ಕೊರೊನಾ ಲಸಿಕೆ ಉತ್ಪಾದನೆ ಹಾಗೂ ವಿತರಣೆ ಕುರಿತು ಜನರಲ್ಲಿ ಗೊಂದಲ ಮೂಡಿದೆ.

ಕೊರೊನಾ ಲಸಿಕೆ ಪಡೆದು ಎಲ್ಲಾ ಸಂಶೋಧಕರು ವಿಜ್ಞಾನಿಗಳಿಗೆ ಬೆಂಬಲ ಸೂಚಿಸುವ ಅಗತ್ಯವಿದೆ ಎಂದು ಮಾಯಾವತಿ ಹೇಳಿದ್ದಾರೆ. ಎಲ್ಲಾ ರಾಜ್ಯಗಳಲ್ಲಿ ಮೂಲಭೂತ ಆರೋಗ್ಯ ಸೌಕರ್ಯಗಳನ್ನು ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

English summary
It is important to bring politics to an end vis-a-vis the vaccination process in order to ensure that people across the country gain from it, BSP Supremo Mayawati said on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X