ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರ‍್ಯಾಲಿಯಲ್ಲಿ ಮೈಕ್ ಮುಂದೆ ಭಕ್ತಿಗೀತೆ ಹಾಡೋಕಾಗುತ್ತಾ? ಆಯೋಗದ ವಿರುದ್ದ ಯೋಗಿ ವಾಗ್ದಾಳಿ

|
Google Oneindia Kannada News

Recommended Video

ಚುನಾವಣಾ ಆಯೋಗದ ವಿರುದ್ಧ ತಿರುಗಿಬಿದ್ದ ಯೋಗಿ ಆದಿತ್ಯನಾಥ್..!? | Oneindia Kannada

ಲಕ್ನೋ, ಮೇ 4 (ಎಎನ್ಐ) : ಚುನಾವಣೆ ಎಂದ ಮೇಲೆ ಅದು ರಣರಂಗ ಇದ್ದಂತೆ, ಅಲ್ಲಿ ಆರೋಪ, ಪ್ರತ್ಯಾರೋಪ, ತಿರುಗೇಟು ಎಲ್ಲಾ ಇರಬೇಕಾಗುತ್ತದೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಚುನಾವಣಾ ಆಯೋಗದಿಂದ ಬಂದ ಮತ್ತೊಂದು ನೊಟೀಸ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಸಾರ್ವಜನಿಕ ಸಭೆಯಲ್ಲಿ ಮೈಕ್ ಹಿಡಿದು ಮಾತನಾಡುವಾಗ ನಮ್ಮ ವಿರೋಧಿಗಳ ವಿರುದ್ದ ವಾಗ್ದಾಳಿ ನಡೆಸಬೇಕು, ಅದು ಬಿಟ್ಟು ಮೈಕ್ ಮುಂದೆ ಭಜನೆ ಮಾಡಲು ಆಗುತ್ತಾ ಎಂದು ಯೋಗಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

Dais is to attack Opposition, not sing bhajans’, says Adityanath on Election Commission notice

ಯೋಗಿ ಆದಿತ್ಯನಾಥ್ ಬಳಿ ದೂರು ಹೇಳಲು ಬಂದ ಗೂಳಿ!ಯೋಗಿ ಆದಿತ್ಯನಾಥ್ ಬಳಿ ದೂರು ಹೇಳಲು ಬಂದ ಗೂಳಿ!

ಸಮಾಜವಾದಿ ಪಕ್ಷದ ಅಭ್ಯರ್ಥಿ ಶಫಿಕುರ್ ರೆಹಮಾನ್ ಬರ್ಕ್ ಅವರನ್ನು 'ಬಾಬರ್ ಕೀ ಔಲಾದ್' ಎಂದು ಏಪ್ರಿಲ್ 19ರಂದು ಉತ್ತರಪ್ರದೇಶದ ಸಂಭಲ್ ನಲ್ಲಿ ನಡೆದ ರ‍್ಯಾಲಿಯಲ್ಲಿ ಟೀಕಿಸಿದ್ದ ಯೋಗಿ ಆದಿತ್ಯನಾಥ್ ಗೆ, ಚುನಾವಣಾ ಆಯೋಗ ನೊಟೀಸ್ ನೀಡಿತ್ತು.

ಈ ಹಿಂದೆ ನಾನು ಲೋಕಸಭಾ ಸದಸ್ಯನಾಗಿದ್ದಾಗ, ಸಮಾಜವಾದಿ ಪಕ್ಷದ ಸಂಸದರೊಬ್ಬರನ್ನು ನಿಮ್ಮ ಪೂರ್ವಜರು ಯಾರು ಎಂದು ಪ್ರಶ್ನಿಸಿದ್ದೆ, ಅದಕ್ಕೆ ಅವರು ನಾವು ಬಾಬರ್ ವಂಶಸ್ಥರು ಎನ್ನುವ ಮಾತನ್ನು ಹೇಳಿದ್ದರು. ಅದನ್ನು ಉಲ್ಲೇಖಿಸಿ ನಾನು ರ‍್ಯಾಲಿಯಲ್ಲಿ ಬಾಬರ್ ಕೀ ಔಲಾದ್ ಎನ್ನುವ ಪದವನ್ನು ಬಳಸಿದ್ದು ಎಂದು ಯೋಗಿ ಸ್ಪಷ್ಟನೆಯನ್ನು ನೀಡಿದ್ದಾರೆ.

ಚುನಾವಣಾ ಆಯೋಗ, ಬಾಬರ್ ನಮ್ಮ ವಂಶಸ್ಥರು ಎನ್ನುವವರನ್ನು ಸುಮ್ಮನೆ ಬಿಡುತ್ತದೆ, ಆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಕ್ಕೆ ನನಗೆ ನೊಟೀಸ್ ಜಾರಿ ಮಾಡುತ್ತದೆ ಎಂದು ಬೇಸರ ವ್ಯಕ್ತಪಡಿಸಿದ ಯೋಗಿ, ಬಾಬರ್ ನಮ್ಮ ದೇಶದ ಸ್ವತ್ತನ್ನೆಲ್ಲಾ ಲೂಟಿ ಮಾಡಿದ, ಬಾಬರ್ ವಂಶಸ್ಥರಿಗೆ ಅದನ್ನು ಹಿಂದಿರುಗಿಸಲು ಸಾಧ್ಯವೇ ಎಂದು ಸಮಾಜವಾದಿ ಪಕ್ಷಕ್ಕೆ ತಿರುಗೇಟು ನೀಡಿದ್ದಾರೆ.

ಈ ಹಿಂದೆ ಭಾರತೀಯ ಸೇನೆಯನ್ನು 'ಮೋದಿ ಕೀ ಸೇನಾ' ಎನ್ನುವ ಹೇಳಿಕೆಯನ್ನು ನೀಡಿದ್ದ ಯೋಗಿ ಆದಿತ್ಯನಾಥ್ ಗೆ , ಚುನಾವಣಾ ಆಯೋಗ 72ಗಂಟೆಗಳ ಚುನಾವಣಾ ಪ್ರಚಾರದ ನಿರ್ಬಂಧ ಹೇರಿತ್ತು.

English summary
Uttar Pradesh Chief Minister Adityanath defended his remark against a Samajwadi Party candidate, saying one goes on a dais to hit out at the Opposition and not to sing devotional songs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X