ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿ: ಯೋಗಿ ಎಫೆಕ್ಟ್? 11 ಹಾಲಿ ಶಾಸಕರ ಟಿಕೆಟ್‌ ಕಡಿತ

|
Google Oneindia Kannada News

ಲಕ್ನೋ ಜನವರಿ 31: ಉತ್ತರ ಪ್ರದೇಶದಲ್ಲಿ ಮೊದಲ ಹಂತದ ವಿಧಾನಸಭಾ ಚುನಾವಣೆಗೆ ಫೆಬ್ರವರಿ 10 ರಂದು ಮತದಾನ ಆರಂಭಗೊಳ್ಳಲಿದೆ. ಯುಪಿಯಲ್ಲಿ ಒಟ್ಟು 403 ವಿಧಾನಸಭಾ ಸ್ಥಾನಗಳಿಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಚುನಾವಣಾ ಫಲಿತಾಂಶಗಳನ್ನು ಮಾರ್ಚ್ 10, 2022 ರಂದು ಘೋಷಿಸಲಾಗುತ್ತದೆ. ರಾಜ್ಯದಲ್ಲಿ ಚುನಾವಣಾ ರಣಕಹಳೆ ಮೊಳಗುತ್ತಿದ್ದು, ರಾಜಕೀಯ ಪಕ್ಷಗಳಲ್ಲಿ ಸಂಚಲನ ಮೂಡಿಸಿದೆ. ಬಿಜೆಪಿ, ಎಸ್‌ಪಿ, ಬಿಎಸ್‌ಪಿ, ಕಾಂಗ್ರೆಸ್‌ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳ ಹೋರಾಟಕ್ಕೆ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಸಿದ್ಧತೆ ನಡೆಸಿವೆ. ಈ ಅನುಕ್ರಮದಲ್ಲಿ ಬಿಜೆಪಿ 91 ಹೊಸ ಅಭ್ಯರ್ಥಿಗಳ ಹೆಸರನ್ನು ಬಹಿರಂಗಪಡಿಸಿದೆ. ಈ ಪಟ್ಟಿ ಮುನ್ನೆಲೆಗೆ ಬಂದ ನಂತರ ಸಿಎಂ ಯೋಗಿ ಆದಿತ್ಯನಾಥ್ ಉಸ್ತುವಾರಿಯಲ್ಲಿ ವಿಶೇಷವಾಗಿ ಪಟ್ಟಿ ಸಿದ್ಧಪಡಿಸಲಾಗಿದೆ ಎನ್ನಲಾಗುತ್ತಿದೆ.

ಬಿಜೆಪಿ ನಾಯಕ ಮತ್ತು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರೇ ಗೋರಖ್‌ಪುರದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಸ್ವತಃ ಸಿಎಂ ಯೋಗಿಯೂ ಗೋರಖ್‌ಪುರದೊಂದಿಗೆ ತಳದಿಂದ ಸಂಪರ್ಕ ಹೊಂದಿದ್ದಾರೆ. ನಿರೀಕ್ಷಿತ ಅಭ್ಯರ್ಥಿಗಳಿಂದ 11 ಹಾಲಿ ಶಾಸಕರಿಗೆ ಪಕ್ಷವು ಟಿಕೆಟ್ ಕಡಿತಗೊಳಿಸಿರುವ ಕಾರಣ ಶುಕ್ರವಾರ ಹೊರಬಂದ ಪಟ್ಟಿಯನ್ನು ನೋಡಿ ಕಾರ್ಯಕರ್ತರು ಆಶ್ಚರ್ಯಚಕಿತರಾದರು. ಆರನೇ ಮತ್ತು ಏಳು ಹಂತಗಳಲ್ಲಿ (ಮಾರ್ಚ್ 3 ಮತ್ತು ಮಾರ್ಚ್ 7) ಮತದಾನ ನಡೆಯಲಿರುವ ಗೋರಖ್‌ಪುರ ಪ್ರದೇಶದ 62 ಸ್ಥಾನಗಳಲ್ಲಿ ಬಿಜೆಪಿ ಇದುವರೆಗೆ 37 ಅಭ್ಯರ್ಥಿಗಳನ್ನು ಘೋಷಿಸಿದೆ. ಈ ಪೈಕಿ ಶೇ.43ರಷ್ಟು ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ.

ಮುಖ್ಯಮಂತ್ರಿಯ ಹೊರತಾಗಿ, ಯೋಗಿ ಆದಿತ್ಯನಾಥ್ ಅವರು ಬಿಜೆಪಿಯ ರಾಜ್ಯ ಚುನಾವಣಾ ಸಮಿತಿಯ ಸದಸ್ಯರಾಗಿದ್ದಾರೆ. ಬಿಜೆಪಿ ಯುಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಮತ್ತು ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಮತ್ತು ದಿನೇಶ್ ಶರ್ಮಾ ಅವರಂತಹ ಇತರ ನಾಯಕರೊಂದಿಗೆ ಅಭ್ಯರ್ಥಿಗಳ ಅಂತಿಮ ಪಟ್ಟಿ ತಯಾರಿಕೆಗೆ ಸಂಬಂಧಿಸಿದ ಎಲ್ಲಾ ಸಭೆಗಳಲ್ಲಿ ಸಿಎಂ ಯೋಗಿ ಭಾಗವಹಿಸುತ್ತಾರೆ. ಬಿಜೆಪಿ ನಾಯಕ ಯೋಗಿ ಅವರ ಮಾತುಗಳು ಗೋರಖ್‌ಪುರದಲ್ಲಿ ಮೇಲುಗೈ ಸಾಧಿಸುತ್ತವೆ. ಏಕೆಂದರೆ ಅವರು ಪಕ್ಷದ ಮುಖ್ಯಮಂತ್ರಿ ಮಾತ್ರ ಆಗಿರದೆ ಚುನಾವಣೆಯ ಮತ್ತೊಂದು ಮುಖ. ಕೇವಲ ಸಂಸದರಾಗಿದ್ದ ಅವರು 2017 ರಲ್ಲಿ ಉತ್ತರಪ್ರದೇಶವನ್ನು ಅಭಿವೃದ್ಧಿಯತ್ತ ಮುನ್ನಡೆಸಿದರು ಎನ್ನಲಾಗುತ್ತದೆ.

