• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಸ್ತೆ, ವಿಮಾನದಲ್ಲಿ ನಮಾಜ್ ಮಾಡಿದರೆ ಮಸೀದಿ ಎನ್ನಲು ಸಾಧ್ಯವೇ?

|
Google Oneindia Kannada News

ಲಕ್ನೋ, ಮೇ 22: ವಿಶ್ವ ಹಿಂದೂ ಪರಿಷತ್‌ನ ರಾಷ್ಟ್ರೀಯ ವಕ್ತಾರ ವಿಜಯ್ ಶಂಕರ್ ತಿವಾರಿ ಜ್ಞಾನವಾಪಿ ಮಸೀದಿ ವಿಚಾರದ ಕುರಿತು ಮಾತನಾಡಿದ್ದಾರೆ. "ನೀವು ರಸ್ತೆಯಲ್ಲಿ ನಮಾಜ್ ಮಾಡಿದರೆ ರಸ್ತೆಯನ್ನು ಮಸೀದಿ ಎಂದು ಕರೆಯಲು ಆಗುತ್ತದೆಯೇ?. ವಿಮಾನದಲ್ಲಿ ನಮಾಜ್ ಮಾಡಿದರೆ ಅದನ್ನು ಮಸೀದಿ ಎನ್ನಲಾಗುತ್ತದೆಯೇ?" ಎಂದು ಪ್ರಶ್ನಿಸಿದ್ದಾರೆ.

ವಾರಣಾಸಿಯ ಜ್ಞಾನವಾಪಿ ಮಸೀದಿ ಕಳೆದ ಕೆಲವು ದಿನಗಳಿಂದ ಚರ್ಚೆಯ ವಿಷಯವಾಗಿದೆ. "ನ್ಯಾಯಾಲಯದಿಂದ ಯಾವುದೇ ಕ್ರಮ ಕೈಗೊಳ್ಳಲಾಗಿದ್ದರೂ ಸಂವಿಧಾನದ ಪ್ರಕಾರವೇ ಕ್ರಮ ತೆಗೆದುಕೊಂಡಿರುತ್ತಾರೆ. ಮಸೀದಿಯಲ್ಲಿ ಸಮೀಕ್ಷೆ ನಡೆಯುತ್ತಿದ್ದರೆ ನ್ಯಾಯಾಲಯದ ಆದೇಶದ ನಂತರವೇ ಮಾಡಲಾಗಿದೆ" ಎಂದು ವಿಜಯ್ ಶಂಕರ್ ತಿವಾರಿ ಹೇಳಿದರು.

"ವಾರಣಾಸಿ ನ್ಯಾಯಾಲಯದ ಆದೇಶದ ನಂತರ ಮಸೀದಿಯೊಳಗೆ ಸಮೀಕ್ಷೆ ನಡೆಸಲಾಯಿತು. ಸಮೀಕ್ಷೆಯಲ್ಲಿ ಸಿಕ್ಕ ಕಲ್ಲನ್ನು ಶಿವಲಿಂಗ ಎಂದು ಹಿಂದೂ ಧರ್ಮದವರು ಎಲ್ಲಿ ಹೇಳುತ್ತಿದ್ದಾರೆ?. ಸಿಕ್ಕಿರುವುದು ಶಿವಲಿಂಗವಲ್ಲ ಕೇವಲ ಕಾರಂಜಿ ಎಂದು ಮುಸ್ಲಿಂಮರು ಏಕೆ ಹೇಳುತ್ತಿದ್ದಾರೆ?" ಎಂದರು.

1991ರಲ್ಲಿ ಪೂಜೆ ಮಾಡಲಾಗುತ್ತಿತ್ತು; "ಶುಕ್ರವಾರದ ಪ್ರಾರ್ಥನೆಗೆ ಸುಪ್ರೀಂಕೋರ್ಟ್‌ನಿಂದ 20 ಜನರ ಸಂಖ್ಯೆಯನ್ನು ನಿಗದಿಪಡಿಸಲಾಗಿದೆ. ಆದರೆ 700ಕ್ಕೂ ಹೆಚ್ಚು ಜನರು ನಮಾಜ್‌ಗೆ ತಲುಪಿದ್ದಾರೆ. 1945 ಮತ್ತು 1991ರಲ್ಲಿ ಇಲ್ಲಿ ಪೂಜೆ ನಡೆಯುತ್ತಿತ್ತು. ನಂತರಲ್ಲಿ ಅದನ್ನು ಸರ್ಕಾರ ಮುಚ್ಚಿತು" ಎಂದು ಹೇಳಿದರು.

"ಇದು ಬಾಬಾ ವಿಶ್ವನಾಥ್ ಅವರ ಸ್ಥಳ ಎಂದು ನಾನು ಹೇಳುತ್ತೇನೆ. ಪೂಜೆಗೆ ಅನುಮತಿ ನೀಡಬೇಕು. ಇಡೀ ಜಾಗ ಬಾಬಾ ವಿಶ್ವನಾಥ್ ಅವರದ್ದು, ದೇವಸ್ಥಾನಕ್ಕೆ ಸೇರಿದ್ದು, ಹಿಂದೂಗಳಿಗೆ ಸಿಗಬೇಕಾಗಿದೆ" ಎಂದು ವಿಜಯ್ ಶಂಕರ್ ತಿವಾರಿ ತಿಳಿಸಿದರು.

Do You Call A Mosque If Namaz Offers In Road And Plane Aska VHps Vijay Shankar Tiwari
English summary
Vishwa Hindu Parishada (VHP) spokesperson Vinay Shankar Tiwari statement on Gyanavapi mosque issue. Do you call the road and flight if offerd Namaz.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X