• search
 • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಮುಂದೆ ಇಂತಹ ತಪ್ಪು ಮಾಡಬೇಡಿ' ಎಸ್‌ಪಿಗೆ ಚುನಾವಣಾ ಆಯೋಗ ಸೂಚನೆ

|
Google Oneindia Kannada News

ಲಕ್ನೋ ಜನವರಿ 18: ಐದು ರಾಜ್ಯಗಳ ಚುನಾವಣಾ ದಿನಾಂಕಗಳ ಘೋಷಣೆಯ ಜೊತೆಗೆ, ಕೊರೊನದ ಮೂರನೇ ಅಲೆಯನ್ನು ಗಮನದಲ್ಲಿಟ್ಟುಕೊಂಡು ಚುನಾವಣಾ ಆಯೋಗ ರ್‍ಯಾಲಿಗಳನ್ನು ನಿಷೇಧಿಸಿದೆ. ಆದರೆ ಸಮಾಜವಾದಿ ಪಕ್ಷ ಚುನಾವಣಾ ಆಯೋಗದ ಆದೇಶವನ್ನು ಉಲ್ಲಂಘಿಸಿ, ಸಾವಿರಾರು ಜನರು ಕಳೆದ ವಾರ ಜಮಾಯಿಸಿದ್ದರು. ಲಕ್ನೋ ಕಚೇರಿಯಲ್ಲಿ ಬೆಂಬಲಿಗರ ಗುಂಪು ಜಮಾಯಿಸಿತ್ತು. ಈ ವಿಚಾರದಲ್ಲಿ ಕಟ್ಟುನಿಟ್ಟಿನ ನಿಲುವು ತಳೆದಿರುವ ಚುನಾವಣಾ ಆಯೋಗವು ಎಸ್ಪಿಗೆ ನೋಟಿಸ್ ಕಳುಹಿಸಿದ್ದು, 24 ಗಂಟೆಗಳಲ್ಲಿ ಉತ್ತರ ನೀಡುವಂತೆ ಸೂಚಿಸಿತ್ತು. ಇದೇ ವೇಳೆ ಭವಿಷ್ಯದಲ್ಲಿ ಈ ರೀತಿ ಮಾಡದಂತೆ ಚುನಾವಣಾ ಆಯೋಗ ಸೂಚನೆ ನೀಡಿದೆ.

ಕೊರೊನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿದಲ್ಲಿ ಕ್ರಮ ಕೈಗೊಳ್ಳಲಾಗುವುದು. ಭವಿಷ್ಯದಲ್ಲಿ ಜಾಗರೂಕರಾಗಿರಿ ಮತ್ತು ನಿರ್ಬಂಧಗಳನ್ನು ಅನುಸರಿಸಿ ಎಂದು ಸಮಾಜವಾದಿ ಪಕ್ಷಕ್ಕೆ ಚುನಾವಣಾ ಆಯೋಗ ಸಲಹೆ ನೀಡಿದೆ. ವಾಸ್ತವವಾಗಿ, ಜನವರಿ 14 ರಂದು ಲಕ್ನೋದಲ್ಲಿ ಸಮಾಜವಾದಿ ಪಕ್ಷದ ಕಚೇರಿ ಮುಂದೆ ನೂರಾರು ಕಾರ್ಯಕರ್ತರು ಜಮಾಯಿಸಿದ್ದರು. ರ್ಯಾಲಿ ಮಾಡಲಾಯಿತು. ನಂತರ ಚುನಾವಣಾ ಆಯೋಗ ಸಮಾಜವಾದಿ ಪಕ್ಷಕ್ಕೆ ಇದಕ್ಕೆ ಉತ್ತರಗಳನ್ನು ಕೋರಿ ನೋಟಿಸ್ ನೀಡಿತ್ತು. ಒಂದು ವೇಳೆ ಉತ್ತರ ಸಿಗದಿದ್ದಲ್ಲಿ ಅವರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಆಯೋಗ ಕ್ರಮ ಕೈಗೊಳ್ಳಲಿದೆ ಎಂದೂ ಹೇಳಲಾಗಿತ್ತು.