Effect of CM Yogi Adityanath? BJP Cut the Ticket of Sitting Mlas in 11 Seats of Gorakhpur Division
ಟಿಕೆಟ್ ಕೈತಪ್ಪಲು ಸಿಎಂ ಯೋಗಿ ಪ್ರಾಬಲ್ಯ ಕಾರಣ?:

ಆ ಸಮಯದಲ್ಲಿ ಕೇಶವ್ ಪ್ರಸಾದ್ ಮೌರ್ಯ ಯುಪಿ ಬಿಜೆಪಿ ಮುಖ್ಯಸ್ಥರಾಗಿದ್ದರು ಮತ್ತು ಗೋರಖ್‌ಪುರ ಸೇರಿದಂತೆ ರಾಜ್ಯ ಘಟಕದ ಪರವಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಸುನಿಲ್ ಬನ್ಸಾಲ್ ಅವರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಆದರೆ, ಇಂದಿನ ಅಂತಿಮ ನಿರ್ಧಾರವನ್ನು ಪಕ್ಷದ ನಾಯಕತ್ವವೇ ತೆಗೆದುಕೊಳ್ಳುತ್ತದೆ. 11 ಮಂದಿ ಶಾಸಕರ ಟಿಕೆಟ್ ಕೈತಪ್ಪಲು ಸಿಎಂ ಯೋಗಿ ಪ್ರಾಬಲ್ಯವೂ ಒಂದು ಕಾರಣ ಎನ್ನಲಾಗುತ್ತಿದ್ದರೆ, ಬಿಜೆಪಿ ನಾಯಕರು ಹೇಳುವುದು ಬೇರೆಯದ್ದೇ ಮಾತು. ಪಕ್ಷದ ಪ್ರಕಾರ 11 ಸ್ಥಾನಗಳಲ್ಲಿ ಹೊಸ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಕೈಬಿಟ್ಟಿರುವ ಅಭ್ಯರ್ಥಿಗಳು ಬಂಡಾಯವೇಳುವ ಸಾಧ್ಯತೆ ಗೋಚರವಾಗಿದೆ ಎಂದು ಮೂಲಗಳು ನಂಬಿವೆ. ಹೀಗಾಗಿ ಅವರನ್ನು ಈ ಚುನಾವಣೆಯಿಂದ ಕೈಬಿಟ್ಟು ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ ಎನ್ನಲಾಗುತ್ತಿದೆ.

ಇತ್ತ ಯುಪಿ ಮುಖ್ಯ ಚುನಾವಣಾ ಅಧಿಕಾರಿ ಅಜಯ್ ಕುಮಾರ್ ಶುಕ್ಲಾ ಅವರು ಫೆಬ್ರವರಿ 10 ರ ಬೆಳಗ್ಗೆ 7.00 ರಿಂದ ಮಾರ್ಚ್ 7 ರ ಸಂಜೆ 6.30 ರವರೆಗೆ ಯಾವುದೇ ಸಮೀಕ್ಷೆಗಳನ್ನು ನಡೆಸುವುದು, ಮುದ್ರಣ ಅಥವಾ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಅದರ ಪ್ರಕಟಣೆ ಅಥವಾ ಅದರ ಪ್ರಚಾರವನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಆದೇಶವನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಗೆ ಎರಡು ವರ್ಷಗಳ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ. ಐದು ರಾಜ್ಯಗಳ ಒಟ್ಟು 690 ಕ್ಷೇತ್ರಗಳಿಗೆ ಮುಂದಿನ ತಿಂಗಳು ಚುನಾವಣೆ ನಡೆಯಲಿದೆ. ಫೆಬ್ರವರಿ 10 ರಂದು ಚುನಾವಣೆಗಳು ಪ್ರಾರಂಭವಾಗಲಿದ್ದು, ಮಾರ್ಚ್ 7 ರವರೆಗೆ ನಡೆಯಲಿದೆ ಎಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದೆ. 690 ಕ್ಷೇತ್ರಗಳ ಪೈಕಿ ಗರಿಷ್ಠ ಯುಪಿಯಲ್ಲಿ (403). ಪಂಜಾಬ್ 117, ಉತ್ತರಾಖಂಡ, 70, ಮಣಿಪುರ, 50 ಮತ್ತು ಗೋವಾ 40 ಕ್ಷೇತ್ರಗಳನ್ನು ಹೊಂದಿದೆ.

English summary
Voting for the first phase of assembly elections in Uttar Pradesh begins on February 10. Polling will be conducted in seven phases for a total of 403 assembly seats in UP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X