ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದೇನಿದು ಕಚೇರಿಯ ಒಳಗೂ ಹೆಲ್ಮೆಟ್ ಕಡ್ಡಾಯವೇ?

|
Google Oneindia Kannada News

ಲಕ್ನೋ, ನವೆಂಬರ್ 6: ಇದೇನಿದು ಕಚೇರಿ ಒಳಗೂ ಹೆಲ್ಮೆಟ್ ಕಡ್ಡಾಯವೇ ಎನ್ನುವ ಪ್ರಶ್ನೆ ಮೂಡುವುದು ಸಹಜ.

ಆದರೆ ಇದೆಲ್ಲಕ್ಕೂ ಕಾರಣ ಇದೆ, ಬೈಕ್ ಓಡಿಸುವಾಗಲೇ ಹೆಲ್ಮೆಟ್ ಹಾಕಿಕೊಳ್ಳಲು ಹಿಂಜರಿಯುವವರು ಕಚೇರಿ ಒಳಗೆ ಹೆಲ್ಮೆಟ್ ಧರಿಸಿ ಕೂರೋದು ಉಂಟಾ.

ಹೆಲ್ಮೆಟ್ ಇಲ್ಲ ಅಂದ್ರೂ ಈ ವ್ಯಕ್ತಿಗೆ ದಂಡ ಹಾಕೋಕಾಗ್ತಿಲ್ಲ ಯಾಕೆ?ಹೆಲ್ಮೆಟ್ ಇಲ್ಲ ಅಂದ್ರೂ ಈ ವ್ಯಕ್ತಿಗೆ ದಂಡ ಹಾಕೋಕಾಗ್ತಿಲ್ಲ ಯಾಕೆ?

ಆದರೆ ಉತ್ತರ ಪ್ರದೇಶದ ವಿದ್ಯುತ್ ಇಲಾಖೆ ಕಚೇರಿಯಲ್ಲಿ ಅಂಥದ್ದೊಂದು ಪರಿಸ್ಥಿತಿ ನಿರ್ಮಾಣವಾಗಿದೆ.ಉತ್ತರ ಪ್ರದೇಶದಲ್ಲಿರುವ ಈ ವಿದ್ಯುತ್ ಇಲಾಖೆ ಕಚೇರಿ ಬೀಳುವ ಹಂತದಲ್ಲಿದೆ. ಒಂದೊಮ್ಮೆ ಕೆಲಸ ಮಾಡುತ್ತಿರುವಾಗಲೇ ಕಟ್ಟಡ ಕುಸಿದರೆ ಮೊದಲು ಅಪಾಯವಾಗುವುದು ತಲೆಗೆ. ಹೀಗಾಗಿ ತಲೆಗೆ ಹೆಲ್ಮೆಟ್ ಧರಿಸಿ ಕೆಲಸ ಮಾಡಿದರೆ ತಲೆಯಾದರೂ ಉಳಿಯುತ್ತದೆಯಲ್ಲಾ ಎನ್ನುವ ಆಲೋಚನೆಯಲ್ಲಿ ಇಲಾಖೆ ಸಿಬ್ಬಂದಿ ಮಾಡಿದ್ದಾರೆ.

Employees Wear Helmet In Office

ಸಿಬ್ಬಂದಿ ಹೊರಗೆ ಬೈಕ್ ಓಡಿಸುವಾಗ ಹೆಲ್ಮೆಟ್ ಧರಿಸುತ್ತಾರೋ ಇಲ್ಲವೋ ಗೊತ್ತಿಲ್ಲ, ಆದರೆ ನಿತ್ಯ ಕಚೇರಿ ಒಳಗೆ ಕಾಲಿಡುವ ಮುನ್ನವಂತೂ ಹೆಲ್ಮೆಟ್ ಕಡ್ಡಾಯವಾಗಿ ಹಾಕಿಕೊಳ್ಳುತ್ತಾರೆ.

ದಿನ ಕಳೆದಂತೆ ಕಟ್ಟಡ ಇನ್ನಷ್ಟು ಶಿಥಿಲವಾಗುತ್ತಿದೆ. ಯಾವಾಗ ಬೇಕಾದರೂ ಕಟ್ಟಡ ಕುಸಿಯಬಹುದು ಅಂತಹ ಹಂತದಲ್ಲಿದೆ. ಈಗಾಗಲೇ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ದಿನನಿತ್ಯ ಒಂದೊಂದು ಕಡೆ ಕಟ್ಟಡ ಕುಸಿಯುತ್ತಿದೆ. ಇದು ಇಂದು ನಿನ್ನೆಯದಲ್ಲ ಹಲವು ವರ್ಷಗಳಿಂದ ಅನುಭವಿಸುತ್ತಿರುವ ಸಮಸ್ಯೆಯಾಗಿದೆ ಎಂದು ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.

English summary
Employees Of Electricity Department in Uttar Pradesh have been wearing helmets in the office to protect themselves from any injury from the crumbling ceiling.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X