ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೈನಿಕರಿಗಾಗಿ ಹಗುರ ಬುಲೆಟ್ ಪ್ರೂಫ್ ಜಾಕೆಟ್ ತಯಾರಿಸಿದ ಡಿಆರ್‌ಡಿಒ

|
Google Oneindia Kannada News

ಕಾನ್ಪುರ, ಎಪ್ರಿಲ್ 1: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಕಾನ್ಪುರದಲ್ಲಿನ ರಕ್ಷಣಾ ಸಾಮಗ್ರಿಗಳು ಮತ್ತು ಮಳಿಗೆಗಳು ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ ಪ್ರಯೋಗಾಲಯವು 9 ಕೆಜಿ ತೂಕದ ಲೈಟ್-ವೇಟ್ ಬುಲೆಟ್ ಪ್ರೂಫ್ ಜಾಕೆಟ್ ಅನ್ನು (ಬಿಪಿಜೆ) ಅಭಿವೃದ್ಧಿಪಡಿಸಿದೆ. ಹೊಸದಾಗಿ ಅಭಿವೃದ್ಧಿಪಡಿಸಿದ ಈ ಜಾಕೆಟ್, ಭಾರತೀಯ ಸೇನೆಗೆ ಸೂಕ್ತವಾದ ಗುಣಮಟ್ಟವನ್ನು ಒಳಗೊಂಡಿದೆ.

ಚಂಡೀಗಡದ ಟರ್ಮಿನಲ್ ಬ್ಯಾಲೆಸ್ಟಿಕ್ ರೀಸರ್ಚ್ ಲ್ಯಾಬೊರೇಟರಿಯಲ್ಲಿ ಫ್ರಂಟ್ ಹಾರ್ಡ್ ಆರ್ಮರ್ ಪ್ಯಾನಲ್ (ಎಫ್‌ಎಚ್‌ಎಪಿ) ಜಾಕೆಟ್ ಅನ್ನು ಪರೀಕ್ಷಿಸಲಾಗಿದ್ದು, ಅದು ಬಿಐಎಸ್‌ನ ಮಾನದಂಡಗಳಿಗೆ ಅನುಗುಣವಾಗಿದೆ ಎಂದು ನಿರ್ಧರಿಸಲಾಗಿದೆ.

ಹಗುರ ತೂಕದ ಗುಂಡು ನಿರೋಧಕ ಜಾಕೆಟ್‌ಗಳಲ್ಲಿ ಪ್ರತಿ ಒಂದು ಗ್ರಾಂ ತೂಕ ಕಡಿಮೆಯಾಗುವುದೂ ಬಹಳ ಮುಖ್ಯವಾಗಿದೆ. ಇದರಿಂದ ಸೈನಿಕರು ಶತ್ರುಗಳ ವಿರುದ್ಧದ ಹೋರಾಟದಲ್ಲಿ ದೈಹಿಕವಾಗಿ ಮತ್ತಷ್ಟು ಚಟುವಟಿಕೆ ಪ್ರದರ್ಶಿಸಲು ಅನುಕೂಲವಾಗಲಿದೆ. ಮಧ್ಯಮ ಗಾತ್ರದ ಬಿಪಿಜೆಗಳು ಈ ಮೊದಲು 10.4 ಕೆಜಿ ತೂಕವಿದ್ದವು. ಈಗ ಹೊಸ ತಂತ್ರಜ್ಞಾನದ ಮೂಲಕ ಆ ತೂಕವನ್ನು 9 ಕೆಜಿಗೆ ಇಳಿಸಲಾಗಿದೆ.

DRDO Develops Light-Weight Bullet Proof Jacket For Indian Army

ಆತ್ಮನಿರ್ಭರ ಯೋಜನೆಯಡಿ ಈ ಹಗುರ ತೂಕದ ಗುಂಡು ನಿರೋಧಕ ಜಾಕೆಟ್ ಅನ್ನು ತಯಾರಿಸುವ ಮೂಲಕ ಸೈನಿಕರಿಗೆ ಹೆಚ್ಚು ಅನುಕೂಲ ಮಾಡಿಕೊಟ್ಟ ಡಿಆರ್‌ಡಿಒ ವಿಜ್ಞಾನಿಗಳು ಮತ್ತು ಉದ್ಯಮವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶ್ಲಾಘಿಸಿದ್ದಾರೆ.

English summary
DRDO develops light-weight bullet proof jacket (BPJ) weighing 9 KGs for Indian Army.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X