ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೋಗಿ ಆದಿತ್ಯನಾಥ್, ಮಾಯಾವತಿ ಪ್ರಚಾರಕ್ಕೆ ಆಯೋಗದಿಂದ ಬ್ರೇಕ್

|
Google Oneindia Kannada News

ಲಕ್ನೋ, ಏ.15: ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಹಾಗೂ ಕೋಮು ಭಾವನೆ ಕೆರಳುವ ಭಾಷಣ ಮಾಡಿದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಲೋಕಸಭಾ ಚುನಾವಣಾಪ್ರಚಾರಕ್ಕೆ ಚುನಾವಣಾ ಆಯೋಗ ನಿರ್ಬಂಧ ಹೇರಿದೆ.

ನಾಳೆ ಬೆಳಗ್ಗೆ 6ರಿಂದ ಸೂಚನೆ ಜಾರಿಗೆ ಬರಲಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ 72 ಗಂಟೆಗಳ ಕಾಲ ಪ್ರಚಾರಕ್ಕೆ ನಿರ್ಬಂಧವಿಧಿಸಲಾಗಿದೆ.

EC bans Yogi for 3 days and Mayawati for 2 days from election campaigning

ಮುಸ್ಲಿಮರಿಗೆ ಮತ ಹಾಕಿ ಎಂದು ಹೇಳಿರುವ ಕಾರಣಕ್ಕೆ ಮಾಯಾವತಿಗೆ ಹಾಗೂ ಅಲಿ, ಬಜರಂಗ ಬಲಿ ಕುರಿತ ಹೇಳಿಕೆಗೆ ಯೋಗಿ ಆದಿತ್ಯನಾಥ್‌ಗೆ ನೋಟಿಸ್ ನೀಡಲಾಗಿದೆ.

ಯೋಗಿ ಆದಿತ್ಯನಾಥ್‌ಗೆ 72 ಗಂಟೆ ಹಾಗೂ ಮಾಯಾವತಿಗೆ 48 ಗಂಟೆಗಳ ಕಾಲ ಚುನಾವಣಾ ಪ್ರಚಾರಕ್ಕೆ ನಿರ್ಬಂಧ ಹೇರಲಾಗಿದೆ.

ಬಜರಂಗಬಲಿ, ಅಲಿ ಇಬ್ಬರೂ ನಮ್ಮವರೇ ಇಬ್ಬರೂ ಬಿಜೆಪಿಗೆ ಮತ ನೀಡುವುದಿಲ್ಲ ಎಂದು ಬಿಎಸ್ ಪಿ ನಾಯಕಿ ಮಾಯಾವತಿ ಹೇಳಿದ್ದರು.

ರಾಮಾಯಣದ ಬಜರಂಗಬಲಿ ದಲಿತ ಸಮುದಾಯಕ್ಕೆ ಸೇರಿದವನಾಗಿದ್ದ ಎಂಬ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿಕೆಯನ್ನೇ ಚುನಾವಣಾ ಪ್ರಚಾರಕ್ಕೆ ಬಳಸಿಕೊಂದಿರುವ ಮಾಯಾವತಿ, ಬಜರಂಗಬಲಿಯನ್ನು ನನ್ನ ಸ್ವಂತ ದಲಿತ ಸಮುದಾಯಕ್ಕೆ ತಳುಕುಹಾಕಲಾಗಿದೆ. ಆದ್ದರಿಂದ ಬಜರಂಗಬಲಿ ನಮ್ಮವನೇ ಆಗಿದ್ದಾನೆ ಎಂದು ಹೇಳಿದ್ದಾರೆ.

ಚುನಾವಣಾ ಪ್ರಚಾರವನ್ನುದ್ದೇಶಿಸಿ ಮಾತನಾಡಿದ್ದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅಲಿ (ಮುಸ್ಲಿಂ ಸಮುದಾಯದ ಮತಗಳು) ಬಿಎಸ್ ಪಿ-ಸಮಾಜವಾದಿ ಪಕ್ಷ- ಆರ್ ಎಲ್ ಡಿ ಜೊತೆ ಇದ್ದರೆ, ಬಜರಂಗಬಲಿ (ಹಿಂದೂ ಸಮುದಾಯದ ಮತಗಳು) ಭಾರತೀಯ ಜನತಾ ಪಕ್ಷದೊಂದಿಗೆ ಇದೆ ಎಂದು ಹೇಳಿದ್ದರು.

ಈಗ ಈ ಹೇಳಿಕೆಯನ್ನೇ ಮುಂದಿಟ್ಟುಕೊಂಡು ಮಾಯಾವತಿ ಚುನಾವಣಾ ಪ್ರಚಾರ ನಡೆಸುತ್ತಿದ್ದು, ಬಜರಂಗ ಬಲಿ, ಅಲಿ ಇಬ್ಬರೂ ನಮ್ಮವರೇ ಇಬ್ಬರೂ ಬಿಜೆಪಿಗೆ ಮತ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಮಾಯಾವತಿ, ಯೋಗಿ ಆದಿತ್ಯನಾಥ್ ಇಬ್ಬರಿಗೂ ಚುನಾವಣಾ ಆಯೋಗ ನೊಟೀಸ್ ಜಾರಿಗೊಳಿಸಿದೆ.

English summary
The Election Commission on Monday "strongly condemned" Uttar Pradesh Chief Minister Yogi Adityanath and BSP supremo Mayawati for their communal remarks and barred them from campaigning for different periods.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X