ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮಾಜವಾದಿ ಪಕ್ಷದ ಸಂಸದ 'ಎಮ್ಮೆ ಕದ್ರು' , ಅವರ ಪತ್ನಿ 'ಇನ್ನೊಂದು ಕದ್ರು'

|
Google Oneindia Kannada News

ಲಕ್ನೋ, ಸೆ 06 : ಸಮಾಜವಾದಿ ಪಕ್ಷದ ಹಿರಿಯ ಮುಖಂಡ ಮತ್ತು ರಾಂಪುರ ಲೋಕಸಭಾ ಕ್ಷೇತ್ರದ ಸಂಸದ ಅಜಂ ಖಾನ್ ಅವರ ಪತ್ನಿಯ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಖಾನ್ ಅವರ ಪತ್ನಿಯ ಮೇಲೆ ವಿದ್ಯುತ್ ಕಳ್ಳತನದ ಆರೋಪ ಹೊರಿಸಲಾಗಿದೆ.

ಅಜಂ ಖಾನ್ ಮತ್ತು ಅವರ ಪತ್ನಿಯ ಒಡೆತನದ ರೆಸಾರ್ಟ್ ಮೇಲೆ ಅಧಿಕಾರಿಗಳು ದಾಳಿ ನಡೆಸಿದ ನಂತರ ಎಫ್ಐಆರ್ ದಾಖಲಿಸಲಾಗಿದೆ. ದಾಳಿ ವೇಳೆ, ರೆಸಾರ್ಟಿನ ವಿದ್ಯುತ್ ಮೀಟರ್‌ ಅನ್ನು ದುರ್ಬಳಕೆ ಮಾಡಿದು ಸಾಬೀತಾತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ರೆಸಾರ್ಟ್ ಮತ್ತು ಆಸ್ತಿ, ಅಜಂ ಖಾನ್ ಅವರ ಪತ್ನಿ ತಜೀನ್ ಫಾತಿಮಾ ಹೆಸರಿನಲ್ಲಿ ರಿಜಿಸ್ಟರ್ ಆಗಿದೆ.

ಲೋಕಸಭೆಯ ನಾರಿಶಕ್ತಿಗೆ ಹೆದರಿ ಕೊನೆಗೂ ಕ್ಷಮೆ ಕೇಳಿದ ಅಜಂ ಖಾನ್ಲೋಕಸಭೆಯ ನಾರಿಶಕ್ತಿಗೆ ಹೆದರಿ ಕೊನೆಗೂ ಕ್ಷಮೆ ಕೇಳಿದ ಅಜಂ ಖಾನ್

ಉತ್ತರ ಪ್ರದೇಶದಲ್ಲಿ, ಮುಲಾಯಂ ಸಿಂಗ್ ಮತ್ತು ಅವರ ಪುತ್ರ ಅಖಿಲೇಶ್ ಯಾದವ್ ಅವರ ಸರಕಾರವಿದ್ದಾಗ, ಅಜಂ ಖಾನ್ ಪ್ರಭಾವಿ ಸಚಿವರಾಗಿದ್ದರು. ಕಳೆದ ಆಗಸ್ಟ್ ಆಗಸ್ಟ್ 29 ರಂದು, ಎಮ್ಮೆ ಕಳ್ಳತನದ ವಿಚಾರದಲ್ಲಿ, ಅಜಂ ಖಾನ್ ವಿರುದ್ಧ ಪ್ರಕರಣ ದಾಖಲಾಗಿತ್ತು.

Electricity Theft By SP MP Azam Khan Wife: FIR Registered Against Her By UP Police

ಆಸಿಮ್ ಮತ್ತು ಆಲಿ ಎನ್ನುವವರು ನೀಡಿದ ದೂರಿನ ಆಧಾರದ ಮೇಲೆ ಈ ಪ್ರಕರಣವನ್ನು ದಾಖಲಿಸಲಾಗಿತ್ತು. " ಅಜಂ ಖಾನ್ ಮತ್ತು ಇತರ ಐದು ಮಂದಿ 2016ರ ಅಕ್ಟೋಬರ್ 15 ರಂದು ನಮ್ಮ ಮನೆಗೆ ನುಗ್ಗಿ ಆಸ್ತಿಯನ್ನು ಧ್ವಂಸ ಮಾಡಿದ್ದರು. ಮತ್ತು, ಮನೆಯಲ್ಲಿದ್ದ ಎಮ್ಮೆಯೊಂದಿಗೆ ಪರಾರಿಯಾಗಿದ್ದರು " ಎಂದು, ಇವರಿಬ್ಬರು ದೂರು ನೀಡಿದ್ದರು.

ಇನ್ನು, ರೆಸಾರ್ಟಿನ ವಿದ್ಯುತ ಕಳ್ಲತನದ ವಿಚಾರದಲ್ಲಿ ಸ್ಪಷ್ಟನೆಯನ್ನು ನೀಡಿರುವ ಅಧಿಕಾರಿಗಳು, " ತಜೀನ್ ಫಾತಿಮಾ ಹೆಸರಿನಲ್ಲಿ ನೋಂದಾಯಿಸಲಾಗಿರುವ ಪವರ್ ಮೀಟರ್ 5 ಕಿಲೋ ವ್ಯಾಟ್ ಸಾಮರ್ಥ್ಯವನ್ನು ಹೊಂದಿದೆ.

ಅಜಂ ಖಾನ್ ಗೆ ಲೋಕಸಭೆಯಲ್ಲಿ ಮಹಿಳಾ ಸಂಸದರ ಒಕ್ಕೊರಲ ಧಿಕ್ಕಾರ!ಅಜಂ ಖಾನ್ ಗೆ ಲೋಕಸಭೆಯಲ್ಲಿ ಮಹಿಳಾ ಸಂಸದರ ಒಕ್ಕೊರಲ ಧಿಕ್ಕಾರ!

" ಆದರೆ, ಮಾಲೀಕರು ಮೂರು ಹೆಚ್ಚುವರಿ ವಿದ್ಯುತ್ ಫೇಸ್ ಗಳನ್ನು ಹಾಕಿದ್ದರು. ಇದು, ಹೆಚ್ಚು ವಿದ್ಯುತ್ ಅನ್ನು ಬಳಸಿಕೊಂಡರೂ, ಮೀಟರ್ ನಲ್ಲಿ ದಾಖಲಾಗುವುದಿಲ್ಲ. ಇದೊಂದು ಅಕ್ರಮ" ಎಂದು ವಿದ್ಯುತ್ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

English summary
The Uttar Pradesh Police has registered an FIR against wife of senior Samajwadi Party leader and Rampur MP Azam Khan. Azam Khan's wife has been accused of electricity theft.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X