ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀರಾಮ ಮಂದಿರ: 22 ಕೋಟಿ ಮೌಲ್ಯದ 15 ಸಾವಿರ ಚೆಕ್ ಬೌನ್ಸ್

|
Google Oneindia Kannada News

ಅಯೋಧ್ಯೆ, ಏಪ್ರಿಲ್ 15: ಅಯೋಧ್ಯೆಯ ಶ್ರೀರಾಮ ದೇವಾಲಯ ನಿರ್ಮಾಣಕ್ಕೆ ದೇಣಿಗೆ ನೀಡಿದ್ದ ಪೈಕಿ 15 ಸಾವಿರ ಚೆಕ್‌ಗಳು ಬೌನ್ಸ್ ಆಗಿವೆ ಎಂಬ ಮಾಹಿತಿ ಲಭ್ಯವಾಗಿದೆ.

ರಾಮ ದೇವಾಲಯದ ನಿರ್ಮಾಣಕ್ಕಾಗಿ ವಿಶ್ವ ಹಿಂದೂ ಪರಿಷತ್ ಸಂಗ್ರಹಿಸಿದ 22 ಕೋಟಿ ರೂ. ಮೌಲ್ಯದ ಸುಮಾರು 15 ಸಾವಿರ ಬ್ಯಾಂಕ್ ಚೆಕ್ ಬೌನ್ಸ್ ಆಗಿದೆ.

ಅಯೋಧ್ಯೆಯಲ್ಲಿ ಕರ್ನಾಟಕ ಯಾತ್ರಿ ನಿವಾಸಕ್ಕಾಗಿ 10 ಕೋಟಿ ರುಅಯೋಧ್ಯೆಯಲ್ಲಿ ಕರ್ನಾಟಕ ಯಾತ್ರಿ ನಿವಾಸಕ್ಕಾಗಿ 10 ಕೋಟಿ ರು

ಜನವರಿ 15ರಿಂದ ಆರಂಭವಾಗಿದ್ದ ದೇಣಿಗೆ ಸಂಗ್ರಹ ಅಭಿಯಾನದಲ್ಲಿ ಫೆಬ್ರವರಿ 17ರ ನಡುವೆ ದೇಶಾದ್ಯಂತ ವಿಶ್ವ ಹಿಂದೂ ಪರಿಷತ್(ವಿಎಚ್‌ಪಿ) ಅಪಾರ ಪ್ರಮಾಣದಲ್ಲಿ ದೇಣಿಗೆ ಸಂಗ್ರಹಿಸಿತ್ತು.

Donations For Ram Mandir : About 15,000 Collected Bank Cheques Bounce

ದೇವಾಲಯದ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ ಸ್ಥಾಪಿಸಿದ್ದ ಟ್ರಸ್ಟ್ ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರದ ಲೆಕ್ಕಪರಿಶೋಧನಾ ವರದಿಯ ಪ್ರಕಾರ, ಬ್ಯಾಂಕ್ ಖಾತೆಗಳಲ್ಲಿ ಹಣದ ಕೊರತೆ ಅಥವಾ ಕೆಲವು ತಾಂತ್ರಿಕ ದೋಷದಿಂದಾಗಿ ಚೆಕ್‌ಗಳು ಬೌನ್ಸ್ ಆಗಿವೆ ಎಂದು ಹೇಳಿದೆ.

ಅಂತಿಮ ಅಂಕಿ ಅಂಶಗಳನ್ನು ಟ್ರಸ್ಟ್ ಇನ್ನೂ ಘೋಷಿಸದಿದ್ದರೂ ಸುಮಾರು 5,000 ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ಹೇಳಲಾಗುತ್ತಿದೆ. ತಾಂತ್ರಿಕ ದೋಷಗಳ ಸಮಸ್ಯೆಯನ್ನು ಪರಿಹರಿಸಲು ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿವೆ ಮತ್ತು ಅವರು ಮತ್ತೆ ದೇಣಿಗೆ ನೀಡುವಂತೆ ಜನರನ್ನು ಕೇಳುತ್ತಿದ್ದಾರೆ ಎಂದು ಟ್ರಸ್ಟ್ ಸದಸ್ಯ ಡಾ.ಅನಿಲ್ ಮಿಶ್ರಾ ಹೇಳಿದರು. ಬೌನ್ಸ್ ಆಗಿರುವ ಚೆಕ್ ಗಳ ಪೈಕಿ ಸುಮಾರು 2,000 ಅಯೋಧ್ಯೆಯಿಂದಲೇ ಸಂಗ್ರಹಿಸಲಾಗಿತ್ತು.

English summary
About 15,000 bank cheques with a face value of Rs 22 crore, collected by the Vishva Hindu Parishad for the construction of the Ram temple in Ayodhya, have bounced.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X