ಚುನಾವಣಾ ಆಯೋಗದ ಆದೇಶದ ಮೇರೆಗೆ ಲಕ್ನೋ ಪೊಲೀಸ್ ಕಮಿಷನರ್ ಡಿಕೆ ಠಾಕೂರ್ ಅವರು ಎಸ್‌ಎಚ್‌ಒ ಗೋಟಂಪಲ್ಲಿ ಅವರನ್ನು ಅಮಾನತುಗೊಳಿಸಿದ್ದರು. ಕೊರೋನಾ ಸೋಂಕಿತರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿರುವ ಸಮಯದಲ್ಲಿ ಲಕ್ನೋದಲ್ಲಿ ಎಸ್ಪಿ ರ್‍ಯಾಲಿಯನ್ನು ಆಯೋಜಿಸಲಾಗಿದೆ. ರ‍್ಯಾಲಿಯಲ್ಲಿ ಮಾಸ್ಕ್ ಮತ್ತು ಸಾಮಾಜಿಕ ಅಂತರವನ್ನು ಉಲ್ಲಂಘಿಸಲಾಗಿದೆ. ಆದರೆ ವಿವಾದ ತೀವ್ರಗೊಂಡ ನಂತರ ಎಸ್‌ಪಿ ರ್‍ಯಾಲಿಗೆ ವರ್ಚುವಲ್ ರ್‍ಯಾಲಿ ಎಂದು ಹೆಸರಿಸಿದ್ದರು.

ಕೋವಿಡ್ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಉಲ್ಲಂಘಿಸಿದ್ದಕ್ಕಾಗಿ ಚುನಾವಣಾ ಆಯೋಗ ನೋಟಿಸ್ ನೀಡಿತ್ತು. ಇದರಿಂದ ಬೇಸರಗೊಂಡಿದ್ದ ಅಖಿಲೇಶ್ ಯಾದವ್ ಬಿಜೆಪಿ ಶಾಸಕರೊಬ್ಬರು ರೋಡ್‌ಶೋ ನಡೆಸುವ ವಿಡಿಯೊವನ್ನು ಟ್ವೀಟ್ ಮಾಡಿದ್ದರು. ಮುಂದಿನ ತಿಂಗಳು ನಡೆಯಲಿರುವ ಚುನಾವಣೆಗೂ ಮುಂಚಿತವಾಗಿ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಕೊರೊನಾ ನಿಯಮಗಳ ಉಲ್ಲಂಘನೆಯಾಗಿದೆ. ಆದರೆ ಸಮಾಜವಾದಿ ಪಕ್ಷದ ಮೇಲೆ ಚುನಾವಣಾ ಆಯೋಗ ತೆಗೆದುಕೊಂಡ ತುರ್ತು ಕ್ರಮ ಬಿಜೆಪಿ ಮೇಲೆ ಯಾಕಿಲ್ಲ ಎಂದು ಅಖಿಲೇಶ್ ಪ್ರಶ್ನಿಸಿದ್ದರು.

ವಿಡಿಯೋವನ್ನು ಹಂಚಿಕೊಂಡ ಅಖಿಲೇಶ್ ಯಾದವ್ ಅವರು ಸರ್ಕಾರ ಘೋಷಿಸಿದಂತೆ ಕೋವಿಡ್ ಪ್ರೋಟೋಕಾಲ್‌ಗಳನ್ನು ಉಲ್ಲಂಘಿಸುವ ಎಲ್ಲಾ ಪಕ್ಷಗಳ ವಿರುದ್ಧ ಉನ್ನತ ಚುನಾವಣಾ ಸಂಸ್ಥೆ ಏಕರೂಪವಾಗಿ ಕಾರ್ಯನಿರ್ವಹಿಸಬೇಕೆಂದು ಒತ್ತಾಯಿಸಿದರು. ಕೋವಿಡ್ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕಳೆದ ವಾರ ಸಮಾಜವಾದಿ ಪಕ್ಷಕ್ಕೆ ಚುನಾವಣಾ ಆಯೋಗ ನೋಟಿಸ್ ನೀಡಿತ್ತು. ಆದರೆ ಅಮ್ರೋಹಾಲ್ಲಿ ಬಿಜೆಪಿ ಶಾಸಕ ಮಹೇಂದ್ರ ಖರಗ್ವಂಶಿ ಚುನಾವಣಾ ಮೆರವಣಿಗೆ ನಡೆಸಿ, ನೀತಿ ಸಂಹಿತೆ ಮತ್ತು ಕೊರೋನಾ ಮಾರ್ಗಸೂಚಿಗಳನ್ನು ಬಹಿರಂಗವಾಗಿ ಉಲ್ಲಂಘಿಸಿದ್ದಾರೆ ಎಂದು ಅಖಿಲೇಶ್ ಟ್ವೀಟ್ ಮಾಡಿದ್ದರು.

ಯುಪಿಯಲ್ಲಿ ಅಖಿಲೇಶ್ ಯಾದವ್ ಪರ ಮಮತಾ ಬ್ಯಾನರ್ಜಿ ಪ್ರಚಾರ
ಅಖಿಲೇಶ್ ಯಾದವ್ ಅವರು ಚುನಾವಣಾ ಆಯೋಗವು ಪಕ್ಷಪಾತ ಮಾಡುತ್ತಿದೆ ಎಂದು ಆರೋಪಿಸಿ ವಿಡಿಯೋವನ್ನು ಟ್ವೀಟ್ ಮಾಡಿದ್ದರು. ಯಾದವ್ ಅವರು ಹಂಚಿಕೊಂಡ ವೀಡಿಯೊದಲ್ಲಿ ನೂರಾರು ಜನರು ಮಾಸ್ಕ್ ಗಳಿಲ್ಲದೆ ಸಾಮಾಜಿಕ ದೂರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಪ್ರಚಾರದಲ್ಲಿ ಭಾಗಿಯಾಗಿರುವುದು ಕಂಡು ಬಂತು. ಇದು ಜನವರಿ 22 ರವರೆಗೆ ರ್‍ಯಾಲಿಗಳು, ರೋಡ್‌ಶೋಗಳು, ನುಕ್ಕಡ್ ಸಭೆಗಳು (ರಸ್ತೆಬದಿಯ ಸಭೆಗಳು) ಅಥವಾ ಇತರ ಸಾರ್ವಜನಿಕ ಕಾರ್ಯಕ್ರಮಗಳನ್ನು ನಿಷೇಧಿಸುವ ಚುನಾವಣಾ ಆಯೋಗದ ಆದೇಶವನ್ನು ಮೀರಿರುವುದು ತೋರಿಸುತ್ತದೆ ಎಂದು ಅಖಿಲೇಶ್ ಕಿಡಿ ಕಾರಿದ್ದಾರೆ. ಇದಾದ ಕೆಲ ದಿನಗಳ ಬಳಿಕ ಚುನಾವಣಾ ಆಯೋಗ ಮುಂದೆ ಇಂತಹ ತಪ್ಪು ಮಾಡಬೇಡಿ ಎಂದು ಸಮಾಜವಾದಿ ಪಕ್ಷಕ್ಕೆ ಸೂಚನೆ ನೀಡಿದೆ.

   Virat Kohli ನಾಯಕತ್ವದ ಬಳಿಕ ಹೊಸ ಅಧ್ಯಾಯ ಶುರು ಮಾಡ್ತಾರಾ | Oneindia Kannada

   ಯುಪಿಯಲ್ಲಿ 7 ಹಂತಗಳಲ್ಲಿ ಮತದಾನ ನಡೆಯಲಿದೆ. ಮೊದಲ ಹಂತ ಫೆಬ್ರವರಿ 10 ರಂದು ಪ್ರಾರಂಭವಾಗಲಿದ್ದು, ಕೊನೆಯ ಹಂತ ಮಾರ್ಚ್ 7 ರಂದು ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದ್ದು, ನಂತರ ಫಲಿತಾಂಶ ಪ್ರಕಟವಾಗಲಿದೆ.

   English summary
   Along with the announcement of the dates of elections in five states, the Election Commission has banned the rally in view of the third wave of Corona, but in violation of the order of the Samajwadi Party, thousands of people gathered in the Lucknow office. A crowd of supporters had gathered.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   Desktop Bottom Promotion